ನವದೆಹಲಿ(ಜು.20): ಭಾರತದ ಮೂರನೇ ಅತಿದೊಡ್ಡ ಐಟಿ ಕಂಪನಿ ವಿಪ್ರೋ ಜೂನ್ 2018 ರ ತ್ರೈಮಾಸಿಕ ಅವಧಿಯಲ್ಲಿ 2,120.8 ಕೋಟಿ ರೂ. ನಿವ್ವಳ ಲಾಭದಲ್ಲಿ ಶೇ. 2 ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,076.7 ಕೋಟಿ ರೂಪಾಯಿಗಳಷ್ಟು ನಿವ್ವಳ ಲಾಭ ಗಳಿಸಿತ್ತು. ಏಪ್ರಿಲ್-ಜೂನ್ 2018 ತ್ರೈಮಾಸಿಕದಲ್ಲಿ ಒಟ್ಟು 2,093.8 ಕೋಟಿ ರೂ. ಲಾಭ ಗಳಿಸಿದೆ.

ಇದು ಶೇಕಡಾ 0.3 ರಿಂದ 2.3 ರಷ್ಟು ಬೆಳವಣಿಗೆಯಾಗಿದೆ, ನಮ್ಮ ಡೇಟಾ ಸೆಂಟರ್ ಸೇವೆ ವ್ಯವಹಾರದ ವಿತರಣೆಯ ಪರಿಣಾಮವನ್ನು ಹೊರತುಪಡಿಸಿ ಜೂನ್ 30, 2018 ರ ಅಂತ್ಯಕ್ಕೆ ಸಕಾರಾತ್ಮಕವಾಗಿ ಮುಕ್ತಾಯಗೊಂಡಿದೆ ಎಂದು ವಿಪ್ರೊ ಹೇಳಿದೆ.

ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ವಿಶೇಷವಾಗಿ ಉತ್ತರ ಅಮೆರಿಕಾ ಮತ್ತು ಬಿಎಫ್ಎಸ್ಐಗಳಲ್ಲಿ ನಾವು ಹೂಡಿಕೆ ಮಾಡಲು ಸಿದ್ಧವಿದ್ದು, ಡಿಜಿಟಲ್ ಉದ್ಯಮದಲ್ಲಿ ನಮ್ಮ ಹೂಡಿಕೆಯು ಪ್ರಮುಖ ಉದ್ಯಮ ವಲಯಗಳಲ್ಲಿ ಭಿನ್ನತೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದು ನಮ್ಮ ಗ್ರಾಹಕ ಮಾಪನಗಳಲ್ಲಿ ಸ್ಥಿರವಾದ ಸುಧಾರಣೆಗೆ ಕಾರಣವಾಗಿದೆ ಎಂದು ವಿಪ್ರೋ ಸಿಇಒ ಅಬಿದಾಲಿ ಝೆಡ್ ನೀಮಚ್ವಾಲಾ ಹೇಳಿದ್ದಾರೆ.