ನವದೆಹಲಿ(ಜೂ.06): ಜಾಗತಿಕ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್ ಜಿ ಕೆಳಗಿಳಿಯಲಿದ್ದಾರೆ. 

ಮುಂಬರುವ ಜು.30ಕ್ಕೆ ಅಜೀಂ ಪ್ರೇಮ್ ಜಿ ತಮ್ಮ ಸ್ಥಾನದಿಂದ ನಿವೃತ್ತರಾಗುತ್ತಿದ್ದು, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಅಜೀಂ ಪ್ರೇಮ್ ಜಿ ಪುತ್ರ ರಷೀದ್ ಪ್ರೇಮ್ ಜಿ ಸಂಸ್ಥೆಯ ನೂತನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂಶ್ಥೆ ಸ್ಪಷ್ಟಪಡಿಸಿದೆ.

ಅದರಂತೆ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅಬಿಧಾಲಿ ನೀಮಚ್ವಾಲಾ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮರು-ನೇಮಕಗೊಳ್ಳಿದ್ದಾರೆ. 

ಸಂಸ್ಥೆಯ ಈ ಎಲ್ಲಾ ನಿರ್ಧಾರಗಳೂ ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.