Asianet Suvarna News Asianet Suvarna News

ಮೊದಲ ದಿನವೇ ಕರ್ನಾಟಕಕ್ಕೆ ಬಂಪರ್ ಕೊಡುಗೆ: ಒಂದು ಲಕ್ಷ ಕೋಟಿ ಹೂಡಿಕೆ ಮಾಡಲಿರುವ ಅದಾನಿ ಗ್ರೂಪ್

ವೇರ್‌ಹೌಸ್, ಡಿಜಿಟಲ್, ಸಿಮೆಂಟ್ ಸೇರಿದಂತೆ ಹಲವು ಸಂಸ್ಥೆ ಮೇಲೆ ಹೂಡಿಕೆ: ಗೌತಮ್‌ ಅದಾನಿ

Will be Invest Rs 1 lakh Crore in Karnataka Says Karan Gautam Adani grg
Author
First Published Nov 2, 2022, 12:16 PM IST

ಬೆಂಗಳೂರು(ನ.02): ರಾಜ್ಯದಲ್ಲಿ 7 ವರ್ಷದಲ್ಲಿ ಒಂದು ಲಕ್ಷ ಕೋಟಿ ಹೂಡಿಕೆ ಮಾಡೋದಾಗಿ ಅದಾನಿ ಗ್ರೂಪ್‌ನ ಸಿಇಒ ಕರಣ್ ಗೌತಮ್‌ ಅದಾನಿ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಅದಾನಿ ಗ್ರೂಪ್ ಮೇಲೆ ಹೂಡಿಕೆ ಮಾಡಲಾಗುವುದು. ವೇರ್‌ಹೌಸ್, ಡಿಜಿಟಲ್, ಸಿಮೆಂಟ್ ಸೇರಿದಂತೆ ಹಲವು ಸಂಸ್ಥೆ ಮೇಲೆ ಹೂಡಿಕೆ ಮಾಡೋದಾಗಿ ಗೌತಮ್‌ ಅದಾನಿ ಘೋಷಿಸಿದ್ದಾರೆ.

ಇಂದು(ಬುಧವಾರ) ನಗರದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕ ಬಂಪರ್ ಕೊಡುಗೆಯನ್ನ ಘೋಷಿಸಿದ್ದಾರೆ. ಈ ಮೂಲಕ ಸಮಾವೇಶದ ಮೊದಲ ದಿನವೇ ಬಂಪರ್ ಬಂಡವಾಳ ಹರಿದು ಬಂದಿದೆ.  

Invest Karnataka Summit 2022: ಬೆಂಗಳೂರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ JSW ಅದ್ಯಕ್ಷ ಸಜ್ಜನ್ ಜಿಂದಾಲ್ ಅವರು, JSW ಗ್ರೂಪ್‌ ಮುಂದಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಒಂದು‌ ಲಕ್ಷ ಕೋಟಿ‌ ಹೂಡಿಕೆ ಮಾಡಲಿದೆ ಅಂತ ಹೇಳಿದ್ದಾರೆ. 
ಇನ್ನು ರಾಜ್ಯದಲ್ಲಿ 50 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಸ್ಟೈರ್ಲೈಟ್ ಪವರ್ ಸಿಇಓ ಪ್ರತೀಕ್ ಅಗರ್ವಾಲ್ ಘೋಷಣೆ ಮಾಡಿದ್ದಾರೆ. ಇಂಧನ ಕ್ಷೇತ್ರ ಹಾಗೂ ಗ್ರೀನ್ ಎನರ್ಜಿಯ ಸಂಶೋಧನೆಯಲ್ಲಿ ಹೂಡಿಕೆ ಮಾಡೋದಾಗಿ ಹೇಳಿದ್ದಾರೆ. 

ಕರ್ನಾಟಕದ ನೆಲ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತಮ: ಪ್ರಧಾನಿ ಮೋದಿ

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಆರಂಭಗೊಂಡ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಹಾಗೂ ಬೆಂಗಳೂರು ನಗರ ಹೂಡಿಕೆ ಕ್ಷೇತ್ರದಲ್ಲಿನ ವ್ಯಾಪಕ ಅವಕಾಶಗಳ ಬಗ್ಗೆ ಮಾತನಾಡಿದರು. ಬುಧವಾರ ಕನ್ನಡಿಗರು ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡಿದ್ದಾರೆ. ಕರ್ನಾಟಕದ ನೆಲ ತಂತ್ರಜ್ಞಾನ ಉದ್ಯಮ ಕ್ಷೇತ್ರಕ್ಕೆ ಅದ್ಬುತವಾಗಿದೆ. ಇಂದು ಬ್ರ್ಯಾಂಡ್ ಬೆಂಗಳೂರು ಜಾಗತಿಕವಾಗಿ ಆದ್ಯತೆ ಪಡೆದುಕೊಂಡಿದೆ ಎಂದು ಅವರು ಹೇಳಿದ್ದರು. 

ಕರ್ನಾಟಕ ಶ್ರೀಮಂತ ಸಂಸ್ಕೃತಿ ಹೊಂದಿರುವ ನಾಡು. ಭಾಷೆಯನ್ನೇ ಕನ್ನಡಿಗರು ಜೀವಾಳವನ್ನಾಗಿಸಿಕೊಂಡಿದ್ದಾರೆ. ಕರ್ನಾಟಕ ಮಣ್ಣು ಎಲ್ಲಕ್ಕಿಂತ ಸುಂದರ. ರಾಜ್ಯಗಳು ಅಭಿವೃದ್ಧಿ ಹೊಂದಿದಲ್ಲಿ ಮಾತ್ರವೇ ದೇಶ ಅಭಿವೃದ್ಧಿ ಕಾಣುತ್ತದೆ ಎನ್ನುವ ತತ್ವದಲ್ಲಿ ನಮ್ಮ ಸರ್ಕಾರ ನಂಬಿಕೆ ಇರಿಸಿದೆ. ಆ ನಿಟ್ಟಿನಲ್ಲಿ ಕೋವಿಡ್‌ನ ಅನಿಶ್ಚಿತತೆಯ ಕಾಲದಲ್ಲೂ ರಾಜ್ಯಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಗಮನ ನೀಡಿದ್ದೆವು.  ಹೊಸ ಕಾನೂನಿನ ಬದಲು ಇದ್ದ ಕಾನೂನನ್ನೇ ಸರಿಪಡಿಸಿದ್ದೇವೆ ಎಂದು ಮೋದಿ ಹೇಳಿದರು. ತೆರಿಗೆ ಸಂಗ್ರಹ, ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಿದ್ದೇವೆ. ರಕ್ಷಣಾ ಕ್ಷೇತ್ರ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯ ನಿಯಮವನ್ನು ವ್ಯಾಪಕವಾಗಿ ಬದಲಾವಣೆ ಮಾಡಿದ್ದೇವೆ ಎಂದರು.

ಕರ್ನಾಟಕದ ಸಂಸ್ಕೃತಿ ಉನ್ನತ ಮಟ್ಟದ್ದು, ಕನ್ನಡಿಗರ ಸ್ವಾಭಿಮಾನ ದೊಡ್ಡದು. ಭಾರತದ ಪ್ರಗತಿಯಾಗಲು ರಾಜ್ಯಗಳು ಮೊದಲು ಪ್ರಗತಿ ಹೊಂದಬೇಕಿದೆ. ಜಗತ್ತಿನ ದೊಡ್ಡ ದೊಡ್ಡ ಕಂಪೆನಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿವೆ. ಸಮಾವೇಶದಿಂದ ಉದ್ಯೋಗ ಸೃಷ್ಟಿಯಾಗಲಿದೆ, ಸಾವಿರಾರು‌ ಕೋಟಿ ಹೂಡಿಕೆ ಆಗಲಿದೆ. ಕೋವಿಡ್ ಪರಿಣಾಮದಿಂದ ಈಗಲೂ ಜಗತ್ತು ಹೊಯ್ದಾಡುತ್ತಿದೆ. ಎಲ್ಲೆಲ್ಲೂ ಅನಿಶ್ಚಿತತೆ ಕಾಣುತ್ತಿದೆ. ಭಾರತದಲ್ಲೂ ಕೋವಿಡ್ ಪರಿಣಾಮ ಕಾಣುತ್ತಿದೆ. ಇವತ್ತು ಜಗತ್ತು ಭಾರತದ‌ದಿಂದ ಸಾಕಷ್ಟು ನಿರೀಕ್ಷೆ ಇಟ್ಟಿದೆ ಎಂದು ತಿಳಿಸಿದ್ದರು.  
 

Follow Us:
Download App:
  • android
  • ios