Asianet Suvarna News Asianet Suvarna News

ಹೆಂಡತಿಗೆ ನಿಮ್ಮ ಸಂಬಳದ ಬಗ್ಗೆ ಹೇಳಲ್ವಾ..? RTI ಮೂಲಕ ಗಂಡನ ಆದಾಯ ವಿವರ ಪಡೆದ ಪತ್ನಿ..!

ಕೇಂದ್ರ ಮಾಹಿತಿ ಆಯೋಗ, ತನ್ನ ಇತ್ತೀಚಿನ ಆದೇಶದಲ್ಲಿ, ಮಹಿಳೆಗೆ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ಸಾಮಾನ್ಯ ವಿವರಗಳನ್ನು 15 ದಿನಗಳೊಳಗೆ ಒದಗಿಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.

wife gets husbands income details using right to information ash
Author
First Published Oct 3, 2022, 3:57 PM IST

ಹಲವರಿಗೆ ತಮ್ಮ ಸಂಬಳದ (Salary) ಬಗ್ಗೆ ಇತರರಿಗೆ ಹೇಳಲು ಇಷ್ಟಪಡಲ್ಲ. ಅಂತಹ ಮಾಹಿತಿಯನ್ನು ಸಾಮಾನ್ಯವಾಗಿ ಕುಟುಂಬದ ಸದಸ್ಯರಿಗೆ ಮಾತ್ರ ಬಹಿರಂಗಪಡಿಸಲಾಗುತ್ತದೆ. ಆದರೂ, ಹಲವು ಪತಿಯರು ತಮ್ಮ ಪತ್ನಿಗೂ ಸಹ ತಮ್ಮ ಸಂಬಳದ ವಿವರಗಳನ್ನು ನೀಡಿರುವುದಿಲ್ಲ. ಅವರ ಮದುವೆಯಲ್ಲಿ ವಿವಾದ, ಗಂಡ - ಹೆಂಡತಿ ನಡುವೆ ಜಗಳ ಹೆಚ್ಚಿದ್ದರಂತೂ ಸಂಪಾದನೆಯ ವಿವರ ನೀಡುವುದೇ ಇಲ್ಲ. ಇನ್ನು, ನೀವು ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದಾಗ, ಭಾವನಾತ್ಮಕ ಸವಾಲುಗಳ ಜೊತೆಗೆ ನಿಮ್ಮ ಹಣಕಾಸಿನ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಆಸ್ತಿಗಳನ್ನು ಇಬ್ಬರ ನಡುವೆ ವಿಂಗಡಿಸಲಾಗುತ್ತದೆ. ಅಲ್ಲದೆ, ವಿಚ್ಛೇದನವು ಮ್ಯೂಚುವಲ್‌ (Mutual) ಆಗಿಲ್ಲದಿದ್ದಾಗ, ಕೆಲವು ಸಂದರ್ಭಗಳಲ್ಲಿ, ಹೆಂಡತಿಯು ತನ್ನ ಪತಿಯಿಂದ ಆದಾಯದ ವಿವರಗಳನ್ನು ಕೇಳಬಹುದು ಮತ್ತು ಜೀವನಾಂಶವನ್ನೂ  ಕೇಳಬಹುದು.

ಇನ್ನು, ಒಂದು ವೇಳೆ ಪತಿ ತಮ್ಮ ಆದಾಯದ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರೆ, ಹೆಂಡತಿ ಆಗಲೂ ಸಹ ಇತರ ಮಾರ್ಗಗಳ ಮೂಲಕ ಪ್ರವೇಶ  ಪಡೆಯಬಹುದು. ಅದು ಹೇಗೆ ಅಂತೀರಾ.. ಇಲ್ಲೊಬ್ಬರು, ಮಹಿಳೆ RTI  (Right to Information) (ಮಾಹಿತಿ ಹಕ್ಕು ) ಅರ್ಜಿ ಸಲ್ಲಿಸುವ ಮೂಲಕ ತನ್ನ ಪತಿಯ ಆದಾಯದ ವಿವರಗಳನ್ನು ಕೋರಿರುವ ಇತ್ತೀಚಿನ ಪ್ರಕರಣವೊಂದು ವರದಿಯಾಗಿದೆ. 

ಇದನ್ನು ಓದಿ: ತಹಶೀಲ್ದಾರ್‌ಗೆ ಎಷ್ಟು ಮದ್ವೆ ಆಗಿದೆ, ಯಾರ ಜೊತೆ ಸಂಸಾರ ಮಾಡ್ತಿದ್ರು? ಅಂತ ಕೇಳಿದ ಆರ್‌ಟಿಐ ಕಾರ್ಯಕರ್ತ ಅಂದರ್

ಕೇಂದ್ರ ಮಾಹಿತಿ ಆಯೋಗ (Central Information Commission) (ಸಿಐಸಿ), ತನ್ನ ಇತ್ತೀಚಿನ ಆದೇಶದಲ್ಲಿ, ಮಹಿಳೆಗೆ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ಸಾಮಾನ್ಯ ವಿವರಗಳನ್ನು 15 ದಿನಗಳೊಳಗೆ ಒದಗಿಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.

ಪ್ರಕರಣದ ವಿವರ..
ಸಂಜು ಗುಪ್ತಾ ಎಂಬ ಮಹಿಳೆ ತನ್ನ ಸಂಗಾತಿಯ ಆದಾಯದ ವಿವರಗಳನ್ನು ಕೋರಿ ಆರ್‌ಟಿಐ ಸಲ್ಲಿಸಿದ ನಂತರ ಈ ಆದೇಶ ಬಂದಿದೆ. ಆರಂಭದಲ್ಲಿ, ಪತಿ ಇದಕ್ಕೆ ಒಪ್ಪಿಗೆ ನೀಡದ ಕಾರಣ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (Central Public Information Officer) (CPIO), ಆದಾಯ ತೆರಿಗೆ ಅಧಿಕಾರಿ, ಬರೇಲಿಯ ಆದಾಯ ತೆರಿಗೆ ಇಲಾಖೆ ಕಚೇರಿ ವಿವರಗಳನ್ನು ನೀಡಲು ನಿರಾಕರಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ. 

ನಂತರ ಮಹಿಳೆ ಮೇಲ್ಮನವಿ ಸಲ್ಲಿಸುವ ಮೂಲಕ ಮೊದಲ ಮೇಲ್ಮನವಿ ಪ್ರಾಧಿಕಾರದ (Firs Appellate Authority) (ಎಫ್‌ಎಎ) ಸಹಾಯವನ್ನು ಕೋರಿದರು. ಆದರೆ, FAA ಸಹ CPIO ನ ಆದೇಶವನ್ನು ಎತ್ತಿಹಿಡಿದಿದೆ ಎಂದೂ ವರದಿ ಹೇಳಿದೆ. ಬಳಿಕ, ಕೇಂದ್ರೀಯ ಮಾಹಿತಿ ಆಯೋಗ (CIC) ಕ್ಕೆ ಸಂಜು ಗುಪ್ತಾ ಎರಡನೇ ಮೇಲ್ಮನವಿ ಸಲ್ಸಿದ್ದರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: PM Modi Food ಸರ್ಕಾರದಿಂದ ಒಂದೂ ರೂಪಾಯಿ ಪಡೆದಿಲ್ಲ, ಪ್ರಧಾನಿ ಮೋದಿ ಭರಿಸುತ್ತಾರೆ ಆಹಾರದ ವೆಚ್ಚ!

ನಂತರ ಕೇಂದ್ರ ಮಾಹಿತಿ ಆಯೋಗವು ತನ್ನ ಹಿಂದಿನ ಕೆಲವು ಆದೇಶಗಳು ಮತ್ತು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ತೀರ್ಪುಗಳನ್ನು ಪರಿಶೀಲಿಸಿತು ಮತ್ತು ಸೆಪ್ಟೆಂಬರ್ 19, 2022 ರಂದು ಪತಿಯ ಸಂಬಳದ ವಿವರಗಳನ್ನು ನೀಡುವಂತೆ ತನ್ನ ಆದೇಶವನ್ನು ನೀಡಿತು. ಹಾಗೂ, ಈ ಆದೇಶ ಸ್ವೀಕರಿಸಿದ ದಿನಾಂಕದಿಂದ 15 ದಿನಗಳ ಒಳಗೆ ಸಾರ್ವಜನಿಕ ಪ್ರಾಧಿಕಾರದಲ್ಲಿ ಲಭ್ಯವಿರುವ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ವಿವರಗಳನ್ನು ಪತ್ನಿಗೆ ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗವು CPIO ಗೆ ನಿರ್ದೇಶಿಸಿದೆ.

Follow Us:
Download App:
  • android
  • ios