Asianet Suvarna News Asianet Suvarna News

ಪಂಜಾಬ್-ಮಹಾರಾಷ್ಟ್ರ ಸಹಕಾರ ಬ್ಯಾಂಕ್ ತಾತ್ಕಾಲಿಕ ಬಂದ್; ಮುಂದೇನು?

ಕೆಲ ವರ್ಷಗಳಿಂದ ಪಂಜಾಬ್- ಮಹಾರಾಷ್ಟ್ರ ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರಗಳು ಹಾಗೂ ಅನುತ್ಪಾದಕ ಆಸ್ತಿಯ ಬಗ್ಗೆ ಬ್ಯಾಂಕ್‌ ಸರಿಯಾಗಿ ಆರ್‌ಬಿಐಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ವಾರದ ಹಿಂದೆ ಆರ್‌ಬಿಐ ಈ ಬ್ಯಾಂಕ್‌ಗೆ ತನ್ನ ವ್ಯವಹಾರವನ್ನು 6 ತಿಂಗಳ ಮಟ್ಟಿಗೆ ನಿಲ್ಲಿಸುವಂತೆ ಆದೇಶಿಸಿದೆ. 

Why RBI put restrictions on PMC Bank what happens to your deposits here are the details
Author
Bengaluru, First Published Sep 28, 2019, 3:31 PM IST

ಸಹಕಾರ ತತ್ವದಡಿ ಕಾರ‍್ಯನಿರ್ವಹಿಸುತ್ತಿದ್ದ ದೇಶದ ಪ್ರಮುಖ ಬ್ಯಾಂಕ್‌ ಒಂದು ಈಗ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ನಿರ್ದೇಶನದಂತೆ 6 ತಿಂಗಳು ತನ್ನ ಕಾರ‍್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಪಂಜಾಬ್‌- ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ (ಪಿಎಂಸಿ) ತನ್ನ ಅವ್ಯವಹಾರ, ಆರ್‌ಬಿಐ ನಿರ್ದೇಶನವನ್ನು ನಿಯಮಿತವಾಗಿ ಅನುಸರಿಸದೇ ಇರುವುದು ಸೇರಿದಂತೆ ಹಲವು ಕಾರಣಗಳಿಗೆ ತಾತ್ಕಾಲಿಕವಾಗಿ ಬಂದ್‌ ಆಗಿದೆ.

ATM ನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ದಿನಕ್ಕೆ 100 ರೂ ಪರಿಹಾರ!

ಅದರ ವ್ಯವಹಾರಗಳ ಒಟ್ಟು ಲೆಕ್ಕವನ್ನು ಪರಿಶೀಲನೆಗೆ ಒಳಪಡಿಸಿರುವ ಆರ್‌ಬಿಐ, ಸದ್ಯಕ್ಕೆ ಗ್ರಾಹಕರಿಗೂ ಒಂದಷ್ಟುನಿರ್ಬಂಧಗಳನ್ನು ಹೇರಿದೆ. ಹೀಗೆ ಬ್ಯಾಂಕ್‌ಗಳು ಆರ್ಥಿಕ ಸಮಸ್ಯೆಗೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಆದರೆ ಇದರಲ್ಲಿ ಹಣ ಇಟ್ಟಗ್ರಾಹಕರ ಸ್ಥಿತಿ ಮಾತ್ರ ಆಯೋಮಯವಾಗಿದೆ.

ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಇರುವ ರಕ್ಷಣೆಗಳೇನು? ಬ್ಯಾಂಕ್‌ ಮುಚ್ಚಿದರೆ ಅಥವಾ ತಾತ್ಕಾಲಿಕವಾಗಿ ನಿರ್ಬಂಧಕ್ಕೊಳಗಾದರೆ ಗ್ರಾಹಕರ ಮೇಲೆ ಏನೇನು ಪರಿಣಾಮಗಳಾಗುತ್ತವೆ? ಹಣ ಯಾವತ್ತಾದರೂ ವಾಪಸ್‌ ಸಿಗುತ್ತದೆಯೇ ಎನ್ನುವ ಬಗ್ಗೆ ಇಲ್ಲಿ ವಿವರಗಳಿವೆ.

3.80 ಲಕ್ಷ ಕೋಟಿ ಆಸ್ತಿ; ಮುಕೇಶ್ ಭಾರತದ ನಂ 1 ಶ್ರೀಮಂತ!

ಕರ್ನಾಟಕದಲ್ಲೂ ಇವೆ ಪಿಎಂಸಿ 15 ಶಾಖೆಗಳು!

ಬೆಂಗಳೂರು ಜಿಲ್ಲೆ

ಅತ್ತಿಬೆಲೆ, ಹೆಗ್ಗನಹಳ್ಳಿ ಮುಖ್ಯರಸ್ತೆ, ಮಹಾಲಕ್ಷ್ಮೇ ಲೇಔಟ್‌, ರಾಜಾಜಿನಗರ, ಅನ್ನಪೂರ್ಣೇಶ್ವರಿ ನಗರ, ಮಲ್ಲೇಶ್ವರಂ, ಕುಮಾರಸ್ವಾಮಿ ಲೇಔಟ್‌, ಬಸವೇಶ್ವರನಗರ, ವಿಜಯನಗರ

ಧಾರವಾಡ ಜಿಲ್ಲೆ

ಧಾರವಾಡ, ಹುಬ್ಬಳ್ಳಿ

ಉತ್ತರ ಕನ್ನಡ ಜಿಲ್ಲೆ

ಸಿರ್ಸಿ, ಯಲ್ಲಾಪುರ

ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ, ಸಾಗರ

ಪಿಎಂಸಿ ಬ್ಯಾಂಕ್‌ ಸಮಸ್ಯೆ ಏನು?

1984ರಲ್ಲಿ ಮುಂಬೈನ ಸಣ್ಣ ಕೋಣೆಯೊಂದರಲ್ಲಿ ಆರಂಭವಾದ ಪಂಜಾಬ್‌-ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ ಕಳೆದ 35 ವರ್ಷಗಳಲ್ಲಿ ಅಗಾಧವಾಗಿ ಬೆಳೆದು, ದೇಶದ ಏಳು ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದೆ. ಇದು ನಮ್ಮ ದೇಶದಲ್ಲಿರುವ ಐದು ಅತಿದೊಡ್ಡ ನಗರ ಸಹಕಾರ ಬ್ಯಾಂಕ್‌ಗಳಲ್ಲಿ ಒಂದು. ಸುಮಾರು 60 ಸಾವಿರ ಗ್ರಾಹಕರು ಈ ಬ್ಯಾಂಕ್‌ಗಿದ್ದಾರೆ.

ಪೆಟ್ರೋಲ್ ಬಂಕ್ ಗಳಲ್ಲಿ ಇನ್ಮುಂದೆ ಕಾರ್ಡ್ ಬಳಸಿದ್ರೆ ಡಿಸ್ಕೌಂಟ್ ಸಿಗಲ್ಲ!

ಕೆಲ ವರ್ಷಗಳಿಂದ ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರಗಳು ಹಾಗೂ ಅನುತ್ಪಾದಕ ಆಸ್ತಿಯ ಬಗ್ಗೆ ಬ್ಯಾಂಕ್‌ ಸರಿಯಾಗಿ ಆರ್‌ಬಿಐಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ವಾರದ ಹಿಂದೆ ಆರ್‌ಬಿಐ ಈ ಬ್ಯಾಂಕ್‌ಗೆ ತನ್ನ ವ್ಯವಹಾರವನ್ನು 6 ತಿಂಗಳ ಮಟ್ಟಿಗೆ ನಿಲ್ಲಿಸುವಂತೆ ಆದೇಶಿಸಿದೆ. ಅಲ್ಲದೆ ಹೊಸದಾಗಿ ಠೇವಣಿ ಇರಿಸಿಕೊಳ್ಳದಂತೆ ಹಾಗೂ ಸಾಲ ನೀಡದಂತೆಯೂ ಸೂಚಿಸಿದೆ. ಇದಕ್ಕೆ ನಿರ್ದಿಷ್ಟಕಾರಣವನ್ನು ಆರ್‌ಬಿಐ ನೀಡಿಲ್ಲ. ಆದರೆ ಪಿಎಂಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರು ತಮ್ಮ ಗ್ರಾಹಕರಿಗೆ ಪತ್ರ ಬರೆದಿದ್ದು, ಅದರಲ್ಲಿ ಬ್ಯಾಂಕ್‌ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲು ಕೆಲ ಅಕ್ರಮಗಳು ಕಾರಣ ಎಂದಷ್ಟೇ ಹೇಳಿದ್ದಾರೆ.

ಗ್ರಾಹಕರ ಕತೆಯೇನು?

ಪಿಎಂಸಿ ಬ್ಯಾಂಕ್‌ನ ಗ್ರಾಹಕರು ತಮ್ಮ ಖಾತೆಯಲ್ಲಿರಿಸಿದ (ಉಳಿತಾಯ ಖಾತೆ, ನಿಶ್ಚಿತ ಖಾತೆ, ಚಾಲ್ತಿ ಖಾತೆ ಇತ್ಯಾದಿ ಯಾವುದೇ ರೀತಿಯ ಠೇವಣಿ) ಹಣದ ಭವಿಷ್ಯವೇನು ಎಂಬುದನ್ನು ಬ್ಯಾಂಕ್‌ ಆಗಲೀ ಆರ್‌ಬಿಐ ಆಗಲೀ ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ತಾತ್ಕಾಲಿಕವಾಗಿ ಪ್ರತಿ ತಿಂಗಳು 10 ಸಾವಿರ ರು. ಮಾತ್ರ ಡ್ರಾ ಮಾಡಲು ಆರ್‌ಬಿಐ ಅವಕಾಶ ನೀಡಿದೆ. ಮುಂದೆ ಆರ್‌ಬಿಐ ಕೈಗೊಳ್ಳುವ ನಿರ್ಧಾರದ ಮೇಲೆ ಬ್ಯಾಂಕ್‌ನ ಭವಿಷ್ಯ ನಿಂತಿದೆ. ಅಲ್ಲಿಯವರೆಗೂ ಗ್ರಾಹಕರು ತಾಳ್ಮೆಯಿಂದ ಕಾಯುವುದೊಂದೇ ಮಾರ್ಗ. ಇದರಿಂದಾಗಿ ಪಿಎಂಸಿಯ ಸಾವಿರಾರು ಗ್ರಾಹಕರು ಕಷ್ಟಕ್ಕೆ ಸಿಲುಕಿದ್ದಾರೆ.

ಇದೊಂದೇ ಬ್ಯಾಂಕ್‌ನಲ್ಲಿ ತಮ್ಮೆಲ್ಲಾ ಗಳಿಕೆಯನ್ನೂ ಇರಿಸಿದ ಗ್ರಾಹಕರಂತೂ ದಿನನಿತ್ಯದ ಹಣಕಾಸು ಅಗತ್ಯಗಳನ್ನೂ ಪೂರೈಸಿಕೊಳ್ಳಲಾಗದ ಸ್ಥಿತಿಗೆ ಅನಿವಾರ್ಯವಾಗಿ ತಳ್ಳಲ್ಪಟ್ಟಿದ್ದಾರೆ. ಪಿಎಂಸಿಯಲ್ಲಿ ಚಾಲ್ತಿ ಖಾತೆ ಹೊಂದಿರುವ ವ್ಯಾಪಾರಿಗಳು ನಿತ್ಯದ ವಹಿವಾಟಿಗೆ ಹಣ ಸಿಗದೆ ಪರದಾಡುವಂತಾಗಿದೆ. ಮಕ್ಕಳ ಮದುವೆ, ಶಾಲೆ ಫೀಸು, ಆಸ್ಪತ್ರೆಯ ಖರ್ಚು, ಮನೆ ಕಟ್ಟಿಸುವ ಖರ್ಚು ಹೀಗೆ ನಾನಾ ಕಾರಣಗಳಿಗೆ ಈ ಬ್ಯಾಂಕ್‌ನಲ್ಲಿ ಇರಿಸಿದ್ದ ಹಣವನ್ನು ನಂಬಿಕೊಂಡವರು ಈಗ ಹಣ ಸಿಗದೆ ಪರದಾಡುವಂತಾಗಿದೆ.

ಪಂಜಾಬ್‌ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ (ಪಿಎಂಸಿ)

1984 ಫೆಬ್ರವರಿ 13ಕ್ಕೆ ಆರಂಭ

6 ರಾಜ್ಯಗಳಲ್ಲಿ ಕಾರಾರ‍ಯಚರಣೆ (ಮಹಾರಾಷ್ಟ್ರ-103, ಕರ್ನಾಟಕ-15, ಗೋವಾ-6, ದೆಹಲಿ-6, ಪಂಜಾಬ್‌-3 ಗುಜರಾತ್‌-2, ಮಧ್ಯಪ್ರದೇಶ-2 ಶಾಖೆಗಳು)

137 ಒಟ್ಟು ಶಾಖೆಗಳು

99.69 ಕೋಟಿ: 2018-19ರ ಪ್ರಕಾರ ನಿವ್ವಳ ಲಾಭ

1298 ಕೋಟಿ: 2019ರ ಆರ್ಥಿಕ ವರ್ಷದ ಆದಾಯ

11,617.34 ಕೋಟಿ: 2019ರ ಮಾಚ್‌ರ್‍ ವೇಳೆಗೆ ಹೊಂದಿದ್ದ ಠೇವಣಿ

8,383.33 ಕೋಟಿ: ಬ್ಯಾಂಕ್‌ ನೀಡಿರುವ ಒಟ್ಟು ಸಾಲ

1,814: ಪಿಎಂಸಿ ಬ್ಯಾಂಕ್‌ನ ನೌಕರರ ಸಂಖ್ಯೆ

ಬ್ಯಾಂಕ್‌ ಮುಚ್ಚಿಹೋದರೆ ಖಾತೆದಾರರಿಗೆ ಸಿಗೋದು 1 ಲಕ್ಷ ಮಾತ್ರ!

ರಾಷ್ಟ್ರೀಕೃತ ಬ್ಯಾಂಕ್‌, ಖಾಸಗಿ ಸ್ವಾಮ್ಯದ ಬ್ಯಾಂಕ್‌ ಅಥವಾ ಸಹಕಾರ ಬ್ಯಾಂಕ್‌ ಸೇರಿದಂತೆ ದೇಶದ ಎಲ್ಲ ಬ್ಯಾಂಕುಗಳೂ ಆರ್‌ಬಿಐ ಅಧೀನದಲ್ಲಿ ಕಾರ್ಯನಿರ್ವಹಿಸುತ್ತವೆ. ಆರ್‌ಬಿಐಗೆ ಈ ಬ್ಯಾಂಕುಗಳ ಮೇಲೆ ಎಲ್ಲ ರೀತಿಯ ಅಧಿಕಾರವಿರುತ್ತದೆ. ಕಾಲಕಾಲಕ್ಕೆ ಈ ಬ್ಯಾಂಕುಗಳು ತಮ್ಮ ಸ್ಥಿತಿಗತಿಯ ವರದಿಯನ್ನು ಆರ್‌ಬಿಐಗೆ ನೀಡಬೇಕು. ಆದರೂ ಒಮ್ಮೊಮ್ಮೆ ಅವ್ಯವಹಾರ, ನಷ್ಟಮುಂತಾದ ಕಾರಣಗಳಿಂದ ಬ್ಯಾಂಕುಗಳು ಮುಚ್ಚಿಹೋಗಬಹುದು. ಹಾಗಾದಾಗ ಪ್ರತಿಯೊಬ್ಬ ಗ್ರಾಹಕನಿಗೂ ಸಿಗುವ ಗರಿಷ್ಠ ಹಣ 1 ಲಕ್ಷ ರು. ಮಾತ್ರ! ಬ್ಯಾಂಕ್‌ನಲ್ಲಿ ಇಟ್ಟಠೇವಣಿ ಹಣಕ್ಕೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ವಿಮೆ ವ್ಯವಸ್ಥೆ ಮಾಡಿವೆ.

ಅದಕ್ಕಾಗಿ ಡೆಪಾಸಿಟ್‌ ಇನ್ಸೂರೆನ್ಸ್‌ ಆ್ಯಂಡ್‌ ಕ್ರೆಡಿಟ್‌ ಗ್ಯಾರಂಟಿ ಕಾರ್ಪೋರೇಷನ್‌ (ಡಿಐಸಿಜಿಸಿ) ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆ ಸ್ಥಾಪಿಸಲಾಗಿದೆ. ಈ ಸಂಸ್ಥೆಯು ಎಲ್ಲಾ ಬ್ಯಾಂಕುಗಳ ಗ್ರಾಹಕರಿಗೆ ವಿಮೆ ಒದಗಿಸಿರುತ್ತದೆ. ಆದರೆ, ಗ್ರಾಹಕರು ಬ್ಯಾಂಕ್‌ನಲ್ಲಿ ಇರಿಸಿದ ಅಷ್ಟೂಮೊತ್ತವನ್ನು ಈ ಸಂಸ್ಥೆ ಮರುಪಾವತಿ ಮಾಡುವುದಿಲ್ಲ. ಬದಲಿಗೆ ಉಳಿತಾಯ ಖಾತೆ, ನಿಶ್ಚಿತ ಖಾತೆ, ಚಾಲ್ತಿ ಖಾತೆ ಹೀಗೆ ಯಾವುದೇ ರೂಪದಲ್ಲಿ ಗ್ರಾಹಕ ಎಷ್ಟೇ ಹಣ ಇರಿಸಿದರೂ ಗರಿಷ್ಠ 1 ಲಕ್ಷ ರು. ಮಾತ್ರ ಮರುಪಾವತಿ ಮಾಡುತ್ತದೆ. ಉದಾಹರಣೆಗೆ, ಒಂದು ನಿರ್ದಿಷ್ಟಬ್ಯಾಂಕಿನ ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿ ಖಾತೆಯಲ್ಲಿ ನೀವು 22 ಲಕ್ಷ ರು. ಇರಿಸಿದ್ದು, ಆ ಬ್ಯಾಂಕ್‌ ಮುಚ್ಚಿಹೋದರೆ ನಿಮಗೆ 1 ಲಕ್ಷ ರು. ವಾಪಸ್‌ ಸಿಗುತ್ತದೆ.

SBI ಕ್ಯಾಶ್ ವಿತ್ ಡ್ರಾ ಲಿಮಿಟ್; ಒಂದೊಂದು ಕಾರ್ಡ್ ಗೆ ಒಂದೊಂದು ಮೆರಿಟ್!

ವಿಮೆ ಹಣ ಸಿಗೋದು ಹೇಗೆ?

ಡಿಐಸಿಜಿಐನಲ್ಲಿ ಎಲ್ಲ ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್‌ಗಳು ಠೇವಣಿ ಇಟ್ಟು ವಿಮೆ ಮಾಡಿಸಲೇಬೇಕು. ಪ್ರಾಥಮಿಕ ಸಹಕಾರ ಸಂಘಗಳಿಗೆ ಮಾತ್ರ ವಿನಾಯಿತಿ ಇರುತ್ತದೆ. ಹೀಗೆ ಮಾಡಿಸಿದ ವಿಮೆಗೆ ಆ ಬ್ಯಾಂಕ್‌ನ ಪ್ರತಿಯೊಬ್ಬ ಗ್ರಾಹಕನೂ ಫಲಾನುಭವಿ ಆಗಿರುತ್ತಾನೆ. ಉಳಿತಾಯ ಖಾತೆ (ಸೇವಿಂಗ್ಸ್‌), ಕರೆಂಟ್‌ ಅಕೌಂಟ್‌, ನಿಶ್ಚಿತ ಠೇವಣಿ (ಡೆಪಾಸಿಟ್‌) ಇನ್ನಿತರ ಯಾವುದೇ ಖಾತೆಯಲ್ಲಿ ಹಣ ಇಟ್ಟರೂ .1 ಲಕ್ಷದವರೆಗೆ ವಿಮೆ ಸಿಗುತ್ತದೆ. ಈ ಸೌಲಭ್ಯ ಬ್ಯಾಂಕ್‌ ಶಾಶ್ವತವಾಗಿ ಮುಚ್ಚಿದರಷ್ಟೇ ಅನ್ವಯಿಸುತ್ತದೆ. ಸದ್ಯದ ಮಟ್ಟಿಗೆ ಪಿಎಂಸಿ ಗ್ರಾಹಕರಿಗೆ ಈ ಹಣ ಸಿಗುವುದಿಲ್ಲ. ಏಕೆಂದರೆ ಬ್ಯಾಂಕ್‌ ಮುಚ್ಚಿಲ್ಲ.

ಒಂದೇ ಬ್ಯಾಂಕ್‌ನ ಬೇರೆ ಶಾಖೆಯಲ್ಲಿ ಖಾತೆ ಇದ್ದರೆ ವಿಮೆ ಸಿಗುತ್ತಾ?

ಗ್ರಾಹಕರೊಬ್ಬರು ಒಂದೇ ಬ್ಯಾಂಕ್‌ನ ಬೇರೆ ಶಾಖೆಗಳಲ್ಲಿ ಪ್ರತ್ಯೇಕ ಖಾತೆ ಹೊಂದಿದ್ದರೂ ಅವರಿಗೆ ಒಟ್ಟು 1 ಲಕ್ಷ ರು. ಮಾತ್ರ ಸಿಗುತ್ತದೆ. ಎರಡು ಖಾತೆ ಇದ್ದಾಕ್ಷಣ ಅವರಿಗೆ ಪ್ರತ್ಯೇಕವಾಗಿ ವಿಮೆ ಸಿಗುವುದಿಲ್ಲ. ಆದರೆ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದು, 2 ಬ್ಯಾಂಕ್‌ಗಳೂ ಸ್ಥಗಿತಗೊಂಡರೆ ಗ್ರಾಹಕರ ಎರಡೂ ಖಾತೆಗಳೂ ಕೂಡ ಪ್ರತ್ಯೇಕ ವಿಮೆಗೆ ಒಳಪಟ್ಟಿರುತ್ತವೆ. ಆದ್ದರಿಂದ ಅವರಿಗೆ ಪ್ರತ್ಯೇಕವಾಗಿ ವಿಮೆಯ ಹಣ ಸಿಗುತ್ತದೆ.

ಒಂದೇ ಖಾತೆ, ಜಂಟಿ ಖಾತೆ ಇದ್ದಾಗ?

ಒಂದೇ ಬ್ಯಾಂಕ್‌ನಲ್ಲಿ ಗ್ರಾಹಕನೊಬ್ಬ ಏಕ ಖಾತೆ ಜೊತೆಗೆ ತನ್ನ ಜೊತೆಗಾರರೊಂದಿಗೆ ಮಾಡಿಸಿದ ಜಂಟಿ ಖಾತೆಗೆ ಪ್ರತ್ಯೇಕವಾಗಿ ವಿಮೆ ಸಿಗುತ್ತದೆ.

ಎಸ್‌ಐಪಿ, ಇಎಂಐ ವ್ಯವಸ್ಥೆಗಳ ಗತಿ ಏನು?

ಗ್ರಾಹಕರು ಕೆಲವೊಂದು ಕಾರ‍್ಯಗಳಿಗೆ ಬ್ಯಾಂಕ್‌ನಿಂದಲೇ ನೇರವಾಗಿ ಹಣ ವರ್ಗಾವಣೆ ಸೌಲಭ್ಯವನ್ನು ಬಳಸಿಕೊಳ್ಳುತ್ತಾರೆ. ಉದಾಹರಣೆಗೆ ಪ್ರತಿ ತಿಂಗಳ ವೆಚ್ಚಗಳಾದ ವಿದ್ಯುತ್‌ ಬಿಲ್‌, ಮನೆ, ವೈಯಕ್ತಿಕ ಸಾಲದ ಹಣ ಪಾವತಿ (ಇಎಂಐ) ಸಿಸ್ಟಮೆಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲ್ಯಾನ್‌ (ಎಸ್‌ಐಪಿ)ಗಳನ್ನು ಬ್ಯಾಂಕ್‌ ಖಾತೆಗೆ ಹೊಂದಿಸಿರುತ್ತಾರೆ.

ಇದರಿಂದ ಪ್ರತಿ ತಿಂಗಳ ನಿರ್ದಿಷ್ಟದಿನದಂದು ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುತ್ತದೆ. ಆದರೆ ಬ್ಯಾಂಕ್‌ ಸ್ಥಗಿತಗೊಂಡಾಗ ಈ ಸೌಲಭ್ಯ ಸಹಜವಾಗಿ ನಿಂತುಹೋಗುತ್ತದೆ. ಆಗ ಗ್ರಾಹಕರು ಬೇರೆ ಬ್ಯಾಂಕ್‌ನಲ್ಲಿ ಖಾತೆ ಮಾಡಿಸಿ ಅಥವಾ ಈಗಾಗಲೇ ಬೇರೆ ಖಾತೆ ಇದ್ದರೆ ಈ ಎಲ್ಲ ವ್ಯವಸ್ಥೆಯನ್ನು ಅಲ್ಲಿ ಪುನರಾರಂಭಿಸಬೇಕು.

ಬ್ಯಾಂಕ್‌ಗಳು ಮುಚ್ಚುವುದನ್ನು ತಡೆಯಲು ಸಾಧ್ಯವಿಲ್ಲವೇ?

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಸಾಲದ ಸುಳಿಗೆ ಸಿಲುಕುವುದು ಅಥವಾ ಮುಚ್ಚುವುದು ಸಹಕಾರ ಬ್ಯಾಂಕ್‌ಗಳು. ಸಹಕಾರ ಬ್ಯಾಂಕ್‌ಗಳ ವ್ಯವಹಾರದ ಮೇಲೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಬ್ಯಾಂಕ್‌ (ಆರ್‌ಬಿಐ) ನಿರಂತರವಾಗಿ ನಿಗಾವಹಿಸುತ್ತವೆ. ಆದರೂ ಕೆಲ ಬ್ಯಾಂಕುಗಳು ನಷ್ಟದ ಸುಳಿಗೆ ಸಿಲುಕಿ ಮುಚ್ಚಲ್ಪಡುತ್ತವೆ.

ಇದಕ್ಕೆ ಪ್ರಮುಖ ಕಾರಣ ಅವು ನೀಡುವ ಬಡ್ಡಿ ವ್ಯವಸ್ಥೆ. ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಿಂತ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಇವು ಗ್ರಾಹಕರನ್ನು ಸೆಳೆಯುತ್ತವೆ. ಆದರೆ ವ್ಯವಹಾರ ನಿರೀಕ್ಷಿತ ಮಟ್ಟದಲ್ಲಿ ನಡೆಯದಿದ್ದಾಗ, ಅನುತ್ಪಾದಕ ಸಾಲ ಹೆಚ್ಚಾದಾಗ ಮುಚ್ಚುವ ಹಂತಕ್ಕೆ ತಲುಪುತ್ತವೆ. ಹೆಚ್ಚಿನ ಹಣದ ಹರಿವು, ಆಸ್ತಿ ಇಲ್ಲದ ಕಾರಣ ಸಹಕಾರ ಬ್ಯಾಂಕ್‌ಗಳು ಅತಿ ವೇಗವಾಗಿ ಮುಚ್ಚುತ್ತವೆ.

ಇದೆಂಥಾ ನಿರ್ಧಾರ? ಇನ್ಮುಂದೆ ಕೇವಲ 1 ಸಾವಿರ ರೂ ವಿತ್ ಡ್ರಾ!

ಗ್ರಾಹಕರೇ ಎಚ್ಚರ!

ನೀವು ಖಾತೆ ಹೊಂದಿರುವ ಬ್ಯಾಂಕ್‌ನ ವ್ಯವಹಾರದ ಬಗ್ಗೆ (ವಿಶೇಷವಾಗಿ ಸಹಕಾರ ವಲಯದ ಬ್ಯಾಂಕ್‌ಗಳು) ಸದಾ ಗಮನವಿರಲಿ. ಬ್ಯಾಂಕ್‌ನ ಆಸ್ತಿ, ವ್ಯವಹಾರ, ಅನುತ್ಪಾದಕ ಆಸ್ತಿಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆದುಕೊಳ್ಳಿ. ಇದರಿಂದ ಬ್ಯಾಂಕ್‌ ಸಂಕಷ್ಟಕ್ಕೆ ಸಿಲುಕುವ ಮೊದಲೇ ನಿಮ್ಮ ಹಣವನ್ನು ರಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ.

ಭಾರತದಲ್ಲಿ ಮುಚ್ಚಿದ ಬ್ಯಾಂಕ್‌ಗಳು

ಭಾರತದಲ್ಲಿ 1913ರಿಂದ 1934ರವರೆಗೆ ಸಹಕಾರಿ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳೂ ಸೇರಿದಂತೆ ಒಟ್ಟು 350 ಬ್ಯಾಂಕ್‌ಗಳು ಮುಚ್ಚಿವೆ!

- ಪ್ರಶಾಂತ್ ಕೆ ಪಿ 

Follow Us:
Download App:
  • android
  • ios