ಅತಿ ಹೆಚ್ಚು ತೈಲೋತ್ಪಾದನೆ ಮಾಡುತ್ತಿದ್ದ ಸವದಿ ಅರೇಬಿಯಾ ಇದೀಗ ತೈಲೋತ್ಪಾದನೆಯನ್ನು ಕಡಿತ ಮಾಡಿದೆ. ಇದರಿಂದ ಪೆಟ್ರೋಲ್ ಡೀಸೆಲ್ ಬೆಲೆ ಮೇಲೆ ಭಾರೀ ಪರಿಣಾಮ ಉಂಟಾಗಿದೆ.
ನವದೆಹಲಿ (ಜ.23): ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಏರುಗತಿ ಮುಂದುವರಿದಿದೆ. ಶುಕ್ರವಾರ ಪ್ರತಿ ಲೀಟರ್‌ಗೆ ಕ್ರಮವಾಗಿ 25 ಹಾಗೂ 26 ಪೈಸೆ ಏರಿಕೆ ಆಗಿವೆ. ದಿಲ್ಲಿಯಲ್ಲಿ ಡೀಸೆಲ್ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದ್ದು, ಬೆಂಗಳೂರಿನಲ್ಲೂ 80ರ ಗಡಿ ದಾಟಿದೆ.
ಮಹಾನಗರಗಳ ಪೈಕಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 92.04 ರು.ಗೆ ತಲುಪಿದೆ. ಇನ್ನು ಮುಂಬೈನಲ್ಲಿ ಡೀಸೆಲ್ ದರ 82.40 ರು. ಆಗಿದೆ. ಅದೇ ರೀತಿ ದೆಹಲಿಯಲ್ಲಿ ಪೆಟ್ರೋಲ್ 85.45 ರು. ಹಾಗೂ ಡೀಸೆಲ್ 75.63 ರು.ಗೆ ಏರಿದ್ದು, ಡೀಸೆಲ್ ಸಾರ್ವಕಾಲಿಕ ಗರಿಷ್ಠ ತಲುಪಿದೆ.
ಸೆನ್ಸೆಕ್ಸ್ 50000 ಅಂಕಗಳ ಹೊಸ ದಾಖಲೆ: ಭಾರೀ ಕುಸಿತದ ಬಳಿಕ 10 ತಿಂಗಳಲ್ಲಿ ಡಬ್ಬಲ್! ..
ಬೆಂಗಳೂರಿನಲ್ಲಿ ಪೆಟ್ರೋಲ್ 88.33 ರು. ಹಾಗೂ ಡೀಸೆಲ್ ದರ 80.20 ರು.ಗೆ ಏರಿಕೆ ಕಂಡಿದ್ದು, ಸಾರ್ವಕಾಲಿಕ ಏರಿಕೆಯಲ್ಲಿಯೇ ಮುಂದುವರಿದಿದೆ. ಈ ಮುನ್ನ ಜ.18 ಹಾಗೂ ಜ.19ರಂದು ಪೆಟ್ರೋಲ್ ಮತ್ತು ಡೀಸೆಲ್ 25 ಪೈಸೆ ಏರಿಕೆ ಆಗಿತ್ತು. ನಂತರ 2 ದಿನ ಏರಿಕೆ ಕಂಡಿರಲಿಲ್ಲ.
ಪೆಟ್ರೋಲ್ ಬೆಲೆಗೆ 'ಬೆಂದ'ಕಾಳೂರು; ಶತಕದತ್ತ ದಾಪುಗಾಲು! ...
ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುವ ದೇಶಗಳ ಪೈಕಿ ಒಂದಾದ ಸೌದಿ ಅರೇಬಿಯಾ ತನ್ನ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದ್ದರ ಪರಿಣಾಮವಾಗಿ ತೈಲ ದರ ಏರಿಕೆಗೆ ಕಾಣುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
