LPG subsidy: ನಿಮ್ಮ ಅಕೌಂಟ್ ಗೆ LPG ಸಬ್ಸಿಡಿ ಕ್ರೆಡಿಟ್ ಆಗ್ತಿದ್ಯಾ?

ನೀವು ಇತ್ತೀಚೆಗೆ ನಿಮ್ಮ ಖಾತೆಗೆ ಎಲ್ ಪಿಜಿ ಸಬ್ಸಿಡಿ ಕ್ರೆಡಿಟ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿದ್ದೀರಾ? ಸಬ್ಸಿಡಿ ಬಂದಿಲ್ಲವೆಂದ್ರೆ ಅದಕ್ಕೇನು ಕಾರಣ? ಸಬ್ಸಿಡಿ ಚೆಕ್ ಮಾಡೋದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ .
 

Why LPG subsidy is not credited to your account how to check subsidy here is complete information  anu

ನಿಮ್ಗೆ ಎಲ್ ಪಿಜಿ ಸಬ್ಸಿಡಿ ಬರುತ್ತಿದ್ದೀಯಾ ಎಂಬ ಪ್ರಶ್ನೆ ಇತ್ತೀಚೆಗೆ ಕಾಮನ್ ಆಗಿ ಬಿಟ್ಟಿದೆ. ಅಕ್ಕಪಕ್ಕದ ಮನೆಯವರು, ಸ್ನೇಹಿತರು, ಸಂಬಂಧಿಗಳು ಹೀಗೆ ಪರಿಚಯಸ್ಥರು ಒಮ್ಮೆಯಾದ್ರೂ ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ ಬಗ್ಗೆ ನಿಮ್ಮ ಹತ್ರ ವಿಚಾರಿಸಿರುತ್ತಾರೆ. ನಿಮ್ಮ ಖಾತೆಗೂ ಎಲ್ ಪಿಜಿ ಸಬ್ಸಿಡಿ ಹಣ ಬಾರದೇ ನೀವು ಕೂಡ ಬೇರೆಯವರ ಬಳಿ ಈ ಬಗ್ಗೆ ವಿಚಾರಿಸಿರಬಹುದು. ಎಲ್ ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಫಲಾನುಭವಿಯಾಗಲು ಒಂದಿಷ್ಟು ಅರ್ಹತೆಗಳಿದ್ರೂ ಬಹುತೇಕರು ಈ ಯೋಜನೆ ಪ್ರಯೋಜನವಂತೂ ಪಡೆಯುತ್ತಲೇ ಇದ್ದಾರೆ.  ಇನ್ನು ಎಲ್ ಪಿಜಿ ಸಬ್ಸಿಡಿ ನೇರವಾಗಿ ಖಾತೆಗೆ ಜಮೆಯಾಗೋ ಕಾರಣ ಬಹುತೇಕರು ಚೆಕ್ ಮಾಡೋ ಗೋಜಿಗೆ ಹೋಗೋದಿಲ್ಲ. ಇನ್ನು ಕೆಲವು ಮಂದಿಗೆ ಈ ಹಣ ಬ್ಯಾಂಕ್ ಖಾತೆಗೆ ಬಂದಾಗ ಮೆಸೇಜ್ ಬರೋದಿಲ್ಲ. ಹೀಗಾಗಿ ಹಣ ಸಂದಾಯವಾದ ಬಗ್ಗೆ ತಿಳಿಯೋದೇ ಇಲ್ಲ. 

ಸಬ್ಸಿಡಿ ಮೊತ್ತದಲ್ಲೂ ಗೊಂದಲ
ಎಲ್ ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಎಷ್ಟು? ಎಂಬ ಪ್ರಶ್ನೆಗೂ ಗೊಂದಲದ ಉತ್ತರಗಳು ಸಿಗುತ್ತವೆ. ಈ ಗೊಂದಲಕ್ಕೆ ಕಾರಣ ಸಬ್ಸಿಡಿ ಮೊತ್ತದಲ್ಲಿನ ವ್ಯತ್ಯಾಸ.  ಪ್ರತಿ ಸಿಲಿಂಡರ್ ಮೇಲಿನ ಸಬ್ಸಿಡಿ 79.26 ರೂ.ನಿಂದ 237.78 ರೂ. ತನಕ ಇರುತ್ತದೆ. ಬಹುತೇಕ ಎಲ್ ಪಿಜಿ ಗ್ರಾಹಕರಿಗೆ 79.26 ರೂ. ಸಬ್ಸಿಡಿ ಸಿಕ್ಕಿದರೆ, ಕೆಲವೇ ಕೆಲವು ಮಂದಿಗೆ 158.52ರೂ. ಅಥವಾ 237.78ರೂ. ಸಬ್ಸಿಡಿ ಸಿಗುತ್ತಿದೆ. ಸಬ್ಸಿಡಿ ಮೊತ್ತದಲ್ಲಿ ಯಾಕಿಷ್ಟು ವ್ಯತ್ಯಾಸ ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ಕೆಲವು ಮೂಲಗಳ ಪ್ರಕಾರ ಸಿಲಿಂಡರ್ ಬೆಲೆ ಆಧರಿಸಿ ಸಬ್ಸಿಡಿ ನೀಡಲಾಗುತ್ತದೆಯಂತೆ. 

IT Returns Deadline: ಡಿ.31 ಅಂತಿಮ ಗಡುವು, ಇ-ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಒತ್ತಾಯ

ಸಬ್ಡಿಡಿ ಬಂದಿದೆಯೋ, ಇಲ್ಲವೋ  ಚೆಕ್ ಮಾಡೋದು ಹೇಗೆ?
ಮೊದಲನೇ ವಿಧಾನ
-ಇಂಡಿಯನ್ ಆಯಿಲ್ (Indian Oil) ವೆಬ್ಸೈಟ್ https://cx.indianoil.in ಭೇಟಿ ನೀಡಿ.
-ಈಗ Subsidy Status ಮೇಲೆ ಕ್ಲಿಕ್ ಮಾಡಿ.
-ನಂತರ Subsidy Related (PAHAL) ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ Subsidy Not Received ಆಯ್ಕೆ ಮೇಲೆ ಕ್ಲಿಕ್ ಮಾಡಿ.
-ಆ ಬಳಿಕ ಮೊಬೈಲ್ ಸಂಖ್ಯೆ ಹಾಗೂ ಎಲ್ ಪಿಜಿ ಐಡಿ ನೋಂದಣಿ ಮಾಡಿ.
-ಮಾಹಿತಿಗಳನ್ನು ಪರಿಶೀಲಿಸಿ submit ಮಾಡಿ.
-ಈಗ ನಿಮಗೆ ಮುಂದಿನ ಪುಟದಲ್ಲಿ ಸಬ್ಸಿಡಿ ಕುರಿತ ಸಂಪೂರ್ಣ ಮಾಹಿತಿ ಸಿಗುತ್ತದೆ.

ಎರಡನೇ ವಿಧಾನ
 -http://mylpg.in/ ವೆಬ್ಸೈಟ್ ಗೆ ಭೇಟಿ ನೀಡಿ.
-ನಿಮ್ಮ ಎಲ್ಪಿಜಿ ಪೂರೈಕೆ ಸಂಸ್ಥೆ ಹೆಸರನ್ನು ಆಯ್ಕೆ ಮಾಡಿ ನಂತರ ‘Join DBT' ಮೇಲೆ ಕ್ಲಿಕ್ ಮಾಡಿ.
-ಆ ಬಳಿಕ ನಿಮ್ಮ ಎಲ್ ಪಿಜಿ ಗ್ಯಾಸ್ ಪೂರೈಕೆ ಸಂಸ್ಥೆ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ. 
-ಅಲ್ಲಿ ಕಂಪ್ಲೆಂಟ್ ಬಾಕ್ಸ್ ತೆರೆದುಕೊಳ್ಳುತ್ತದೆ. ಅದ್ರಲ್ಲಿ ಸಬ್ಸಿಡಿ ಮಾಹಿತಿ ಭರ್ತಿ ಮಾಡಿ.
-ಆ ಬಳಿಕ ಸಬ್ಸಿಡಿ ಸಂಬಂಧಿ PAHAL ಮೇಲೆ ಕ್ಲಿಕ್ ಮಾಡಿ.
-ಈಗ ‘Subsidy Not received ’ ಮೇಲೆ ಕ್ಲಿಕ್ ಮಾಡಿ
-ಈಗ registered mobile number and LPG ID ಎಂಬ ಎರಡು ಆಯ್ಕೆಗಳಿರೋ ಬಾಕ್ಸ್ ತೆರೆದುಕೊಳ್ಳುತ್ತೆ.
-ಇದ್ರಲ್ಲಿ  17  ಸಂಖ್ಯೆಗಳ LPG ID ದಾಖಲಿಸಿ. ನಿಮ್ಮ ಮೊಬೈಲ್ ಸಂಖ್ಯೆ ನೀಡಿ. captcha code ಕ್ಲಿಕಿಸಿ.
-ನಿಮ್ಮ ಮೊಬೈಲ್ಗೆ ಒಟಿಪಿ ಬರುತ್ತದೆ. ಒಟಿಪಿ ದಾಖಲಿಸಿದ ಬಳಿಕ ಇನ್ನೊಂದು ಪುಟ ತೆರೆದುಕೊಳ್ಳುತ್ತೆ.
-ಅಲ್ಲಿ ನಿಮ್ಮ ಇ-ಮೇಲ್ ಐಡಿಗೆ ನಮೂದಿಸಿ ಪಾಸ್ ವರ್ಡ್ ಸೃಷ್ಟಿಸಿ. 
-ಸಕ್ರಿಯ ಲಿಂಕ್ ನಿಮ್ಮ ಇ-ಮೇಲ್ ಐಡಿ ಬರುತ್ತೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ.
-ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಖಾತೆ ಸಕ್ರಿಯಗೊಳ್ಳುತ್ತೆ.
-ಆ ಬಳಿಕ ಮತ್ತೆ http://mylpg.in ಲಾಗಿ ಇನ್ ಆಗಿ ಆಧಾರ್ ಕಾರ್ಡ್ ಲಿಂಕ್ ಆಗಿರೋ ಬ್ಯಾಂಕ್ ಖಾತೆ ನಮೂದಿಸಿ. submit ಮಾಡಿ.
-cylinder booking history /subsidy transferred ಮೇಲೆ ಕ್ಲಿಕ್ ಮಾಡಿ.
-ಇಲ್ಲಿ ನಿಮಗೆ ಸಬ್ಸಿಡಿ ಮಾಹಿತಿ ಸಿಗುತ್ತದೆ. 

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್!

ಸಬ್ಸಿಡಿ ಬಾರದಿರಲು ಕಾರಣವೇನು?
-ಎಲ್ ಪಿಜಿ ಕನೆಕ್ಷನ್ಗೆ ಆಧಾರ್ ಸಂಖ್ಯೆ ಜೋಡಣೆ ಮಾಡದಿದ್ರೆ ಸಬ್ಸಿಡಿ ಸಿಗೋದಿಲ್ಲ. ಹಾಗೆಯೇ ನಿಮ್ಮ ಬ್ಯಾಂಕ್ ಖಾತೆಗೂ ಆಧಾರ್ ಜೋಡಣೆಯಾಗಿರಬೇಕು,
-ನಿಮ್ಮ ವಾರ್ಷಿಕ ಆದಾಯ 10ಲಕ್ಷ ರೂ.ಗಿಂತ ಹೆಚ್ಚಿದ್ದರೆ ಸಬ್ಸಿಡಿ ಸಿಗೋದಿಲ್ಲ. ಐಟಿ ರಿಟರ್ನ್ಸ್ ಮೂಲಕ ಸರ್ಕಾರ ನಿಮ್ಮ ವಾರ್ಷಿಕ ಆದಾಯದ ಮಾಹಿತಿ ಕಲೆ ಹಾಕುತ್ತದೆ. 
 

Latest Videos
Follow Us:
Download App:
  • android
  • ios