Asianet Suvarna News Asianet Suvarna News

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್!

* ಕೇಂದ್ರ ನೌಕರರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ಸಿಗುವ ಸಾಧ್ಯತೆ

* 7ನೇ ವೇತನ ಆಯೋಗದ ಅಡಿ ಮತ್ತೊಮ್ಮೆ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಸಾಧ್ಯತೆ

 

7th Pay Commission Centre likely to increase DA on new year pod
Author
Bangalore, First Published Dec 13, 2021, 11:18 AM IST

ನವದೆಹಲಿ(ಡಿ.13): ಕೇಂದ್ರ ನೌಕರರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ಸಿಗುವ ಸಾಧ್ಯತೆ ಇದೆ.  7ನೇ ವೇತನ ಆಯೋಗದ ಅಡಿ ಮತ್ತೊಮ್ಮೆ ಕೇಂದ್ರ ಸರ್ಕಾರ ತುಟ್ಟಿಭತ್ಯೆ (ಡಿಎ) ಹೆಚ್ಚಿಸುವ ನಿರೀಕ್ಷೆ ಇದೆ. ಈ ಬಾರಿಯೂ ಕೇಂದ್ರ ಸರ್ಕಾರದ ನೌಕರರು (Central Government Employees) ತುಟ್ಟಿಭತ್ಯೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಸರ್ಕಾರ ಮತ್ತೆ ತುಟ್ಟಿಭತ್ಯೆ (DA) ಹೆಚ್ಚಳ ಮಾಡಿದರೆ, ಹೊಸ ವರ್ಷದಾರಂಭದಿಂದ ಕೆಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಮತ್ತೆ ಏರಿಕೆಯಾಗಲಿದೆ.

ವರ್ಷದಲ್ಲಿ ಎರಡು ಬಾರಿ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಸರ್ಕಾರ ಹೆಚ್ಚಿಸುತ್ತದೆ. ಜನವರಿ ಮತ್ತು ಜುಲೈನಲ್ಲಿ ಈ ತುಟ್ಟಿ ಭತ್ಯೆ ಏರಿಕೆ ಕಾಣುತ್ತದೆ. ಹೊಸ ವರ್ಷದಾರಂಭದಲ್ಲಿ ಸುಮಾರು 20,000 ರೂ.ವರೆಗೆ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಬಹುದೆನ್ನಲಾಗಿದೆ. 

ಕೊನೆಯಾಗಲಿದೆ ಸರ್ಕಾರಿ ಅಧಿಕಾರಿಗೆ ಸಿಗೋ ಈ ಸೌಲಭ್ಯ, ಇಲ್ಲಿದೆ ಹೊಸ ಮಾರ್ಗಸೂಚಿ!

ಮನೆ ಬಾಡಿಗೆ ಭತ್ಯೆ (HRA) ಹೆಚ್ಚಳ?

ಇನ್ನು ಕೇಂದ್ರ ಸರ್ಕಾರ ನೌಕರರ ಮನೆ ಬಾಡಿಗೆ ಭತ್ಯೆ ಹೆಚ್ಚಿಸುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಮನೆ ಬಾಡಿಗೆ ಭತ್ಯೆ ಹೆಚ್ಚಿಸುವಂತೆ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿಸರ್ಕಾರ HRA ಹೆಚ್ಚಿಸಲು ನಿರ್ಧರಿಸಿದೆ. ಇದ್ರಿಂದ ಕೇಂದ್ರ ಸರ್ಕಾರದ ಉದ್ಯೋಗಿಗಳ ವೇತನದಲ್ಲಿ ಗಣನೀಯ ಹೆಚ್ಚಳವಾಗಲಿದೆ. HRA ಹೆಚ್ಚಿಸೋ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) ಹಾಗೂ ರಾಷ್ಟ್ರೀಯ ರೈಲ್ವೆಮೆನ್ ಫೆಡರೇಷನ್ (NFIR) ಸರ್ಕಾರದ ಮುಂದಿರಿಸಿತ್ತು. 2022ರ ಜನವರಿ 1ರಿಂದ HRA ಹೆಚ್ಚಿಸುವಂತೆ ಸರ್ಕಾರವನ್ನು ಈ ಸಂಘಟನೆಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ 11.56 ಲಕ್ಷಕ್ಕೂ ಅಧಿಕ ನೌಕರರ ಮನೆ ಬಾಡಿಗೆ ಭತ್ಯೆ (HRA) ಹೆಚ್ಚಿಸೋ ಬೇಡಿಕೆಯನ್ನು ಹಣಕಾಸು ಸಚಿವಾಲಯ ಪರಿಗಣಿಸಿದೆ. ರೈಲ್ವೆ ಮಂಡಳಿಗೆ ಹಣಕಾಸು ಸಚಿವಾಲಯದಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲಿಈ ಪ್ರಸ್ತಾವನೆ ಅನುಮೋದನೆಗೊಂಡ ನಂತರ ನೌಕರರು 2022ರ ಜನವರಿಯಿಂದ HRA ಪಡೆಯಲಿದ್ದಾರೆ. HRA ಹೆಚ್ಚಿಸುವಂತೆ ಆಗಾಗ ನೌಕರರು ಸರ್ಕಾರವನ್ನು ಒತ್ತಾಯಿಸುತ್ತಲೇ ಇರುತ್ತಾರೆ. ಆದ್ರೆ ಕೆಲವು ಸಂದರ್ಭಗಳಲ್ಲಿಮಾತ್ರ ಸರ್ಕಾರ ಅವರ ಮನವಿಯನ್ನು ಪರಿಗಣಿಸುತ್ತದೆ. 

HRA ಹೇಗೆ ನಿಗದಿಪಡಿಸುತ್ತಾರೆ?

ಸರ್ಕಾರಿ ವೇತನ ಪಡೆಯೋ ಉದ್ಯೋಗಿಗಳಿಗೆ HRA ಅತ್ಯಂತ ಪ್ರಮುಖ ಅಂಶವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ನೌಕರರಿಗೆ ಯಾವ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆಧಾರದಲ್ಲಿ HRA ನೀಡಲಾಗುತ್ತಿದೆ. ಸರ್ಕಾರವು ನಗರಗಳನ್ನು X, Y ಹಾಗೂ Z ವರ್ಗಗಳನ್ನಾಗಿ ವಿಂಗಡಿಸಿದೆ. X ವರ್ಗದಡಿಯಲ್ಲಿ ಬರೋ ನಗರಗಳಲ್ಲಿ ಕಾರ್ಯನಿರ್ವಹಿಸೋ ಉದ್ಯೋಗಿಗಳಿಗೆ ಮಾಸಿಕ ಈಗಿರೋ HRA ಗಿಂತ 5400 ರೂ. ಹೆಚ್ಚಳವಾಗೋ ನಿರೀಕ್ಷಿಯಿದ್ರೆ, Y ಹಾಗೂ Z ವರ್ಗದಡಿಯಲ್ಲಿ ಬರೋ ನಗರಗಳಲ್ಲಿ ಕಾರ್ಯನಿರ್ವಹಿಸೋ ಉದ್ಯೋಗಿಗಳ HRA ಯಲ್ಲಿ ಕ್ರಮವಾಗಿ ಮಾಸಿಕ 3600ರೂ. ಹಾಗೂ 1800ರೂ. ಹೆಚ್ಚಳವಾಗೋ ಸಾಧ್ಯತೆಯಿದೆ. 50ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರೋ ಎಲ್ಲ ನಗರಗಳು X ವರ್ಗದಡಿಯಲ್ಲಿ ಬರುತ್ತವೆ. ಈ ನಗರಗಳಲ್ಲಿ ಕಾರ್ಯನಿರ್ವಹಿಸೋ ಉದ್ಯೋಗಿಗಳು ಮೂಲವೇತನದ ಶೇ.27 HRA ಪಡೆಯುತ್ತಾರೆ. Y ವರ್ಗದ ನಗರಗಳಲ್ಲಿ ಕಾರ್ಯನಿರ್ವಹಿಸೋ ಉದ್ಯೋಗಿಗಳು ಮೂಲವೇತನದ ಶೇ.18 ಹಾಗೂ  Z ವರ್ಗದಡಿಯಲ್ಲಿ ಬರೋ ಉದ್ಯೋಗಿಗಳು ಶೇ.9ರಷ್ಟು HRA ಪಡೆಯುತ್ತಾರೆ. 

ಜುಲೈ 1ರಿಂದಲೇ ಕೇಂದ್ರದ ನೌಕರರ DA ಶೇ.31ಕ್ಕೆ ಹೆಚ್ಚಳ: ವಿತ್ತ ಸಚಿವಾಲಯ!

ಬಡ್ತಿ ಸಿಗೋ ಸಾಧ್ಯತೆ

ಕೆಲವು ಮೂಲಗಳ ಮಾಹಿತಿ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ನೌಕರರಿಗೆ ಡಿಸೆಂಬರ್ ಅಂತ್ಯದಲ್ಲಿ ಬಡ್ತಿ ನೀಡೋ ಸಾಧ್ಯತೆಯಿದೆ. ಅಲ್ಲದೆ, ಮುಂಬರೋ ಬಜೆಟ್ ಗೂ ಮುನ್ನ ಕೇಂದ್ರ ಸರ್ಕಾರ ಕೆಲವು ನೌಕರರ ಮೂಲವೇತನ ಹೆಚ್ಚಿಸಲು ನಿರ್ಧರಿಸಿದೆ. ಹೀಗಾದ್ರೆ ಅನೇಕ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಗಮನಾರ್ಹ ಹೆಚ್ಚಳವಾಗಲಿದೆ. 

ಜುಲೈ- ಅಕ್ಟೋಬರ್​ನಲ್ಲಷ್ಟೇ ತುಟ್ಟಿ ಭತ್ಯೆ ಹೆಚ್ಚಿಸಿದ್ದ ಕೇಂದ್ರ

ಸದ್ಯ ಕೇಂದ್ರ ಸರ್ಕಾರಿ ನೌಕರರಿಗೆ ಶೇ 31ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದೆ. ಕೊರೋನಾ ಕಾಲದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಡಿಎ ಹೆಚ್ಚಳಕ್ಕೆ ತಡೆ ನೋಡಿತ್ತು. ಬಳಿಕ 2021 ಜುಲೈನಿಂದ ಅನ್ವಯವಾಗುವಂತೆ ಡಿಎ ಹೆಚ್ಚಿಸಲು ಸರ್ಕಾರ ಆದೇಶಿಸಿತ್ತು. ಸಾಂಕ್ರಾಮಿಕ ರೋಗದ ದೃಷ್ಟಿಯಿಂದ, ಕೇಂದ್ರ ಸರ್ಕಾರವು ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021 ರಿಂದ ಬರಬೇಕಿದ್ದ ಮೂರು ಹೆಚ್ಚುವರಿ ಡಿಎ ಮತ್ತು ಡಿಆರ್ ಕಂತುಗಳನ್ನು ಸ್ಥಗಿತಗೊಳಿಸಿತ್ತು. ಈ ಹೆಚ್ಚಳದ ಸಮಯದಲ್ಲಿ, ಸಾಂಕ್ರಾಮಿಕ ಪರಿಸ್ಥಿತಿಯನ್ನು ನೆಪದಲ್ಲಿ ಸರ್ಕಾರ ಅವರಿಗೆ ಬಾಕಿಯನ್ನು ಕೂಡ ಪಾವತಿಸಲಿಲ್ಲ.

ನಾಗರಿಕ ಸೇವೆಗಳಿಗಾಗಿ ಭದ್ರತಾ ಸೇವೆಗಳ ಇಲಾಖೆಯಿಂದ ಪಾವತಿಸಲಾಗುವ ನಾಗರಿಕ ಸಿಬ್ಬಂದಿಗೂ ಇದು ಅನ್ವಯವಾಗಿತ್ತು. ಅಲ್ಲದೆ ರೈಲ್ವೆ ಸಿಬ್ಬಂದಿ, ಸೇನಾ ಪಡೆಗಳ ಸಿಬ್ಬಂದಿಯ ಡಿಎ ಕುರಿತಾಗಿ ರಕ್ಷಣಾ ಸಚಿವಾಲಯ ಮತ್ತು ರೈಲ್ವೆ ಇಲಾಖೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಿತ್ತು. ಸರ್ಕಾರದ ಈ ಕ್ರಮದಿಂದ 47.14 ಲಕ್ಷ ಮಂದಿ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಮಂದಿ ಪಿಂಚಣಿದಾರರಿಗೆ ನೆರವಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇಕಾದ ತುಟ್ಟಿಭತ್ಯೆಯನ್ನು ಪ್ರಸ್ತುತ ಇರುವ ಶೇಕಡಾ 28 ರಿಂದ ಶೇಕಡಾ 31 ಕ್ಕೆ ಹೆಚ್ಚಿಸಿ, ಜುಲೈ 1, 2021 ರಿಂದ ಜಾರಿಗೆ ತರಲಾಗುವುದು ಎಂದು ವಿತ್ತ ಸಚಿವಾಲಾಯ ತಿಳಿಸಿತ್ತು. 

Follow Us:
Download App:
  • android
  • ios