ಪನ್ನೀರು ಶ್ರೀಮಂತರ ಆಹಾರವಾಗಿದ್ದು, ಕತ್ತೆ ಹಾಲಿನ ಪನ್ನೀರು ಬಹಳ ದುಬಾರಿಯಾಗಿದೆ. ಕತ್ತೆ ಹಾಲು ಲಭ್ಯತೆ ಕಡಿಮೆ ಮತ್ತು ಪೌಷ್ಟಿಕಾಂಶದಿಂದ ಕೂಡಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಒಂದು ಲೀಟರ್ ಕತ್ತೆ ಹಾಲು 5000-7000 ರೂಪಾಯಿ ಇದ್ದು, 25 ಕೆ.ಜಿ ಹಾಲಿನಿಂದ 1 ಕೆ.ಜಿ ಪನ್ನೀರು ತಯಾರಿಸಲು 1 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಸೌಂದರ್ಯ ವರ್ಧಕವಾಗಿ ಬಳಸುವ ಈ ಹಾಲಿಗೆ ಬೇಡಿಕೆ ಹೆಚ್ಚಿದ್ದು, ಕತ್ತೆ ಸಾಕಣೆ ಲಾಭದಾಯಕ ಉದ್ಯಮವಾಗಿದೆ.

ಶ್ರೀಮಂತರ ಆಹಾರ ಎಂದೇ ಪನ್ನೀರು (Paneer) ಪ್ರಸಿದ್ಧಿ ಪಡೆದಿದೆ. ಗಗನಕ್ಕೇರಿದ್ದ ಪನ್ನೀರಿನ ಬೆಲೆ ನೋಡಿ, ಚಿನ್ನದಂಗಡಿಯಲ್ಲಿ ಪನ್ನೀರು ಸಿಗುವ ದಿನ ದೂರವಿಲ್ಲ ಅಂತ ಜನರು ಈ ಹಿಂದೆ ಆಡಿಕೊಳ್ತಿದ್ದರು. ಹಸು ಮತ್ತು ಎಮ್ಮೆ ಹಾಲಿನಿಂದ ಸಿದ್ಧವಾಗುವ ಪನ್ನೀರು ಕೆ.ಜಿಗೆ 300 -400 ರೂಪಾಯಿಗೆ ಮಾರಾಟ ಆಗ್ತಿದೆ. ಸಾಮಾನ್ಯ ಜನರು ಈ ಪನ್ನೀರು ಖರೀದಿ ಮಾಡೋದು ಕಷ್ಟ. ಆದ್ರೆ ಆಕಳು – ಎಮ್ಮೆ ಹಾಲಿಗಿಂತ ಕತ್ತೆ ಹಾಲಿ (donkey milk )ನಿಂದ ಮಾಡಿದ ಪನ್ನೀರಿನ ಬೆಲೆ ಮತ್ತಷ್ಟು ದುಬಾರಿ. ಅದನ್ನು ಖರೀದಿ ಮಾಡೋದಿರಲಿ, ಬೆಲೆ ಕೇಳಿದ್ರೆ ಹುಬ್ಬು ಏರುತ್ತೆ. ಸಾಮಾನ್ಯ ಜನರಿಗೆ ಕತ್ತೆ ಹಾಲಿನ ಪನ್ನೀರು ಖರೀದಿ ಮಾಡೋದು ಕನಸಿನ ಮಾತು. ಯಸ್. ಕತ್ತೆ ಹಾಲಿಗಿಂತ ಕತ್ತೆ ಹಾಲಿನ ಪನ್ನೀರು ಸಿಕ್ಕಾಪಟ್ಟೆ ದುಬಾರಿ. ನಾವಿಂದು ಕತ್ತೆ ಹಾಲು, ಪನ್ನೀರಿಗೆ ಬೆಲೆ ಎಷ್ಟು, ಬೆಲೆ ಏರಿಕೆಗೆ ಕಾರಣ ಏನು ಎಂಬೆಲ್ಲ ಮಾಹಿತಿಯನ್ನು ನಿಮಗೆ ನೀಡ್ತೇನೆ.

ಎಮ್ಮೆ – ಆಕಳ ಹಾಲಿನಂತೆ ಭಾರತದಲ್ಲಿ ಕತ್ತೆ ಹಾಲು ಸುಲಭವಾಗಿ ಸಿಗೋದಿಲ್ಲ. ಕತ್ತೆ ಹಾಲನ್ನು ಪ್ರಪಂಚದಾದ್ಯಂತ ದ್ರವ ಚಿನ್ನ ಎಂದೇ ಕರೆಯುತ್ತಾರೆ. ಕತ್ತೆ ಹಾಲಿನಲ್ಲಿ ಕಂಡುಬರುವ ಅಪಾರ ಪೋಷಕಾಂಶಗಳು ಇದಕ್ಕೆ ಕಾರಣ. ಕತ್ತೆ ಹಾಲಿನಲ್ಲಿ ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲ, ಕ್ಯಾಲ್ಸಿಯಂ ಹಾಗೂ ಲೈಸೋಜೈಮ್ ಇದ್ದು, ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲ, ಕತ್ತೆ ಹಾಲು ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿದೆ. ಕತ್ತೆ ಹಾಲು ಹೆಚ್ಚು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದರಿಂದಾಗಿ ಯಾರಿಗೂ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. 

ಮಾರುಕಟ್ಟೆ ಕುಸಿತ, ಅವಕಾಶ ಹೆಚ್ಚಳ! ಈ 10 ಷೇರುಗಳಲ್ಲಿ ಹೂಡಿಕೆ ಮಾಡಿ!

ಕತ್ತೆ ಹಾಲು – ಪನ್ನೀರು ಏಕೆ ದುಬಾರಿ ? : ಕತ್ತೆ, ದಿನಕ್ಕೆ ನೀಡುವ ಹಾಲಿನ ಪ್ರಮಾಣ ಅತೀ ಕಡಿಮೆ. ಕತ್ತೆ ದಿನಕ್ಕೆ 200 ರಿಂದ 300 ಮಿಲಿ ಹಾಲನ್ನು ಮಾತ್ರ ನೀಡುತ್ತದೆ. ನೀವು ಒಂದು ಲೀಟರ್ ಹಾಲು ಸಂಗ್ರಹ ಮಾಡ್ಬೇಕು ಅಂದ್ರೆ ಹಲವು ಕತ್ತೆಗಳನ್ನು ಸಾಕಬೇಕು. ಹಾಗಾಗಿ ಭಾರತದಲ್ಲಿ ಕತ್ತೆ ಹಾಲಿನ ಬೆಲೆ ಲೀಟರ್ ಗೆ 5000 – 7000 ರೂಪಾಯಿ ಇದೆ. ಇನ್ನು ಕತ್ತೆ ಹಾಲನ್ನು ಸಂಸ್ಕರಿಸಿ ಪನ್ನೀರು ಮಾಡಲು ಮತ್ತಷ್ಟು ಖರ್ಚಾಗುತ್ತದೆ. ನೀವು 25 ಕೆಜಿ ಕತ್ತೆ ಹಾಲನ್ನು ಬಳಸಿ ಕೇವಲ ಒಂದು ಕೆಜಿ ಪನ್ನೀರ್ಮಾತ್ರ ತಯಾರಿಸಬಹುದು. ಹಾಗಾಗಿ ಭಾರತದಲ್ಲಿ ಒಂದು ಕೆಜಿ ಪನ್ನೀರ್ ಬೆಲೆ 1 ಲಕ್ಷ ರೂಪಾಯಿ ಇದೆ. 

ಸೌಂದರ್ಯ ವರ್ಧಕಕ್ಕೆ ಬಳಕೆ : ಕತ್ತೆ ಹಾಲನ್ನು ಸೌಂದರ್ಯ ವರ್ದಕವಾಗಿಯೂ ಬಳಕೆ ಮಾಡಲಾಗುತ್ತದೆ. ಅನೇಕ ಸೌಂದರ್ಯ ಉತ್ಪನ್ನಕ್ಕೆ ಕತ್ತೆ ಹಾಲು ಬಳಕೆಯಾಗುತ್ತದೆ. ರೋಮನ್ ರಾಣಿ ಕ್ಲಿಯೋಪಾತ್ರ ಹೊಳೆಯುವ ಚರ್ಮಕ್ಕಾಗಿ ಈ ಹಾಲಿನಿಂದ ಸ್ನಾನ ಮಾಡುತ್ತಿದ್ದರು ಎನ್ನಲಾಗುತ್ತದೆ. 

ಇಂಟರ್‌ನೆಟ್‌ ಬಗ್ಗೆ ಗೊತ್ತಿಲ್ಲದಿದ್ರೂ ತಿಂಗಳಿಗೆ 5-6 ಲಕ್ಷ ದುಡಿಯುತ್ತಿರೋ 74

ಉತ್ತಮ ಬ್ಯುಸಿನೆಸ್ : ಕತ್ತೆ ಹಾಲು ಹಾಗೂ ಪನ್ನೀರಿನ ಬೆಲೆ, ಅದ್ರ ಉಪಯೋಗ ತಿಳಿದಿ ಅನೇಕ ನವ ಉದ್ಯಮಿಗಳು ಕತ್ತೆ ಸಾಕಣಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಗುಜರಾತ್ ಮತ್ತು ತಮಿಳುನಾಡಿನಲ್ಲಿ ಕತ್ತೆ ಸಾಕಣಿಕೆ ಹೆಚ್ಚಾಗಿದೆ. ಗುಜರಾತಿನ ಉದ್ಯಮಿಯೊಬ್ಬರು ಕತ್ತೆ ಸಾಕಿ ಸಾಕಷ್ಟು ಹಣ ಸಂಪಾದನೆ ಮಾಡ್ತಿದ್ದಾರೆ. ಆರಂಭದಲ್ಲಿ 20 ಕತ್ತೆ ಸಾಕಿದ್ದ ಉದ್ಯಮಿ ಈಗ 42ಕ್ಕಿಂತಲೂ ಹೆಚ್ಚು ಕತ್ತೆಯನ್ನು ಸಾಕಿದ್ದಾರೆ. ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಿದ್ದು, ಉದ್ಯಮಿ ದೀರೇನ್ ಕರ್ನಾಟಕ ಹಾಗೂ ತಮಿಳುನಾಡಿಗೆ ಹೆಚ್ಚು ಹಾಲನ್ನು ನೀಡ್ತಿದ್ದು, ಅನೇಕ ಕಾಸ್ಮೆಟಿಕ್ ಕಂಪನಿಗಳು ಇದನ್ನು ಖರೀದಿ ಮಾಡ್ತಿವೆ.