ಚೆಕ್ ಹಿಂಭಾಗದಲ್ಲಿ ಸಹಿ ಹಾಕುವುದರ ಹಿಂದಿನ ಗುಟ್ಟೇನು? ವಂಚನೆ ತಡೆಗಟ್ಟುವುದೇ? ಹಣದ ಸುರಕ್ಷತೆಗಾಗಿ ಬ್ಯಾಂಕುಗಳು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳೇನು? ಈ ಲೇಖನದಲ್ಲಿ ತಿಳಿಯಿರಿ.

ನಮ್ಮ ದೈನಂದಿನ ಜೀವನದಲ್ಲಿ ನಾವು ಸಾಕಷ್ಟು ಕೆಲಸಗಳನ್ನ ಮಾಡುತ್ತೇವೆ. ಆದರೆ ಏಕೆ ಎಂದು ನಮಗೆ ತಿಳಿದಿರೋದಿಲ್ಲ. ಇದರ ಹಿಂದಿನ ಕಾರಣ ಬಹಳ ಕಡಿಮೆ ಜನರಿಗೆ ತಿಳಿದಿದೆ. ಇಂದು ನಾವು ಬ್ಯಾಂಕ್‌(cheque)ಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ತಿಳಿಯಲಿದ್ದೇವೆ. ಸಾಮಾನ್ಯವಾಗಿ ಬ್ಯಾಂಕ್‌(cheque) ವ್ಯವಹಾರ ಮಾಡುವವರಿಗೆ ಚೆಕ್‌(cheque) ಹಿಂಭಾಗದಲ್ಲಿ ಸಹಿ ಬ್ಯಾಂಕಿನವರು ಹಾಕಿಸಿಕೊಳ್ಳುವುದು ಗೊತ್ತೆ ಇದೆ. ಪ್ರತಿಭಾರಿ ಬ್ಯಾಂಕ್‌ನಿಂದ ಹಣವನ್ನ ತೆಗೆಯುವಾಗ ಹಾಗೂ ಹಾಕುವಾಗ ಚೆಕ್‌ಬುಕ್‌ ಹಿಂದೆ ಸಹಿಯನ್ನ ಹಾಕಿಸಿಕೊಳ್ಳುತ್ತಾರೆ? ಈ ರೀತಿ ಯಾಕೆ ಹಾಕಿಸಿಕೊಳ್ಳುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ತಿಳಿದಿಲ್ಲವೆಂದರೆ ತಿಳಿದುಕೊಳ್ಳಿ. ಇಗ ಡಿಜಿಟಲ್‌(Digital) ಯುಗ, ಈ ಕಾಲದಲ್ಲಿಯೂ ಸಹ ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳಿಗೆ ಹಲವರು ಚೆಕ್‌ನ್ನ(cheque) ಬಳಸುತ್ತಲೇ ಇರುತ್ತಾರೆ.

ಪ್ರಸ್ತುತ, ಆನ್‌ಲೈನ್ ವಹಿವಾಟು ಹೆಚ್ಚಾಗಿದೆ. ಎಲ್ಲಾ ಜನರು ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸುತ್ತಾರೆ. ಆದಾಗ್ಯೂ, ಚೆಕ್ ವಹಿವಾಟನ್ನು ಪ್ರಮುಖ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಚೆಕ್ ಬರೆಯುವ ಸಮಯದಲ್ಲಿ, ನಾವು ಅದರ ಮೇಲೆ ದಿನಾಂಕ, ಹೆಸರು, ನಮಗೆ ಬೇಕಾದ ಹಣ ಎಲ್ಲವನ್ನೂ ಬರೆಯುತ್ತೇವೆ. ಇದರೊಂದಿಗೆ, ಚೆಕ್‌ನ ಕೊನೆಯಲ್ಲಿ ಕೆಳಗಿನ ಬಲ ಮೂಲೆಯಲ್ಲಿ ಸಹ ಸಹಿ ಮಾಡುತ್ತಾರೆ. ಇದರ ನಂತರ, ಚೆಕ್ ಅನ್ನು ಬ್ಯಾಂಕ್(Bank) ಅಥವಾ ಇತರ ವ್ಯಕ್ತಿಗೆ ನೀಡಲಾಗುತ್ತದೆ. ಒಮ್ಮೆಯಾದರೂ ಚೆಕ್‌ ಹಿಂಭಾಗದಲ್ಲಿ ಸಹಿ ಹಾಕಬೇಕಾದರೆ, ಬ್ಯಾಂಕಿನವರು ಯಾಕೆ ಸಹಿ ಹಾಕಿಕೊಳ್ಳುತ್ತಾರೆ ಎಂಬ ಪ್ರಶ್ನೆ ಬಂದಿರದೇ ಇರಲಾರದು. ನಿಮ್ಮ ಆ ಪ್ರಶ್ನೆಗೆ ಇಲ್ಲಿದೆ ಉತ್ತರ

ಬ್ಯಾಂಕಿಂದ ಚೆಕ್‌ನ್ನ ತೆಗೆದುಕೊಂಡ ನಂತರ, ನಾವು ಚೆಕ್(cheque) ಅನ್ನು ಕ್ಯಾಷಿಯರ್ಗೆ ನೀಡುತ್ತೇವೆ. ನಂತರ ಅವನು ಗ್ರಾಹಕರಿಗೆ ಪಾವತಿಸುತ್ತಾನೆ. ಇದರ ನಂತರ ಗ್ರಾಹಕರು ಹೊರಡುತ್ತಾರೆ. ಹೀಗೆ ಆದರೆ ಓಕೆ. ಆದರೆ ಗ್ರಾಹಕರು ಸ್ವಲ್ಪ ಸಮಯದ ನಂತರ ಮತ್ತೆ ಹಿಂತಿರುಗಿ ಕ್ಯಾಷಿಯರ್ ಅನ್ನು ಮತ್ತೊಮ್ಮೆ ಮರುಪಾವತಿ ಕೇಳಿದರೆ ಏನು ಮಾಡ್ಬೇಕು? ಆದ್ದರಿಂದ ಕ್ಯಾಷಿಯರ್ ನಿಮಗೆ ಪುರಾವೆಯಾಗಿ, ಸಾಕ್ಷಿಯಾಗಿ ಅಥವಾ ವಹಿವಾಟು ಪೂರ್ಣಗೊಂಡಿದೆ ಎಂದು ತೋರಿಸಲು ಚೆಕ್‌ನ ಹಿಂಭಾಗಕ್ಕೆ ಸಹಿ ಮಾಡುವಂತೆ ಕೇಳುತ್ತಾರೆ. ಇದನ್ನು ಕೇವಲ ನಿಯಮಕ್ಕಾಗಿ ಮಾಡಲಾಗುತ್ತದೆ.

ಹೇಗೆ ಚೆಕ್‌ನ ಹಿಂದೆ ಸಹಿ ಹಾಕಿಕೊಳ್ಳುವ ಹಿಂದೆ ಇನ್ನೊಂದು ಕಾರಣವೂ ಇದೆ. ಏಕೆಂದರೆ, ಟೋಕನೈಸ್ ಮಾಡಿದ ನಂತರ ನಿಮ್ಮ ಚೆಕ್ ನಿಜವಾಗಿಯೂ ಕಳೆದುಹೋಗಿದೆ ಎಂದು ಭಾವಿಸೋಣ. ಯಾರೋ ಗೊತ್ತಿಲ್ಲದ ವ್ಯಕ್ತಿ ಹಣವನ್ನು ಹಿಂಪಡೆಯಲು ಬ್ಯಾಂಕ್‌ಗೆ ಬಂದು ಸಹಿ ಮಾಡಲು ಕೇಳಲಾಗುತ್ತದೆ. ಅಂತಹ ಸಂದರ್ಭದಲ್ಲಿ ಸಹಿ ಮಾಡೋಕ್ಕಾಗಲ್ಲ ಆಗ ಕಳ್ಳ ಸಿಕ್ಕಿಬಿಳುತ್ತಾನೆ. ಚೆಕ್ ಅನ್ನು ಪಾವತಿಸುವವರು ನಂತರ ಅದನ್ನು ನಗದು ಮಾಡಲು ತಿರಸ್ಕರಿಸಿದರೆ, ಈ ಸಹಿಯೂ ಸತ್ಯಗೊತ್ತಾಗುವ ಹಾಗೇ ಮಾಡುತ್ತದೆ. ಕ್ಯಾಷಿಯರ್ ತನ್ನ ಪ್ಯಾನ್ ಸಂಖ್ಯೆ ಹಾಗೂ ಪ್ಯಾನ್ ಕಾರ್ಡ್‌ನೊಂದಿಗೆ ತನ್ನ ಸಹಿಯನ್ನು ಹೊಂದಿಸಿದ ನಂತರವೇ ಬೇರರ್ ಚೆಕ್(bearer cheque) ಅನ್ನು ಪಾವತಿಸುತ್ತಾನೆ. ನಿಮ್ಮ ಹಣದ (Money) ಸುರಕ್ಷತೆಗಾಗಿ ಇದೆಲ್ಲವನ್ನೂ ಬ್ಯಾಂಕ್ ಮಾಡುತ್ತದೆ.

ಬೇರರ್ ಚೆಕ್(Bearer Cheque) ಎಂದರೆ ಬ್ಯಾಂಕಿಗೆ ಸಲ್ಲಿಸಿದ ಯಾರಾದರೂ ಹಣವನ್ನ ಹಿಂಪಡೆಯಬಹುದು, ಚೆಕ್‌ನಲ್ಲಿ ಒಬ್ಬರ ಹೆಸರು ಇದ್ದರು ಸಹ ಇನ್ನೊಬ್ಬ ವ್ಯಕ್ತಿಯು ಹಣವನ್ನ ಪಡೆಯಲು ಬಳಸಬಹುದು. ಚೆಕ್‌ನ್ನ ಹಣವಾಗಿ ಪರಿವರ್ತಿಸುವ ವ್ಯಕಿಯ ಸಹಿಯನ್ನ(signature) ತೆಗೆದುಕೊಳ್ಳುವ ಮೂಲಕ ವಂಚನೆಯನ್ನ ತಡೆಗಟ್ಟಲು ಬ್ಯಾಂಕ್‌ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮವನ್ನ ತೆಗೆದುಕೊಳ್ಳಲಾಗುವುದು. 

ಆರ್ಡರ್‌ ಚೆಕ್‌( Order Cheque) ಆರ್ಡರ್‌ ಚೆಕ್‌ನ ಬಳಸುವ ಸಂದರ್ಭದಲ್ಲಿ ಚೆಕ್‌ನ ಹಿಂಭಾಗದಲ್ಲಿ ಸಹಿ ಹಾಕುವ ಅಗತ್ಯವಿರುವುದಿಲ್ಲ. ಆರ್ಡರ್‌ ಚೆಕ್‌ನಲ್ಲಿ ಬ್ಯಾಂಕ್‌ ಸಿಬ್ಬಂದಿ ಬರೆದಿರುವ ವ್ಯಕ್ತಿಗೆ ಮಾತ್ರ ಹಣವನ್ನ ಪಾವತಿಸಲಾಗುತ್ತದೆ. 

ಬ್ಯಾಂಕ್‌ ವ್ಯವಹಾರಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

ಬೇರರ್‌ ಚೆಕ್‌ಗಳನ್ನ ಸಾಧ್ಯವಾದಷ್ಟು ದೂರವಿಡಿ

ಸಾಧ್ಯವಾದರೆ ಅಕೌಂಟ್‌ ಪೆಯಿ ಚೆಕ್‌(Account Payee cheque)ಗಳನ್ನ ಬಳಸಿ

ಚೆಕ್‌ ಮೇಲೆ ಸಹಿ ಹಾಕುವಾಗ ಪಾವತಿದಾರರು ಯಾರು ಎಂಬುದು ಸ್ಪಷ್ಟವಾಗಿರಲಿ