Asianet Suvarna News Asianet Suvarna News

Business Idea : ಸಂಗೀತದ ಮೂಲಕ ಮನರಂಜನೆ ನೀಡಿ ಹಣ ಗಳಸಿ

ಈಗ ಹಳ್ಳಿಗಳಲ್ಲೂ ಮದುವೆ, ಬರ್ತ್ ಡೇ, ಪಾರ್ಟಿಗಳನ್ನು ಏರ್ಪಡಿಸ್ತಾರೆ. ನಗರದಂತೆ ಅಲ್ಲಿಯೂ ಡಿಜೆಗೆ ಬೇಡಿಕೆಯಿದೆ. ಸಂಗೀತದಲ್ಲಿ ಜ್ಞಾನ, ಡಿಜೆ ಕಂಪೋಸಿಂಗ್ ತಿಳಿದಿದ್ರೆ ನೀವು ವ್ಯವಹಾರ ಶುರು ಮಾಡಿ.
 

Who To Start DJ Business
Author
First Published Feb 13, 2023, 2:04 PM IST

ಮದುವೆ, ಬರ್ತ್ ಡೇ ಪಾರ್ಟಿ ಹೀಗೆ ಯಾವುದೇ ಸಂಭ್ರಮವಿರಲಿ ಅಲ್ಲಿ ಡಿಜೆ ಇಲ್ಲವೆಂದ್ರೆ ಹಬ್ಬದ ಕಳೆ ಕಟ್ಟೋದಿಲ್ಲ. ಡಿಜೆಯಿದ್ರೆ ಅದ್ರ ಮಜವೇ ಬೇರೆ. ಹಳ್ಳಿಯಿಂದ ಹಿಡಿದು ಮಹಾನಗರಗಳವರೆಗೆ ಎಲ್ಲೆಡೆ ನಾವು ಡಿಜೆ ನೋಡ್ಬಹುದು. ಕೆಲವು ಕಡೆ ಇದನ್ನು ಶಕುನವೆಂದು ಭಾವಿಸ್ತಾರೆ. ಹಾಗಾಗಿ ಎಲ್ಲ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸುತ್ತಾರೆ. ಇನ್ನು ಪ್ರವಾಸಿ ತಾಣಗಳಲ್ಲಿ ಏನೆಲ್ಲವೆಂದ್ರೂ ಬಾರ್ ಮತ್ತೆ ಡಿಜೆ ಇದ್ದೇ ಇರುತ್ತದೆ. ನೀವೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಡಿಜೆ ಕಂಪೋಸಿಂಗ್ ಕಲಿತಿದ್ದರೆ ಡಿಜೆ ವ್ಯವಹಾರವನ್ನು ಶುರು ಮಾಡಬಹುದು. ನಾವಿಂದು ಡಿಜೆ ವ್ಯವಹಾರದ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಹೆಚ್ಚಾಗಿದೆ ಡಿಜೆ (DJ) ಗೆ ಬೇಡಿಕೆ : ಹಿಂದೆ ನಗರಗಳಲ್ಲಿ ಮಾತ್ರ ಡಿಜೆಗೆ ಬೇಡಿಕೆಯಿತ್ತು. ಆದ್ರೀಗ ಹಳ್ಳಿ (Village) ಯಲ್ಲೂ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಹಳ್ಳಿಯಲ್ಲೂ ಶುಭ ಕಾರ್ಯಗಳಲ್ಲಿ ಡಿಜೆಗೆ ಆಹ್ವಾನ ನೀಡ್ತಾರೆ. ಮದುವೆ (marriage) ಸಮಾರಂಭದಲ್ಲಿ ಹೆಚ್ಚು ಮನರಂಜನೆ ನೀಡುವ ಈ ಡಿಜೆ ವ್ಯವಹಾರ ಶುರು ಮಾಡೋದು ಹೆಚ್ಚು ಕಷ್ಟವೇನಲ್ಲ. ಡಿಜೆಗೆ ಅಗತ್ಯವಿರುವ ವಸ್ತುಗಳು : ನೀವು ಡಿಜೆ ವ್ಯವಹಾರ ಶುರು ಮಾಡುವ ಪ್ಲಾನ್ ಮಾಡಿದ್ರೆ ಅದಕ್ಕೆ ಏನೇನು ಬೇಕು ಎಂಬುದನ್ನು ತಿಳಿದಿರಬೇಕು. ಸಿಡಿ ಪ್ಲೇಯರ್, ಲ್ಯಾಪ್ಟಾಪ್, ಚಾನೆಲ್ ಮಾಸ್ಟರ್, ಧ್ವನಿ ಪೆಟ್ಟಿಗೆ, ಪಾರ್ಕ್ ಲೈಟ್, ಡಿಜೆ ಮಿಕ್ಸರ್, ಮೈಕ್, ಕೇಬಲ್, ಆಂಪ್ಲಿಫಯರ್, ಡಾನ್ಸ್ (Dance) ಮಾಡಲು ಜಾಗದ ಅವಶ್ಯಕತೆಯಿರುತ್ತದೆ. 

ಡಿಜೆ ವ್ಯವಹಾರಕ್ಕೆ ನೋಂದಣಿ : ನೀವು ಟೆಂಟ್ ಹೌಸ್ ಹೊಂದಿದ್ದರೆ ಮತ್ತು ಒಂದು ಅಥವಾ ಎರಡು ಡಿಜೆಗಳನ್ನು ಇಟ್ಟುಕೊಂಡಿದ್ದರೆ  ಇದಕ್ಕೆ  ನೋಂದಣಿ ಮತ್ತು ಪರವಾನಗಿ ಅಗತ್ಯವಿಲ್ಲ. ಆದರೆ ನೀವು ಜನರಿಗೆ ದೊಡ್ಡ ಪ್ರಮಾಣದಲ್ಲಿ ಡಿಜೆ ಸೇವೆಯನ್ನು ಒದಗಿಸಲು ಬಯಸಿದರೆ ನೋಂದಣಿ ಅಗತ್ಯವಿರುತ್ತದೆ. ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯಬೇಕಾಗುತ್ತದೆ. ನೀವು ನಿಮ್ಮ ವಸ್ತುಗಳನ್ನು ವಿಮೆ ಮಾಡಿದ್ರೆ ಒಳ್ಳೆಯದು. ಒಂದ್ವೇಳೆ ವಸ್ತು ಹಾಳಾದ್ರೆ ಅಥವಾ ಕಳೆದು ಹೋದ್ರೆ ನಿಮಗೆ ಹಣ ಸಿಗುತ್ತದೆ.

Reusable Ideas : ಡೇಟ್ ಬಾರ್ ಆದ ಕ್ರೆಡಿಟ್ ಕಾರ್ಡ್ ಹೀಗೆ ಬಳಸಿ

ಡಿಜೆ ವ್ಯವಹಾರದ ಹೂಡಿಕೆ : ಡಿಜೆ ವ್ಯವಹಾರಕ್ಕೆ ನೀವು ವಸ್ತುಗಳನ್ನು ಖರೀದಿ ಮಾಡ್ಬೇಕಾಗುತ್ತದೆ. ಹಾಗಾಗಿ ಎಲ್ಲಾ ವಸ್ತುಗಳನ್ನು ಖರೀದಿಸಲು ನಿಮಗೆ ಸುಮಾರು 5 ರಿಂದ 6 ಲಕ್ಷ ರೂಪಾಯಿ ಬೇಕಾಗುತ್ತವೆ. ಕೆಲಸಗಾರರಿಗೆ ಸಂಬಳ ನೀಡಬೇಕು. ಡಿಜೆ ವ್ಯವಹಾರ ಶುರು ಮಾಡುವ ಮೊದಲು ದೊಡ್ಡ ಮಟ್ಟದಲ್ಲಿ ಹಣ ಹೊಂದಿಸಿಕೊಳ್ಳುವುದು ಒಳ್ಳೆಯದು.

ಡಿಜಿ ವ್ಯವಹಾರದಿಂದ ಲಾಭ : ಜನರಲ್ಲಿ ಡಿಜೆ ಕ್ರೇಜ್ ಹೆಚ್ಚಾಗಿದೆ. ದೊಡ್ಡ ಮಟ್ಟದಲ್ಲಿ ವ್ಯವಹಾರ ಶುರು ಮಾಡಿದ್ರೆ ಲಾಭ ಹೆಚ್ಚು. ನೀವು ಹೇಗೆ ಮಾರ್ಕೆಟಿಂಗ್ ಮಾಡ್ತಿರಿ ಎಂಬುದು ಕೂಡ ಮುಖ್ಯವಾಗುತ್ತದೆ.
ಹೆಚ್ಚಿನ ಗಳಿಕೆ ಬೇಕು ಎನ್ನುವವರು ಜಾಹೀರಾತು ಮಾಡ್ಬೇಕಾಗುತ್ತದೆ. ಸ್ಥಳೀಯ ಜನರನ್ನು ಸಂಪರ್ಕಿಸಬೇಕು. ಸಾಮಾಜಿಕ ಜಾಲತಾಣದ ಮೂಲಕ ನಿಮ್ಮ ಡಿಜೆಯ ಪ್ರಚಾರ ಮಾಡ್ಬೇಕು. 

ಈಗಷ್ಟೇ ಉದ್ಯೋಗ ಬದಲಾಯಿಸಿದ್ದೀರಾ? ಹೊಸ ಕಂಪನಿಗೆ ಇಪಿಎಫ್ ಖಾತೆ ವರ್ಗಾಯಿಸಲು ಹೀಗೆ ಮಾಡಿ

ಜನರು ಬರಿ ಡಿಜೆ ಮಾತ್ರವಲ್ಲ ಕೆಲವು ಬಾರಿ ಫೈರ್ ಸ್ಪ್ಲಾಶರ್, ಸ್ಮೋಕ್ ಮೆಷಿನ್ ಇತ್ಯಾದಿಗಳನ್ನು ಬಯಸುತ್ತಾರೆ. ಆಗ ನೀವು ಅದಕ್ಕೆ ಪ್ರತ್ಯೇಕ ಚಾರ್ಜ್ ಮಾಡ್ಬೇಕು. ಡಿಜೆಗಳ ಬುಕಿಂಗ್ ಶುಲ್ಕ ಸಾಮಾನ್ಯವಾಗಿ 6,000 ರೂಪಾಯಿಯಿಂದ 25,000 ರೂಪಾಯಿ ಇರುತ್ತದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೀವು ಹಣವನ್ನು ತೆಗೆದುಕೊಳ್ಳಬಹುದು. ನಿಮ್ಮ ಬುಕಿಂಗ್ ಶುಲ್ಕವನ್ನು 10,000 ಇಟ್ಟಿದ್ದೀರಿ ಎಂದಾದ್ರೆ ಒಂದು ತಿಂಗಳಲ್ಲಿ 15 ದಿನ ಬುಕ್ಕಿಂಗ್ ಆಗಿದ್ರೆ ನೀವು 1.5 ಲಕ್ಷ ರೂಪಾಯಿವರೆಗೆ ಸುಲಭವಾಗಿ ಆದಾಯ ಗಳಸಬಹುದಾಗಿದೆ. ನಿಮ್ಮಲ್ಲಿ ಏನೆಲ್ಲ ಸೌಲಭ್ಯವಿದೆ ಹಾಗೂ ನೀವು ಜನರನ್ನು ಹೇಗೆ ಮನರಂಜಿಸುತ್ತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ. 
 

Follow Us:
Download App:
  • android
  • ios