Personal Finance : ಸಾಲ ಪಡೆದವನು ಸತ್ರೆ ಯಾರು ತೀರಿಸ್ಬೇಕು?
ಸಾವು ಯಾವಾಗ ಬರುತ್ತೆ ತಿಳಿದೋರು ಯಾರು? ಹಾಗಾಗೆ ಜನರು ಮನೆ, ವಾಹನ, ಕೆಲಸ ಅಂಥ ಅನೇಕ ಕಾರ್ಯಕ್ಕೆ ಸಾಲ ಮಾಡ್ತಾರೆ. ಕೆಲವೊಮ್ಮೆ ಈ ಸಾಲ ಮರುಪಾವತಿ ಮಾಡದೆ ಸಾವನ್ನಪ್ಪುತ್ತಾರೆ. ಆಗ ಈ ಸಾಲದ ಹೊಣೆ ಯಾರ ಮೇಲೆ ಬೀಳುತ್ತೆ ಅನ್ನೋದು ನಿಮಗೆ ಗೊತ್ತಾ?
ಈಗ ಸಾಲ ಪಡೆಯೋದು ಬಹಳ ಸುಲಭ. ಆರಾಮವಾಗಿ ನೀವು ಬ್ಯಾಂಕ್ ಅಥವಾ ಹಣಕಾಸು ಕಂಪನಿಯಿಂದ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಗೆ ವೈಯಕ್ತಿಕ ಸಾಲ ತೆಗೆದುಕೊಳ್ಳೋದು ಸಮಸ್ಯೆಯಾಗುವುದಿಲ್ಲ. ಗೃಹ ಸಾಲ, ವಾಹನ ಸಾಲ, ವ್ಯಾಪಾರಕ್ಕೆ ಸಾಲ, ಶಿಕ್ಷಣಕ್ಕೆ ಸಾಲ ಹೀಗೆ ನಾನಾ ರೀತಿಯ ಸಾಲವನ್ನು ಬ್ಯಾಂಕ್ ನಮಗೆ ಒದಗಿಸುತ್ತದೆ. ಇದಕ್ಕಾಗಿ ನೀವು ನಿಮ್ಮ ಬಳಿ ಇರುವ ಆಸ್ತಿ, ಬಂಗಾರ ಯಾವುದನ್ನೂ ಒತ್ತೆಯಿಡಬೇಕಾಗಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಜನರು ಹಣಹೊಂದಿಸಲು ಸಾಧ್ಯವಾಗದ ಕಾರಣ ವೈಯಕ್ತಿಕ ಸಾಲದ ಮೊರೆ ಹೋಗ್ತಾರೆ. ಮನೆ ಅಥವಾ ವಾಹನ ಖರೀದಿ ವೇಳೆ ಅಷ್ಟು ಹಣ ಹೊಂದಿಸೋದು ಅಸಾಧ್ಯವಾದ ಮಾತು. ಈಗಿನ ದಿನಗಳಲ್ಲಿ ವಾಹನ, ಶಿಕ್ಷಣ, ಮನೆ ನಿರ್ಮಾಣ ಎಲ್ಲವೂ ಸಾಲದ ಮೇಲೆ ನಡೆಯೋದು ಹೆಚ್ಚು. ಅವಶ್ಯಕತೆಯಿದೆ ಅಂತಾ ಜನರು ಸಾಲವನ್ನೇನೋ ತೆಗೆದುಕೊಂಡಿರ್ತಾರೆ. ಆದ್ರೆ ಸಾಲ ಪಡೆದ ವ್ಯಕ್ತಿ ಸಾವನ್ನಪ್ಪಿದ್ರೆ? ಹೀಗೆ ಆದ್ರೆ ಆತ ಪಡೆದ ಸಾಲ ಮನ್ನಾ ಆಗುತ್ತದೆ ಎಂದು ಅನೇಕರು ಭಾವಿಸಿದ್ದಾರೆ. ಆದ್ರೆ ಇದು ತಪ್ಪು. ಬ್ಯಾಂಕ್ ಸಾಲ ಮರುಪಾವತಿ ವಿಷ್ಯಕ್ಕೆ ಸಂಬಂಧಿಸಿದಂತೆ ತನ್ನದೆ ನಿಯಮವನ್ನು ಹೊಂದಿದೆ. ನಾವಿಂದು ಸಾಲಗಾರ ಸಾವನ್ನಪ್ಪಿದ್ರೆ ಬ್ಯಾಂಕ್ ಏನು ಮಾಡುತ್ತದೆ ಎನ್ನುವ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಸಾಲ (Loan) ಪಡೆದ ವ್ಯಕ್ತಿ ಸಾವನ್ನಪ್ಪಿದ್ರೆ ಏನಾಗುತ್ತೆ? :
ಗೃಹ (Home) ಸಾಲದ ವಸೂಲಿ ಹೀಗಾಗುತ್ತೆ : ಬಹುತೇಕ ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಯೂ ಮನೆ ಕಟ್ಟಲು ಗೃಹ ಸಾಲದ ಸಹಾಯ ಪಡೆಯುತ್ತಾರೆ. ವ್ಯಕ್ತಿ ಗೃಹ ಸಾಲ ಪಡೆದ ನಂತ್ರ ಸಾವನ್ನಪ್ಪಿದ್ರೆ ಸಾಲ ತೀರಿಸೋರು ಯಾರು ಎನ್ನುವ ಪ್ರಶ್ನೆ ಬರುತ್ತದೆ. ಸಾವನ್ನಪ್ಪಿದ ವ್ಯಕ್ತಿಯ ಉತ್ತರಾಧಿಕಾರಿ ಆಸ್ತಿಯ ಹಕ್ಕನ್ನು ಪಡೆಯುತ್ತಾನೆ. ಆತನೇ ಬ್ಯಾಂಕ್ ಸಾಲವನ್ನು ಮರುಪಾವತಿಸುವ ಜವಾಬ್ದಾರಿ ಹೊರುತ್ತಾನೆ. ವಾರಸುದಾರ ಸಾಲವನ್ನು ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ಸತ್ತವರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಬ್ಯಾಂಕ್ (Bank) ಸಾಲವನ್ನು ಮರುಪಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಸಾಲವನ್ನು ತೆಗೆದುಕೊಳ್ಳುವಾಗ ಟರ್ಮ್ ವಿಮೆಯನ್ನು ಸಹ ಮಾಡ್ತಾರೆ. ಟರ್ಮ್ ವಿಮೆ ಮಾಡಿದ್ದರೆ ವಿಮಾ ಕಂಪನಿಗಳು ಸಾಲದ ಹಣವನ್ನು ಮರುಪಾವತಿ ಮಾಡುತ್ತವೆ.
ಅಮ್ಮ ಹೇಳಿದ ಮಕ್ಕಳ ಆಹಾರ ತಯಾರಿಸಿ ಕೋಟ್ಯಾಧಿಪತಿಯಾದ ಮಧುರೈ ವೈದ್ಯೆ
ಬ್ಯುಸಿನೆಸ್ (Business) ಲೋನ್ : ಬ್ಯಾಂಕ್‌ಗಳು ಸಣ್ಣ ಮತ್ತು ದೊಡ್ಡ ಉದ್ಯಮಿಗಳಿಗೆ ವ್ಯಾಪಾರ ಸಾಲಗಳನ್ನು ನೀಡುತ್ತವೆ. ಸಾಲವನ್ನು ತೆಗೆದುಕೊಳ್ಳುವ ಸಮಯದಲ್ಲಿಯೇ ಸಾಲಗಾರನ ಮರಣದ ಸಂದರ್ಭದಲ್ಲಿ ಯಾರು ಸಾಲವನ್ನು ಮರುಪಾವತಿಸುತ್ತಾರೆ ಎಂಬುದನ್ನು ಬ್ಯಾಂಕುಗಳು ನಿರ್ಧರಿಸುತ್ತವೆ. ವ್ಯಾಪಾರಸ್ಥರು ಸಾಲದ ಜೊತೆ ವಿಮಾ ರಕ್ಷಣೆಯನ್ನು ತೆಗೆದುಕೊಳ್ಳುತ್ತಾರೆ. ಆ ಸಮಯದಲ್ಲಿ ಸಾಲವನ್ನು ವಿಮಾ ಕಂಪನಿ ನೀಡುತ್ತದೆ. ಚಿನ್ನ, ಭೂಮಿ, ಮನೆ ಅಥವಾ ಪ್ಲಾಟ್, ಷೇರು ಸೇರಿದಂತೆ ಸಾಲದ ಒಟ್ಟು ಮೊತ್ತಕ್ಕೆ ಸಮನಾದ ಯಾವುದೇ ಆಸ್ತಿ (Property) ಯನ್ನು ಸಹ ಬ್ಯಾಂಕ್ ಮರುಪಡೆಯಬಹುದು.
ಕ್ರೆಡಿಟ್ ಕಾರ್ಡ್ (Credit Card) ಸಾಲ ಮರುಪಾವತಿ ಹೀಗೆ ? : ಕ್ರೆಡಿಟ್ ಕಾರ್ಡ್ ಹೊಂದಿರುವವರು ಅಕಾಲಿಕ ಮರಣ ಹೊಂದಿದರೆ, ಅಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ಅಥವಾ ಕಂಪನಿಯು ಕ್ರೆಡಿಟ್ ಕಾರ್ಡ್ ಹೊಂದಿರುವವರ ಉತ್ತರಾಧಿಕಾರಿಯಿಂದ ಹಣ ಪಡೆಯುತ್ತದೆ. ಹಣವಿಲ್ಲದ ಸಂದರ್ಭದಲ್ಲಿ ಆಸ್ತಿ ಜಪ್ತಿ ಮಾಡಿ ಸಾಲವನ್ನು ಮರುಪಾವತಿ ಮಾಡುತ್ತದೆ.
ವಿವಾಹ ಸಮಯದಲ್ಲಿ ಸ್ವೀಕರಿಸುವ ಸ್ತ್ರೀಧನಕ್ಕೆ ತೆರಿಗೆ ಇದೆಯಾ? ಪ್ರತಿಯೊಬ್ಬ ಮಹಿಳೆಗೂ ಈ ವಿಷಯ ತಿಳಿದಿರಲೇಬೇಕು
ವೈಯಕ್ತಿಕ ಸಾಲವನ್ನು (Personal Loan) ಹೀಗೆ ಪಡೆಯುತ್ತೆ ಬ್ಯಾಂಕ್ : ವೈಯಕ್ತಿಕ ಸಾಲವು ವಿಮೆ ಸಾಲವಾಗಿರುತ್ತದೆ. ಸಾಲಗಾರ ಸತ್ತರೆ, ಬ್ಯಾಂಕ್ ವಿಮಾ ಕಂಪನಿಯಿಂದ ಸಾಲವನ್ನು ಮರುಪಡೆಯುತ್ತದೆ. ಕೆಲವೊಮ್ಮೆ ಬ್ಯಾಂ ವೈಯಕ್ತಿಕ ಸಾಲವನ್ನು ಸಾಲಗಾರನ ವಾರಸುದಾರನಿಂದ ಪಡೆಯುತ್ತದೆ.