ದಿನಕ್ಕೊಂದು ಪೆಗ್, ವಾರಕ್ಕೆ ಎರಡು ಪೆಗ್ ಅಂತಾ ಮದ್ಯಪಾನ ಮಾಡುವ ಭಾರತೀಯರು, ಮದ್ಯಪಾನ ಮಾರುಕಟ್ಟೆಯ ವಿಸ್ತರಣೆಗೆ ಕಾರಣವಾಗಿದ್ದಾರೆ. ಲಾಭಕರ ಉದ್ಯೋಗ ಶುರು ಮಾಡ್ಬೇಕೆಂದ್ರೆ ನೀವೂ ಮದ್ಯದಂಗಡಿ ತೆರೆಯಬಹುದು. ಯಾಕೆಂದ್ರೆ ಮುಂದಿನ ದಿನಗಳಲ್ಲಿ ಇದ್ರ ವ್ಯವಹಾರ ಮತ್ತಷ್ಟು ವಿಸ್ತಾರಗೊಳ್ಳಲಿದೆ.
ಜನಸಂಖ್ಯೆಯಲ್ಲಿ ಮುಂದಿರೋ ಭಾರತೀಯರು ಬಾಯಲ್ಲಿ ಬಡತನ ಅಂತಾ ಮಾತನಾಡ್ತಾರೆ ಅಷ್ಟೆ, ಕೈನಲ್ಲಿ ಕಾಸಿಲ್ಲ ಅಂದ್ರೂ ಕುಡಿಯೋದು ಮಾತ್ರ ಬಿಡೋದಿಲ್ಲ. ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳ ಮದ್ಯಪಾನಿಗಳ ಸಂಖ್ಯೆ ಹೆಚ್ಚಾಗಿದೆ. ಯುವಜನತೆಯಿಂದ ವೃದ್ಧರವರೆಗೆ, ಪುರುಷರಿಂದ ಮಹಿಳೆಯರವರೆಗೆ ಬಹುತೇಕರು ಮದ್ಯಪಾನ ಇಷ್ಟಪಡ್ತಾರೆ. ಮದ್ಯಪಾನ ಮಾರಾಟ ಅಂಗಡಿ ಮುಂದೆ ಸದಾ ಇರುವ ಜನರನ್ನು ನೋಡಿಯೇ ನೀವು ಅಂದಾಜಿಸಬಹುದು. ಯಾವುದೇ ಸಂದರ್ಭದಲ್ಲೂ ನಷ್ಟವಿಲ್ಲದೆ ವ್ಯವಹಾರ ನಡೆಸುವವರು ಮದ್ಯಪಾನ ಅಂಗಡಿ ಮಾಲೀಕರು. ಇದು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸ್ಪಷ್ಟ ಅರಿವಿಗೆ ಬಂದಿದೆ.
ಅದ್ರಲ್ಲೂ ವಿಸ್ಕಿ (Whiskey) ಮತ್ತು ಜಿನ್ (Gin) ಬಳಸುವವರ ಸಂಖ್ಯೆ ಹೆಚ್ಚಿದೆ. ಭಾರತದ ಮಾರುಕಟ್ಟೆಯಲ್ಲಿ ವಿಸ್ಕಿ ಮಾರಾಟ ಎತ್ತರದಲ್ಲಿದ್ದು ಅದನ್ನು ಹಿಂದಿಕ್ಕಲು ಯಾವುದ್ರಿಂದಲೂ ಸಾಧ್ಯವಿಲ್ಲ. 750 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗೋ ಮದ್ಯ (Alcohol) ಗಳಲ್ಲಿ ವಿಸ್ಕಿ ಒಂದಾಗಿದ್ದು, ಅದು ಅತಿ ಹೆಚ್ಚು ಮಾರಾಟವಾಗಿ ಮಾರುಕಟ್ಟೆಯಲ್ಲಿ ಮೇಲುಗೈ ಸಾಧಿಸಿದೆ.
60 ವರ್ಷಗಳ ಹಿಂದೆ ಅಜ್ಜಿ ಕಾಲೆಳಿತಿದ್ದೆ ಈಗ ಆಕೆಯಂತೆ ನಾ ಆಡುವೆ: ಸುಧಾಮೂರ್ತಿ
ಭಾರತದಲ್ಲಿ ವಿಸ್ಕಿ ಮಾರಾಟ ಎಷ್ಟಿದೆ ಗೊತ್ತಾ? : ಮಾಹಿತಿ ಒಂದರ ಪ್ರಕಾರ, ದೇಶದ ಒಟ್ಟು ಮದ್ಯ ಮಾರಾಟದ ಮೂರನೇ ಎರಡರಷ್ಟು ಪಾಲನ್ನು ವಿಸ್ಕಿ ಹೊಂದಿದೆ. ಕಡಿಮೆ ವೆಚ್ಚದ ವಿಸ್ಕಿ ಮಾರುಕಟ್ಟೆ ಶೇಕಡಾ 85ರಷ್ಟನ್ನು 10 ದೇಶೀಯ ಬ್ರ್ಯಾಂಡ್ ಕಬಳಿಸಿದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ಮದ್ಯದ ಪಾಲು ಭಾರತದ ಮಾರುಕಟ್ಟೆಯಲ್ಲಿ ಕೇವಲ ಶೇಕಡಾ 3.3ರಷ್ಟಿದೆ. ಮದ್ಯದ ಆಮದು ಹೆಚ್ಚಾಗ್ತಿದ್ದು, 2027 ರ ವೇಳೆಗೆ ಇದು ಶೇಕಡಾ 3.7 ರಷ್ಟು ತಲುಪುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಲಾಗಿದೆ.
ಕೊರೊನಾ ನಂತರ ಮದ್ಯದ ವ್ಯವಹಾರವು ಮತ್ತೆ ಟ್ರ್ಯಾಕ್‌ಗೆ ಬಂದಿದೆ. ಕೊರೊನಾ ನಂತ್ರ ವೋಡ್ಕಾ ಮಾರಾಟದಲ್ಲಿ ಶೇಕಡಾ 34ರಷ್ಟು ಹೆಚ್ಚಳ ಕಂಡು ಬಂದಿದೆ. ಇನ್ನು ಭಾರತವು ವಿಶ್ವದ ಐದನೇ ಅತಿದೊಡ್ಡ ವೈನ್ ಮಾರುಕಟ್ಟೆ ಹೊಂದಿದ್ದು, ಭಾರತ, ವೈನ್ ಮಾರಾಟದಲ್ಲಿ ಸುಮಾರು 53 ಬಿಲಿಯನ್ ಡಾಲರ್ ಮಾರುಕಟ್ಟೆ ಗಾತ್ರವನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಇದ್ರಲ್ಲಿ ಮತ್ತಷ್ಟು ಹೆಚ್ಚಳ ಕಂಡು ಬರುವ ನಿರೀಕ್ಷೆ ಇದೆ.
Business News: ಕೋಟಿ ಕೋಟಿ ಹಣ, ಆಸ್ತಿಯಿದ್ರೂ ತರಕಾರಿ ವ್ಯಾಪಾರ ಮಾಡ್ತಾರೆ ಈ ಮಂತ್ರಿ ಮಗ!
ಎಲ್ಲಿಂದ ಬರ್ತಿದೆ ವೈನ್ ? : ಖರೀದಿದಾರರ ಸಂಖ್ಯೆ ಹೆಚ್ಚಾಗ್ತಿದ್ದಂತೆ ಮಾರಾಟಗಾರರು ಆಮದು ಮಾಡಿಕೊಳ್ಳೋದು ಅನಿವಾರ್ಯ. ಮುಂದಿನ ಐದು ವರ್ಷಗಳಲ್ಲಿ ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ಒಕ್ಕೂಟದಿಂದ ವೈನ್ ಆಮದು ಹೆಚ್ಚಾಗಬಹುದು ಎಂದು ನಂಬಲಾಗಿದೆ. ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಈ ದೇಶಗಳೊಂದಿಗೆ ಮಾತುಕತೆ ನಡೆಯುತ್ತಿದೆ.
ನಂಬರ್ ಒನ್ ನಲ್ಲಿ ಇರೋದು ಯಾವುದು ಗೊತ್ತಾ? : ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಮತ್ತು ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ISWAI) ನ ಸಿಇಒ ನೀತಾ ಕಪೂರ್ ಪ್ರಕಾರ, ಭಾರತೀಯ ಗ್ರಾಹಕರು ಹೊಸ ರೀತಿಯ ವಿಸ್ಕಿಯನ್ನು ಪ್ರಯತ್ನಿಸುತ್ತಿದ್ದಾರಂತೆ. ಇದರಲ್ಲಿ ಸ್ಕಾಚ್ ಮೊದಲ ಸ್ಥಾನದಲ್ಲಿದೆ. ಐರ್ಲೆಂಡ್, ಅಮೆರಿಕ, ಜಪಾನ್ ಮತ್ತು ಕೆನಡಾದಿಂದಲೂ ವಿಸ್ಕಿಗೆ ಬೇಡಿಕೆ ಹೆಚ್ಚುತ್ತಿದೆ. ಇದರೊಂದಿಗೆ ಭಾರತೀಯ ಸಿಂಗಲ್ ಮಾಲ್ಟ್ ಗಳಿಗೂ ಬೇಡಿಕೆ ಹೆಚ್ಚಿದೆ.
ರೆಡಿ ಟು ಡ್ರಿಂಕ್ ಮಾರಾಟದಲ್ಲಿ ಏರಿಕೆ : ವೇಗವಾಗಿ ಬೆಳವಣಿಗೆ ಕಾಣ್ತಿರುವ ವಿಭಾಗದಲ್ಲಿ ರೆಡಿ ಟು ಡ್ರಿಂಕ್ ಪಾನೀಯ ಮೊದಲ ಸ್ಥಾನದಲ್ಲಿದೆ. ಕಳೆದ ವರ್ ಇದರ ಮಾರಾಟ ಸುಮಾರು ಶೇಕಡಾ 40 ರಷ್ಟು ಹೆಚ್ಚಾಗಿದೆ. ಮುಂದಿನ ಐದು ವರ್ಷಗಳಲ್ಲಿ ಮತ್ತಷ್ಟು ಅಂದ್ರೆ ಎರಡಂಕಿಯ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.
ವೈನ್ ರಫ್ತು ಹೆಚ್ಚಳ ಸಾಧ್ಯತೆ : ದೇಶದ ಶೇಕಡ 20ರಷ್ಟು ವೈನ್ ರಫ್ತಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಇದರ ಮಾರಾಟವು ಶೇಕಡಾ 6.6 ರ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದಲ್ಲದೆ ಮುಂದಿನ ಐದು ವರ್ಷಗಳಲ್ಲಿ ಸ್ಪಿರಿಟ್ಸ್ ಮಾರಾಟವು ಶೇಕಡಾ 3.7ರಷ್ಟು ಮತ್ತು ಬಿಯರ್ ಮಾರಾಟವು ಶೇಕಡಾ 2.7 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯನ್ನು ಹೊಂದಲಾಗಿದೆ.
