Asianet Suvarna News Asianet Suvarna News

ಹೀಗೂ ಮಾಡ್ತಾರಾ? ATMನಲ್ಲಿ ಹಣ ಡ್ರಾ ಮಾಡುವ ಮುನ್ನ ವಿಡಿಯೋ ತಪ್ಪದೇ ನೋಡಿ

ಎಟಿಎಂನಿಂದ ಹಣ ಡ್ರಾ ಮಾಡುವ ಮುನ್ನ ಎಚ್ಚರ, ಹೀಗೂ ಕಳ್ಳತನ ಮಾಡ್ತಾರೆ| ಹಣ ಡ್ರಾ ಮಾಡುವ ಮುನ್ನ ದೆಹಲಿಯಲ್ಲಿ ನಡೆದ ಈ ಘಟನೆಯ ವಿಡಿಯೋ ನೋಡಲು ಮರೆಯದಿರಿ| ಎಚ್ಚರವಹಿಸಿ ಸೇಫಾಗಿರಿ

When using an ATM do these checks Paytm founder warns
Author
Bangalore, First Published Aug 28, 2019, 2:34 PM IST

ನವದೆಹಲಿ[ಆ.28]: ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ವಿಡಿಯೋ ಒಂದನ್ನು ಟ್ವೀಟ್ ಮಾಡುತ್ತಾ ATMನಿಂದ ಹಣ ಡ್ರಾ ಮಾಡುವ ಮುನ್ನ ಜನರು ಎಚ್ಚರಿಕೆಯಿಂದಿರಬೇಕು ಎಂದಿದ್ದರು. ವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಯಾವ ರೀತಿ ಎಟಿಎಂ ಕಾರ್ಡ್ ಮಾಹಿತಿಯನ್ನು ಕದಿಯುತ್ತಾರೆ ಎಣಂದು ತೋರಿಸಲಾಗಿದೆ. 

ಈ ಶಾಕಿಂಗ್ ವಿಡಿಯೋದಲ್ಲಿ ಎಟಿಎಂ ಮಶೀನ್‌ನಲ್ಲಿ ಸೆಟ್ಟಿಂಗ್ ಒಂದನ್ನು ಮಾಡುವ ಮೂಲಕ, ಎಟಿಎಂ ಕ್ಲೋನ್ ಮಾಡಿ ನಿಮ್ಮ ಖಾತೆಯಿಂದ ಹೇಗೆ ಹಣ ಡ್ರಾ ಮಾಡಬಹುದೆಂಬುವುದನ್ನು ತೋರಿಸಲಾಗಿದೆ. ಈ ವಿಡಿಯೋ ಪ್ರತಿಯೊಬ್ಬ ಎಟಿಎಂ ಬಳಕೆದಾರ ನೋಡಲೇಬೇಕು. 

ವಿಜಯ್ ಶೇಖರ್ ಶೇರ್ ಮಾಡಿಕೊಂಡಿರುವ ಈ ವಿಡಿಯೋವನ್ನು ಮೊದಲು ರೋಸಿ ಎಂಬಾಕೆ ಶೇರ್ ಮಾಡಿಕೊಂಡಿದ್ದರು. ಇದು ದೆಹಲಿಯ ಕರನರಾ ಬ್ಯಾಂಕ್ ಎಟಿಎಂನಲ್ಲಿ ನಡೆದ ಘಟನೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಇನ್ನು ಕೆನರಾ ಬ್ಯಾಂಕ್ ಕೂಡಾ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, 'ಗ್ರಾಹಕರ ಸುರಕ್ಷತೆಗೆ ಸಂಬಂಧಿಸಿದಂತೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಯಾವುದೇ ಮಾಹಿತಿ ಇಲ್ಲಿ ಕಳವಾಗಿಲ್ಲ. ಇನ್ನು ಶೀಘ್ರದಲ್ಲೇ ಹಣ ಡ್ರಾ ಮಾಡುವ ಮುನ್ನ ಒಟಿಪಿ ನಮೂದಿಸುವ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದೇವೆ' ಎಂದಿದ್ದಾರೆ.

Follow Us:
Download App:
  • android
  • ios