ಸೋಷಿಯಲ್ ಮೀಡಿಯಾದ ದುರ್ಬಳಕೆಯಿಂದ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ವಾಟ್ಸ್ಆ್ಯಪ್ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಮೆಟಾ ಕಂಪೆನಿಯು 84 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ. 10,707 ಬಳಕೆದಾರರ ದೂರುಗಳನ್ನು ಪರಿಗಣಿಸಿ, ಶೇಕಡಾ 93 ರಷ್ಟು ದೂರುಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಸ್ಪ್ಯಾಮ್, ತಪ್ಪು ಮಾಹಿತಿ ಹಂಚಿಕೆ, ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದಂತೆ ಆತಂಕಕಾರಿ ಬೆಳವಣಿಗೆಗಳೇ ಹೆಚ್ಚಾಗುತ್ತಾ ಹೋಗಿವೆ. ಒಳ್ಳೆಯ ಉದ್ದೇಶಕ್ಕೆ, ಸಂವಹಕ್ಕಾಗಿ ಸ್ಥಾಪಿತಗೊಂಡಿರುವ ಜಾಲತಾಣಗಳು ಇಂದು ಅಪಾಯಕಾರಿ ಮಟ್ಟವನ್ನು ತಲುಪಿಬಿಟ್ಟಿದೆ. ಅಪರಾಧಿಕ ಕೃತ್ಯಗಳಿಗೆ ಇವುಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಹಿಂಸಾಚಾರಗಳೂ ಹೆಚ್ಚುತ್ತಾ ಸಾಗಿವೆ. ಇದಾಗಲೇ ಹಲವಾರು ರೀತಿಯಲ್ಲಿ ವಾಟ್ಸ್ಆ್ಯಪ್ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೂ ಇವುಗಳು ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ, ವಾಟ್ಸ್ಆ್ಯಪ್ ಮಾತೃಸಂಸ್ಥೆ ಮೆಟಾ ಈಗ ದಿಟ್ಟ ಹೆಜ್ಜೆ ಇಟ್ಟಿದ್ದು, 84 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ. 10,707 ಬಳಕೆದಾರರಿಂದ ದೂರುಗಳು ಬಂದ ನಂತರ, ಶೇಕಡಾ 93 ರಷ್ಟು ದೂರುಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪೆನಿ ಹೇಳಿದೆ.
ಅಂದಹಾಗೆ, ಇಂಥದ್ದೊಂದು ಕ್ರಮ ತೆಗೆದುಕೊಳ್ಳಲು ಕಾರಣ, ವಾಟ್ಸ್ಆ್ಯಪ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದುದು ಮತ್ತು ವಂಚನೆಯ ಚಟುವಟಿಕೆಗಳಿಗೆ ಅವುಗಳನ್ನು ಬಳಸುತ್ತಿದ್ದುದು. 84 ಲಕ್ಷ ಖಾತೆಗಳನ್ನು ಇದಾಗಲೇ ವಿವಿಧ ಹಂತಗಳಲ್ಲಿ ನಿಷೇಧಿಸಲಾಗಿದ್ದು, ಈ ನಿರ್ಧಾರವು ಬಳಕೆದಾರರಿಗೆ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಮೆಟಾ ಕಂಪೆನಿ ಹೇಳುತ್ತದೆ. ಮೆಟಾದ ಪಾರದರ್ಶಕತೆ ವರದಿಯ ಪ್ರಕಾರ, ವಾಟ್ಸ್ಆ್ಯಪ್ ಭಾರತದಲ್ಲಿ 8.45 ಮಿಲಿಯನ್ (84 ಲಕ್ಷಕ್ಕೂ ಹೆಚ್ಚು) ಖಾತೆಗಳನ್ನು ನಿಷೇಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 4(1)(d) ಮತ್ತು ಸೆಕ್ಷನ್ 3A(7) ರ ನಿಬಂಧನೆಗಳನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ.
ಎರಡು ವರ್ಷಗಳ ಪ್ರೀತಿ- ವಾಟ್ಸ್ಆ್ಯಪ್ ಮೂಲಕ ಮದ್ವೆ! 12ನೇ ಕ್ಲಾಸ್ ವಿದ್ಯಾರ್ಥಿಗಳ ಲವ್ ಸ್ಟೋರಿ ಕೇಳಿ...
ವರದಿಯ ಪ್ರಕಾರ, ನಿಯಮಗಳ ಉಲ್ಲಂಘನೆಯಿಂದಾಗಿ 1.66 ಮಿಲಿಯನ್ ಖಾತೆಗಳನ್ನು ತಕ್ಷಣವೇ ನಿರ್ಬಂಧಿಸಲಾಗಿದೆ. ಉಳಿದ ವಾಟ್ಸ್ಆ್ಯಪ್ ಖಾತೆಗಳನ್ನು ಮೊದಲು ತನಿಖೆ ಮಾಡಿ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ನಿಷೇಧಿಸಲಾಗಿದೆ ಎಂದು ಮೆಟಾ ಕಂಪೆನಿ ಹೇಳಿದೆ. ವಾಟ್ಸ್ಆ್ಯಪ್ನ ಮೇಲ್ವಿಚಾರಣೆಯ ಸಮಯದಲ್ಲಿ 1.6 ಮಿಲಿಯನ್‌ಗಿಂತಲೂ ಹೆಚ್ಚು ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ. ಈ ಖಾತೆಗಳು ಈ ಹಿಂದೆಯೂ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಮೆಟಾ ಕಂಪೆನಿ ಕೊಟ್ಟಿರುವ ಕಾರಣಗಳು ಈ ರೀತಿಯಾಗಿವೆ.
- ಸ್ಪ್ಯಾಮಿಂಗ್ ಮತ್ತು ವಂಚನೆಯ ಚಟುವಟಿಕೆಗಳು ಹೆಚ್ಚಿರುವುದನ್ನು ಗಮನಿಸಲಾಗಿದೆ.
-ದೊಡ್ಡ ಪ್ರಮಾಣದಲ್ಲಿ ಸಂದೇಶಗಳನ್ನು ಕಳುಹಿಸುವ ಮೂಲಕ ಅಕ್ರಮ ಚಟುವಟಿಕೆಗಳನ್ನು ಬೆಂಬಲಿಸಿರುವುದು.
- ದಾರಿತಪ್ಪಿಸುವ/ಹಾನಿಕಾರಕ ಮಾಹಿತಿಯನ್ನು ಹಂಚಿಕೊಂಡಿರುವುದು,
-ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿರುವುದು ಇವೆಲ್ಲವೂ ಕಾರಣವಾಗಿವೆ.
ಮಹಿಳೆಯ ಪರ್ಫ್ಯೂಮ್ ಬಗ್ಗೆ ಪ್ರಶ್ನಿಸಿ ಕೆಲಸ ಕಳಕೊಂಡ ಉಬರ್ ಚಾಲಕ! ತಲೆಬಿಸಿ ಮಾಡಿಕೊಂಡ ಕಂಪೆನಿ
