Wedding Insurance : ಮದುವೆ ರದ್ದಾದ್ರೆ ಟೆನ್ಷನ್ ಬೇಡ,ಇಲ್ಲಿ ಸಿಗುತ್ತೆ 10 ಲಕ್ಷ ರೂ.
ಕೊರೋನಾ ಕಡಿಮೆಯಾದಾಗ ಮುಹೂರ್ತ ಇಲ್ಲ,ಮುಹೂರ್ತ ಇದ್ದಾಗ ಕೊರೋನಾ ಕಾಟ.ಮದುವೆಯಾಗ್ತಿರೋರ ಗೋಳು ಇದು.ಎಲ್ಲ ಮುಗೀತು,ಮದುವೆಯಾಗೋಣ ಅಂತಾ ಎಲ್ಲರಿಗೂ ಬುಕ್ಕಿಂಗ್ ಹಣ ಕೊಟ್ಟಾದ್ನೇಲೆ ಮತ್ತೆ ಕೊರೋನಾ ಹೆಚ್ಚಾಗಿದೆ. ಮದುವೆ ಕ್ಯಾನ್ಸಲ್ ಮಾಡಿದ್ರೆ ಹಣ ಹೋಗುತ್ತೆ. ಮದುವೆ ಮಾಡೋಕೆ ಆಗಲ್ಲ ಎನ್ನುವವರಿಗೆ ಇಲ್ಲೊಂದು ನಿರಾಳತೆ ನೀಡೋ ಸುದ್ದಿಯಿದೆ.
Business Desk: ಸದ್ಯದ ಮಟ್ಟಿಗೆ ಕೊರೋನಾ (Corona) ಕಡಿಮೆಯಾಗುವಂತೆ ಕಾಣ್ತಿಲ್ಲ.ಕೊರೋನಾ,ಡೆಲ್ಟಾ(Delta),ಒಮಿಕ್ರಾನ್ (Omicron) ಹೀಗೆ ಒಂದಾದ್ಮೇಲೆ ಒಂದರಂತೆ ಹೊಸ ಹೊಸ ರೂಪಾಂತರಿಗಳು ಕಾಣಿಸಿಕೊಳ್ತಿವೆ. ಈ ಮಧ್ಯೆ ಮದುವೆಯಾಗುವವರ ಗೋಳು ಯಾರಿಗೂ ಬೇಡ. ಮದುವೆ (Marriage) ಋತು ಶುರುವಾಗ್ತಿದ್ದಂತೆ ಕೊರೊನಾ ಅಬ್ಬರ ಜಾಸ್ತಿಯಾಗುತ್ತದೆ. ಆಡಂಬರದ ಮದುವೆಯಿರಲಿ(Wedding),ಸಂಬಂಧಿಕರು,ಕುಟುಂಬಸ್ಥರ ಮಧ್ಯೆ ದಾಂಪತ್ಯಕ್ಕೆ ಕಾಲಿಡಲೂ ಇದು ಬಿಡ್ತಿಲ್ಲ.ಕೊರೊನಾ ಮೂರನೇ ಅಲೆ ಭಯದಲ್ಲಿ ಅನೇಕ ರಾಜ್ಯಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ತಿವೆ. ಮದುವೆ-ಸಮಾರಂಭಗಳಿಗೆ ಕಡಿವಾಣ ಹಾಕಲಾಗ್ತಿದೆ. ಮದುವೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಮತ್ತೆ ಸೀಮಿತಗೊಳಿಸಲಾಗ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi) 20 ಜನರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಅನೇಕ ಜನರು ಎಲ್ಲ ತಯಾರಿ ಮುಗಿದಿದ್ದರೂ ಮದುವೆ ಮುಂದೂಡುತ್ತಿದ್ದಾರೆ. ಆರ್ಥಿಕ (Economic) ನಷ್ಟದ ನಡುವೆಯೂ ಅನೇಕರು ಮದುವೆಯನ್ನು ರದ್ದುಗೊಳಿಸಿದ್ದಾರೆ. ನೀವೂ ಕೊರೊನಾ ಸಮಯದಲ್ಲಿ ಮದುವೆಯನ್ನು ರದ್ದುಗೊಳಿಸಿದರೆ 10 ಲಕ್ಷ ರೂಪಾಯಿ ಪಡೆಯಬಹುದು. ಅದಕ್ಕೆ ನೀವು ಏನ್ಮಾಡ್ಬೇಕು? ಹೇಗೆ 10 ಲಕ್ಷ ಸಿಗುತ್ತೆ ಎಂಬುದರ ವಿವರ ಇಲ್ಲಿದೆ.
ಮದುವೆಯ ವಿಮೆ (Insurance): ಮದುವೆಗಾಗಿ ಬ್ಯಾಂಕ್ವೆಟ್ ಹಾಲ್, ಮದುವೆ ಹಾಲ್, ಫಾರ್ಮ್ ಹೌಸ್(Farm house) ಇತ್ಯಾದಿಗಳ ಬುಕ್ಕಿಂಗ್(Booking) ಈಗಾಗಲೇ ನಡೆದಿರುತ್ತದೆ. ಆದ್ರೆ ಕೊರೊನಾ ಕಾರಣಕ್ಕೆ ಮದುವೆ ಮುಂದೂಡಲಾಗುತ್ತೆ. ಬುಕ್ಕಿಂಗ್ ಹಣ ಹಿಂದೆ ಬರುವುದಿಲ್ಲ. ಇಂತಹ ಸಂದರ್ಭಗಳನ್ನು ಎದುರಿಸಲು ದೇಶದ ಹಲವು ವಿಮಾ ಕಂಪನಿಗಳು ವಿವಾಹ ವಿಮೆಯನ್ನು ನೀಡುತ್ತವೆ. ಮದುವೆ ವಿಮೆಯನ್ನು(wedding insurance) ನೀವು ಪಡೆದಿದ್ದರೆ ನಿಮಗೆ 10 ಲಕ್ಷ ರೂಪಾಯಿ ಸಿಗುತ್ತದೆ.
ITR e-Verification: 2019-20ನೇ ಆರ್ಥಿಕ ಸಾಲಿನ ITR ಇ-ದೃಢೀಕರಣ ಅಂತಿಮ ಗಡುವು ಫೆ.28ಕ್ಕೆ ವಿಸ್ತರಣೆ
ಮದುವೆ ವಿಮೆ(wedding insurance) ಮಾಡಿದ್ದರೆ ಕೊರೊನಾ ಸಂದರ್ಭದಲ್ಲಿ ಮದುವೆ ರದ್ದಾದಲ್ಲಿ ಚಿಂತಿಸಬೇಡಿ. ನಿಮಗೆ ಯಾವುದೇ ಆರ್ಥಿಕ ನಷ್ಟವಾಗುವುದಿಲ್ಲ. ವಿಮಾ ಕಂಪನಿಗಳು ಮದುವೆಗೆ ಮುಂಚಿತವಾಗಿ ಪ್ಯಾಕೇಜ್‌ಗಳನ್ನು ಸಿದ್ಧಪಡಿಸುತ್ತವೆ. ಅಗತ್ಯಕ್ಕೆ ಅನುಗುಣವಾಗಿ ಪ್ಯಾಕೇಜ್ ಇರುತ್ತದೆ.
ಯಾವುದಕ್ಕೆ ಸಿಗಲಿದೆ ಮದುವೆ ವಿಮೆ : ಮದುವೆ ವಿಮೆ ಮಾಡಿಸಿದ್ದು,ಮದುವೆ ರದ್ದಾದಲ್ಲಿ ನಿಮಗೆ ವಿಮಾ ಕಂಪನಿಗಳು(Insurance Companies) ಹಣ ನೀಡುತ್ತವೆ. ಮುಂಗಡ ಡಿಎಯನ್ನು ಅಡುಗೆದಾರರಿಗೆ ಪಾವತಿಸಿದ್ದರೆ, ಹಾಲ್ ಅಥವಾ ರೆಸಾರ್ಟ್‌ಗೆ ಮುಂಗಡ ಹಣ ನೀಡಿದ್ದರೆ, ಟ್ರಾವೆಲ್ ಏಜೆನ್ಸಿಗಳಿಗೆ ಮುಂಗಡ ಹಣವನ್ನು ನೀಡಿದ್ದರೆ, ಮದುವೆ ಕಾರ್ಡ್ಗಳ ಮುದ್ರಣಕ್ಕೆ ಹಣ ಪಾವತಿಸಿದ್ದರೆ, ಅಲಂಕಾರ ಮತ್ತು ಸಂಗೀತಕ್ಕಾಗಿ ಪಾವತಿಸಿದ ಹಣ, ಮದುವೆಯ ಸ್ಥಳದ ಡೆಕೋರೇಷನ್ ಗಾಗಿ ಹಣ ನೀಡಿದ್ದರೆ ಈ ಹಣವನ್ನು ವಿಮಾ ಕಂಪನಿಗಳು ನಿಮಗೆ ಹಿಂತಿರುಗಿಸುತ್ತವೆ.
ಮೊತ್ತದ ನಿರ್ಧಾರ : ಎಷ್ಟು ವಿಮೆ ಮಾಡಿದ್ದೀರಿ ಎಂಬುದರ ಆಧಾರದ ಮೇಲೆ ಮೊತ್ತ ನಿರ್ಧಾರವಾಗುತ್ತದೆ. ಒಂದು ವೇಳೆ ಮದುವೆಯ ದಿನಾಂಕ ಬದಲಾದರೂ ನೀವು ವಿಮೆ ಹಣವನ್ನು ಪಡೆಯಬಹುದು.
ಪ್ರೀಮಿಯಂ ಪಾವತಿ : ವಿಮಾ ಮೊತ್ತದ ಶೇಕಡಾ 0.7ರಿಂದ ಶೇಕಡಾ 2ರಷ್ಟು ಹಣವನ್ನು ನೀವು ಪ್ರೀಮಿಯಂ(Premium) ಮಾಡಬೇಕು. ಅಂದ್ರೆ ನೀವು 10 ಲಕ್ಷದ ವಿಮೆ ಮಾಡಿಸಿದ್ದರೆ 7,500 ರಿಂದ 15,000 ರೂಪಾಯಿಗಳ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಿಗಲ್ಲ ಹಣ : ವಿಮಾ ಕಂಪನಿಗಳು ಎಲ್ಲ ಕಾರಣಕ್ಕೂ ಹಣ ನೀಡುವುದಿಲ್ಲ. ಕೆಲ ಸಂದರ್ಭಗಳಲ್ಲಿ ಮದುವೆ ರದ್ದಾದಲ್ಲಿ ಅಥವಾ ಮುಂದೆ ಹೋದಲ್ಲಿ ಕ್ಲೈಮ್ ಸಿಗುವುದಿಲ್ಲ. ಭಯೋತ್ಪಾದಕ ದಾಳಿ,ಮುಷ್ಕರ, ವಧು,ವರರ ಅಪಹರಣ,ವಧು ಅಥವಾ ವರ ಸ್ವಂತ ತಪ್ಪಿನಿಂದ ರೈಲು ಅಥವಾ ವಿಮಾನ ತಪ್ಪಿಸಿಕೊಂಡು ಮದುವೆ ಮುಂದೆ ಹೋದ್ರೆ ಹಾಗೂ ಮದುವೆ ಬಟ್ಟೆಗೆ ಹಾನಿಯಾದ್ರೆ. ವಿದ್ಯುತ್ ಅವಘಡ, ಉದ್ದೇಶ ಪೂರ್ವಕವಾಗಿ ಮದುವೆಗೆ ಅಡ್ಡಿ ಅಥವಾ ಆತ್ಮಹತ್ಯೆ ಸಂದರ್ಭದಲ್ಲಿ ವಿಮೆ ಹಣ ನಿಮಗೆ ಸಿಗುವುದಿಲ್ಲ.
ಒಂದಕ್ಕಿಂತ ಹೆಚ್ಚು PAN Card ಹೊಂದಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ!
ವಿಮೆ ಪಡೆಯುವ ಮುನ್ನ: ವಿಮೆಯನ್ನು(Insurance) ತೆಗೆದುಕೊಳ್ಳುವ ಮೊದಲು, ಮದುವೆಯ ವೆಚ್ಚದ ಬಗ್ಗೆ ಎಲ್ಲ ಮಾಹಿತಿಯನ್ನು ವಿಮಾ ಏಜೆನ್ಸಿಗೆ ನೀಡಬೇಕು. ನಷ್ಟವಾದ ತಕ್ಷಣ ಕಂಪನಿಗೆ ತಿಳಿಸಬೇಕು. ಕಳ್ಳತನವಾಗಿದ್ದರೆ ಪೊಲೀಸರಿಗೆ ತಿಳಿಸಬೇಕು. ಎಫ್‌ಐಆರ್(FIR) ಪ್ರತಿಯನ್ನು ವಿಮಾ ಕಂಪನಿಗೆ ಹಸ್ತಾಂತರಿಸಬೇಕು. ಕ್ಲೈಮ್ ಮಾಡಲು ಫಾರ್ಮ್ ಭರ್ತಿ ಮಾಡಿ, ಕಂಪನಿಗೆ ಎಲ್ಲಾ ದಾಖಲೆ ಸಲ್ಲಿಸಬೇಕು. ಕಂಪನಿ ದಾಖಲೆ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳುತ್ತದೆ.