ವ್ಯಾಪಾರಸ್ಥರು ತಿಳಿಯಲೇಬೇಕಾದ ನಿಯಮ, ಅಮೆಜಾನ್ ಯಶಸ್ಸಿಗೆ ಕಾರಣವಾಯ್ತು ಎರಡು ಪಿಜ್ಜಾ ರೂಲ್ಸ್

ಬಿಲಿಯನೇರ್ ಜೆಫ್ ಬೆಜೋಸ್ ಬ್ಯುಸಿನೆಸ್ ಯಶಸ್ವಿಯಾಗಲು ಅನೇಕ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಅದ್ರಲ್ಲಿ ಎರಡು ಪಿಜ್ಜಾ ರೂಲ್ಸ್ ಹಳೆಯದಾದ್ರೂ ಈಗ್ಲೂ ಚಾಲ್ತಿಯಲ್ಲಿದೆ. ಅದ್ರ ವಿಶೇಷತೆ ಏನು ಗೊತ್ತಾ.

What Is The Two Pizza Rule In Effect At Amazon jeff bezoz roo

ಬ್ಯುಸಿನೆಸ್ ಯಶಸ್ಸಿಗೆ (Business Success) ಸಾಕಷ್ಟು ಫಾರ್ಮುಲಾ ಬಳಸಲಾಗುತ್ತದೆ. ಅನೇಕ ವಿಡಿಯೋಗಳನ್ನು ನೋಡಿರ್ತೀರಿ, ಇಲ್ಲ ನೀವೇ ಪಾಲನೆ ಮಾಡಿರ್ತೀರಿ. ಆದ್ರೆ ಎರಡು ಪಿಜ್ಜಾ ನಿಯಮ ನಿಮಗೆ ಗೊತ್ತಾ? ಅಮೆಜಾನ್ ನಂತ ಕಂಪನಿ ಯಶಸ್ಸಿನ ಮೆಟ್ಟಿಲೇರಲು ಕಾರಣವಾದ ನಿಯಮಗಳಲ್ಲಿ ಎರಡು ಪಿಜ್ಜಾ ನಿಯಮ ಕೂಡ ಸೇರಿದೆ.

ಅಮೆಜಾನ್ (Amazon) ನಲ್ಲಿ ಎರಡು ಪಿಜ್ಜಾ (Pizza) ನಿಯಮ ಎಂದು ಕರೆಯಲ್ಪಡುವ ವಿಚಿತ್ರ ನಿಯಮ ಜಾರಿಯಲ್ಲಿದೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಇದನ್ನು ಅಮೆಜಾನ್ ಆರಂಭಿಕ ದಿನಗಳಲ್ಲಿ ಪ್ರಾರಂಭಿಸಿದ್ದಾರೆ. ಇದು ವೃತ್ತಿ ಮತ್ತು ಆರ್ಥಿಕ ಯಶಸ್ಸಿಗೆ ಸಂಪೂರ್ಣ ಸಹಕಾರಿ ಎಂದು ನಂಬಲಾಗಿದೆ. 

ಕೋಟಿ ಗಳಿಸಿದ್ರೂ ಈತ ಜಿಪುಣೆ, ದುಡ್ಡಿಲ್ಲ ಎನ್ನೋರು ಈ ಸೇವಿಂಗ್ಸ್ ಟಿಪ್ಸ್ ಫಾಲೋ ಮಾಡ್ಬಹುದು!

ಎರಡು ಪಿಜ್ಜಾ ನಿಯಮ ಎಂದರೇನು? : ಅಮೆಜಾನ್ ಶುರು ಮಾಡುವ ಆರಂಭದಲ್ಲಿ ಜೆಫ್ ಬೆಜೋಸ್, ತಮ್ಮ ಉದ್ಯೋಗಿಗಳಿಗಾಗಿ ಒಂದು ನಿಯಮವನ್ನು ಜಾರಿಗೆ ತಂದ್ರು. ನಿಯಮ ಏನೆಂದ್ರೆ,  ಒಂದು ಮೀಟಿಂಗ್ (Meeting) ನಲ್ಲಿ ಎರಡು ಪಿಜ್ಜಾ ಆರ್ಡರ್ ಮಾಡಿದ್ರೆ ಅಲ್ಲಿರುವ ಎಲ್ಲರಿಗೂ ಹೊಟ್ಟೆ ತುಂಬಬೇಕು. ಅಂದ್ರೆ ಟೀಂ ದೊಡ್ಡದಾಗಿರಬಾರದು. ಅತಿ ಕಡಿಮೆ ಸದಸ್ಯರ ತಂಡವನ್ನು ರಚನೆ ಮಾಡಬೇಕು ಎಂಬ ನಿಯಮ ಇದು.  ಇದಕ್ಕೆ ಎರಡು ಪಿಜ್ಜಾ ತಂಡದ ನಿಯಮ ಎಂದು ಕರೆಯಲಾಯ್ತು. 

ಕ್ವಾಲಿಟಿ ತಂಡವನ್ನು ರಚಿಸಲು ಜೆಫ್ ಬೆಜೋಸ್ ಆದ್ಯತೆ ನೀಡಿದ್ರು. ಒಂದು ಮೀಟಿಂಗ್ ನಲ್ಲಿ ಎರಡು ಪಿಜ್ಜಾ, ಎಲ್ಲರ ಹೊಟ್ಟೆ ತುಂಬಿಸಲು ಸಾಧ್ಯವಾಗಿಲ್ಲ ಅಂದ್ರೆ ನಿಮ್ಮ ಬಳಿ ದೊಡ್ಡ ತಂಡವಿದೆ ಎಂದರ್ಥ. ಅದೇ ಒಂದು ಮೀಟಿಂಗನ್ನು ಎರಡು ಪಿಜ್ಜಾದಲ್ಲಿ ಖುಷಿಯಾಗಿ ಮುಗಿಸಿದ್ದೇವೆ ಅಂದ್ರೆ ನಾವು ಸರಿಯಾದ ಟ್ರ್ಯಾಕ್ ನಲಿ ಹೋಗ್ತಿದ್ದೇವೆ ಎಂದರ್ಥ. 

ಬಿಲಿಯನೇರ್ ಜೆಫ್ ಬೆಜೋಸ್ ಪ್ರಕಾರ, ತಂಡವು ಸರಿಯಾದ ಗಾತ್ರವನ್ನು ಹೊಂದಿದೆ ಎಂಬುದನ್ನು ಈ ಎರಡು ಪಿಜ್ಜಾ ನಿಯಮ ಖಚಿತಪಡಿಸುತ್ತದೆ. ಚಿಕ್ಕ ತಂಡದಿಂದ ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಬಹುದು ಎಂದು ಜೆಫ್ ಹೇಳುತ್ತಾರೆ. 

ಎರಡು ಪಿಜ್ಜಾ ಟೀಂ ಅಂದ್ರೆ ವಾಸ್ತವಿಕವಾಗಿ 10 ಜನರಿಗಿಂತ ಕಡಿಮೆ ಜನರ ತಂಡವಾಗಿದೆ. ಸಣ್ಣ ತಂಡಗಳು ಸಂವಹನದ ಸಾಲುಗಳನ್ನು ಕಡಿಮೆ ಮಾಡುತ್ತದೆ. ಅಧಿಕಾರಶಾಹಿಯನ್ನು ಕಡಿಮೆ ಮಾಡುತ್ತದೆ ಎಂದು ಅಮೆಜಾನ್  ವೆಬ್ ಸೇವೆಗಳ ಕಲ್ಚರಲ್ ಮುಖ್ಯಸ್ಥ ಡೇನಿಯಲ್ ಸ್ಲೇಟರ್ ಹೇಳಿದ್ದಾರೆ. ಈ ನಿಯಮ ತಂಡದ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಈ ತಂಡಗಳಿಗೆ ವಹಿಸಿದ ಜವಾಬ್ದಾರಿಯನ್ನು ಅವು ಬೇರೆ ತಂಡಕ್ಕೆ ನೀಡುವುದಿಲ್ಲ. ಹಾಗಾಗಿ ಈ ತಂಡಗಳು ತಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತವೆ ಎಂದು ಸ್ಲೇಟರ್ ಅಭಿಪ್ರಾಯಪಟ್ಟಿದ್ದಾರೆ. ಒಂದ್ವೇಳೆ ತಂಡ ಎರಡು ಪಿಜ್ಜಾ ತಂಡಕ್ಕಿಂತ ದೊಡ್ಡದಾಗಿ ಬೆಳೆದ್ರೆ ಅದನ್ನು ಅಮೆಜಾನ್ ಎರಡು ತಂಡವಾಗಿ ಬೇರ್ಪಡಿಸುತ್ತದೆ. ಇದು ಅಮೆಜಾನ್‌ನ ಯಶಸ್ಸಿನ ಎರಡು ಸ್ತಂಭಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳುತ್ತಾರೆ. 

ಎರಡು-ಪಿಜ್ಜಾ ನಿಯಮವು ವ್ಯಾಪಾರಕ್ಕೆ ಮಾತ್ರ ಉತ್ತಮವಲ್ಲ ಅದು ವೈಯಕ್ತಿಕ ಕೆಲಸಗಾರರಿಗೆ ತಮ್ಮ ಸಮಯವನ್ನು ಹಣವಾಗಿ ನೋಡಲು ಸಹಾಯ ಮಾಡುತ್ತದೆ ಎಂದು ಅನೇಕ ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಜೋಸ್‌ನ ಕಾನೂನು ದೊಡ್ಡ ಗುರಿಗಳನ್ನು ಅನೇಕ ಸಣ್ಣ ಕಾರ್ಯಗಳಾಗಿ ವಿಭಜಿಸುತ್ತದೆ. ಒಂದು ಕಾರ್ಯದಿಂದ ಇನ್ನೊಂದಕ್ಕೆ ತ್ವರಿತವಾಗಿ ಚಲಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಬೇಷರತ್ ಕ್ಷಮೆ ಕೇಳಿದ ಫೋನ್ ಪೇ ಸಿಇಒ; ಮತ್ತೆ Phonepe ಇನ್‌ಸ್ಟಾಲ್ ಮಾಡ್ತಾರಾ ವಿಶಾಲ ಹೃದಯದ ಕನ್ನಡಿಗರು?

ಅನೇಕ ವರ್ಷಗಳಿಂದ ಅಮೆಜಾನ್ ನಲ್ಲಿ ಜಾರಿಯಲ್ಲಿರುವ ಈ ನಿಯಮವನ್ನು ಅನೇಕರು ಖಂಡಿಸಿದ್ದಾರೆ. ಜೆಫ್ ಬೆಜೋಸ್ ಅವರ ಎರಡು-ಪಿಜ್ಜಾ ನಿಯಮವು ಹಳೆಯದಾಗಿದೆ ಮತ್ತು ಸುಧಾರಣೆಯ ಅಗತ್ಯವಿದೆ ಎಂದು ಕೆಲವರು ಹೇಳಿದ್ದಾರೆ. ಸಭೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಸೀಮಿತಗೊಳಿಸುವುದು ಉತ್ಪಾದಕತೆಯನ್ನು ಹೆಚ್ಚಿಸುವುದಿಲ್ಲ ಎಂದು ವಾರ್ಸ್ಟ್ರಾಮ್ ಎಂಟರ್‌ಪ್ರೆನಿಯರ್‌ ಸಿಇಒ ಹೇಳಿದ್ದಾರೆ. 

Latest Videos
Follow Us:
Download App:
  • android
  • ios