Petrol Diesel Price in Karnataka Today: ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ, ಡಾಲರ್‌ ಎದುರು ರೂಪಾಯಿಯ ಕುಸಿತ ಹಾಗೂ ರಷ್ಯಾ-ಉಕ್ರೇನ್‌ ನಡುವೆ ಮುಂದುವರಿದ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ದೊಡ್ಡ ಮಟ್ಟದಲ್ಲಿಯೇ ಇದೆ. ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಸುಂಕವನ್ನು ಕಡಿತ ಮಾಡುವ ನಿರ್ಧಾರ ಮಾಡಿತ್ತು. ಹಾಗಿದ್ದಲ್ಲಿ, ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಎಂಬ ವಿವರ ಇಲ್ಲಿದೆ.

ಬೆಂಗಳೂರು(ಜು.27): ಇಂಧನ ಬೆಲೆಯಲ್ಲಿ ಕೆಲವು ತಿಂಗಳಿಂದ ಯಾವುದೇ ಬದಲಾವಣೆಗಳು ಆಗಿಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಗಗನಕ್ಕೇರಿದ್ದ ಇಂಧನ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ, ಡಾಲರ್‌ ಎದುರು ರೂಪಾಯಿಯ ಕುಸಿತ ಹಾಗೂ ರಷ್ಯಾ-ಉಕ್ರೇನ್‌ ನಡುವೆ ಮುಂದುವರಿದ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ದೊಡ್ಡ ಮಟ್ಟದಲ್ಲಿಯೇ ಇದೆ. ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ ನಂತರ ರಷ್ಯಾ ವಿರುದ್ಧ ಜಗತ್ತಿನ ಬಲಾಢ್ಯ ದೇಶಗಳು ನಿಷೇಧ ಹೇರಿಕೆ ಮಾಡಿವೆ. ಆದರೆ ಭಾರತ ರಷ್ಯಾದಿಂದ ಇಂಧನವನ್ನು ಖರೀದಿಸುತ್ತಿದೆ. ಇತ್ತೀಚೆಗೆ ಈ ಬಗ್ಗೆ ಹೇಳಿಕೆ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ನಿಷೇಧ ತೆಗೆಯದಿದ್ದರೆ ತೈಲಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದಿದ್ದರು. ತೈಲ ಉತ್ಪಾದನಾ ದೇಶಗಳು ಬೆಲೆ ಏರಿಕೆ ಮಾಡಿದಾಗ ಆಮದು ಮಾಡಿಕೊಳ್ಳುವ ಭಾರತದಂತ ದೇಶಗಳ ಆರ್ಥಿಕತೆ ಮೇಲೆ ಪೆಟ್ಟು ಬೀಳುವುದು ಸಹಜ. ಅನಿವಾರ್ಯವಾಗಿ ಇಂಧನ ಬೆಲೆಯನ್ನು ಸರ್ಕಾರ ಹೆಚ್ಚಿಸಲೇಬೇಕಾಗುತ್ತದೆ. ಜತೆಗೆ ದೇಶದ ಹಣದುಬ್ಬರ ಕೂಡ ಏರಿಕೆಯಾಗಿದೆ. ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸುವ ನಿಟ್ಟಿನಲ್ಲೂ ಅಬಕಾರಿ ಸುಂಕ ಮುಖ್ಯವಾಗುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಇಂಧನ ಬೆಲೆ ಒಂದೇ ಇರುವುದಿಲ್ಲ, ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 102.61
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 102.09
ಬೆಳಗಾವಿ - ರೂ. 102.40
ಬಳ್ಳಾರಿ - ರೂ. 103.70
ಬೀದರ್ - ರೂ. 102.23
ವಿಜಯಪುರ - ರೂ. 101.86
ಚಾಮರಾಜನಗರ - ರೂ. 102.06
ಚಿಕ್ಕಬಳ್ಳಾಪುರ - ರೂ. 101.69
ಚಿಕ್ಕಮಗಳೂರು - ರೂ. 102.75
ಚಿತ್ರದುರ್ಗ - ರೂ. 103.90
ದಕ್ಷಿಣ ಕನ್ನಡ - ರೂ. 101.85
ದಾವಣಗೆರೆ - ರೂ. 103.91
ಧಾರವಾಡ - ರೂ. 101.67
ಗದಗ - ರೂ. 102.22
ಕಲಬುರಗಿ - ರೂ. 101.89
ಹಾಸನ - ರೂ. 101.94
ಹಾವೇರಿ - ರೂ. 102.35
ಕೊಡಗು - ರೂ. 103.36
ಕೋಲಾರ - ರೂ. 101.87
ಕೊಪ್ಪಳ - ರೂ. 103.13
ಮಂಡ್ಯ - ರೂ. 102.13
ಮೈಸೂರು - ರೂ. 101.46
ರಾಯಚೂರು - ರೂ. 101.89
ರಾಮನಗರ - ರೂ. 102.39 
ಶಿವಮೊಗ್ಗ - ರೂ. 103.66
ತುಮಕೂರು - ರೂ. 102.81 
ಉಡುಪಿ - ರೂ. 101.83
ಉತ್ತರ ಕನ್ನಡ - ರೂ. 104.30
ಯಾದಗಿರಿ - ರೂ. 102.26

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.51
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.33 
ಬಳ್ಳಾರಿ - ರೂ. 89.50
ಬೀದರ್ - ರೂ. 88.18 
ವಿಜಯಪುರ - ರೂ. 87.85
ಚಾಮರಾಜನಗರ - ರೂ. 88.00
ಚಿಕ್ಕಬಳ್ಳಾಪುರ - ರೂ. 87.67
ಚಿಕ್ಕಮಗಳೂರು - ರೂ. 88.48
ಚಿತ್ರದುರ್ಗ - ರೂ. 89.46
ದಕ್ಷಿಣ ಕನ್ನಡ - ರೂ. 87.78 
ದಾವಣಗೆರೆ - ರೂ. 89.47
ಧಾರವಾಡ - ರೂ. 87.67
ಗದಗ - ರೂ. 88.17
ಕಲಬುರಗಿ - ರೂ. 87.87
ಹಾಸನ - ರೂ. 87.69
ಹಾವೇರಿ - ರೂ. 88.28
ಕೊಡಗು - ರೂ. 88.99 
ಕೋಲಾರ - ರೂ. 87.93
ಕೊಪ್ಪಳ - ರೂ. 89.00
ಮಂಡ್ಯ - ರೂ. 88.06
ಮೈಸೂರು - ರೂ. 87.45
ರಾಯಚೂರು - ರೂ. 87.89
ರಾಮನಗರ - ರೂ. 88.29
ಶಿವಮೊಗ್ಗ - ರೂ. 89.33
ತುಮಕೂರು - ರೂ. 88.68
ಉಡುಪಿ - ರೂ. 87.76
ಉತ್ತರ ಕನ್ನಡ - ರೂ. 89.99 
ಯಾದಗಿರಿ - ರೂ. 88.21