ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲಿ ಏರಿಕೆ ಒಂದೆಡೆ ಆದರೆ, ಇಂಧನ ಬೆಲೆ ಏರಿಕೆ ಮತ್ತೊಂದೆಡೆ ಜನ ಸಾಮಾನ್ಯರನ್ನು ಬಾಧಿಸುತ್ತಿತ್ತು. ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಇಳಿಕೆ ದಾಖಲಾಗಿದ್ದು, ಇದನ್ನು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಜನರಿಗೆ ನೀಡುವತ್ತ ಗಮನ ನೀಡಬೇಕಿದೆ.
Petrol Diesel Price December 16th 2022: ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ದೊಡ್ಡ ಮಟ್ಟದ ಇಳಿಕೆ ದಾಖಲಾಗಿದೆ. ಪ್ರತಿ ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲದ ದರ ಈಗ ಪ್ರತಿ ಬ್ಯಾರಲ್‌ಗೆ 80 ಡಾಲರ್ ಸನಿಹದಲ್ಲಿದೆ. ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂಧನ ದರಗಳಲ್ಲಿ ಕೊಂಚ ಮಟ್ಟದ ಇಳಿಕೆ ದಾಖಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ದರದಲ್ಲಿ ಇಳಿಕೆ ಕಾಣುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಪೆಟ್ರೋಲ್ (Petrol), ಡೀಸೆಲ್ (Diesel) ಬೆಲೆ ಇಳಿಕೆ ಮಾಡುತ್ತಿಲ್ಲ. ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ (New Delhi), ಬೆಂಗಳೂರು (Bengaluru) ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಯಾವುದೇ ದೊಡ್ಡ ಮಟ್ಟ ವ್ಯತ್ಯಾಸ ಕಂಡಿಲ್ಲ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ದೇಶದ ಹಲವು ಕಡೆ ಇಂಧನ ದರಗಳಲ್ಲಿ ಬದಲಾಗುತ್ತದೆ. ರಾಜಧಾನಿ ಬೆಂಗಳೂರಿನಲ್ಲಿ 2022ರ ಮೇ ತಿಂಗಳಿನಿಂದಲೂ ಒಂದು ಲೀಟರ್ ಪೆಟ್ರೋಲ್‌ಗೆ 101.94 ರೂಪಾಯಿ ಇದ್ದು, ಅದರಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಡೀಸೆಲ್ ಅನ್ನು 87.89 ರೂ. ಗೆ ಮಾರಾಟ ಮಾಡಲಾಗುತ್ತಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
- ಬಾಗಲಕೋಟೆ - ರೂ. 102.48
- ಬೆಂಗಳೂರು - ರೂ. 101.94
- ಬೆಂಗಳೂರು ಗ್ರಾಮಾಂತರ - ರೂ. 101.94
- ಬೆಳಗಾವಿ - ರೂ. 101.80
- ಬಳ್ಳಾರಿ - ರೂ. 103.61
- ಬೀದರ್ - ರೂ. 102.28
- ವಿಜಯಪುರ - ರೂ. 102.24
- ಚಾಮರಾಜನಗರ - ರೂ. 102.10
- ಚಿಕ್ಕಬಳ್ಳಾಪುರ - ರೂ. 102.39
- ಚಿಕ್ಕಮಗಳೂರು - ರೂ. 104.29
- ಚಿತ್ರದುರ್ಗ - ರೂ. 103.11
- ದಕ್ಷಿಣ ಕನ್ನಡ - ರೂ. 101.85
- ದಾವಣಗೆರೆ - ರೂ. 103.35
- ಧಾರವಾಡ - ರೂ. 101.71
- ಗದಗ - ರೂ. 102.38
- ಕಲಬುರಗಿ - ರೂ. 102.44
- ಹಾಸನ - ರೂ. 101.88
- ಹಾವೇರಿ - ರೂ. 102.38
- ಕೊಡಗು - ರೂ. 103.28
- ಕೋಲಾರ - ರೂ. 101.81
- ಕೊಪ್ಪಳ - ರೂ. 103.10
- ಮಂಡ್ಯ - ರೂ. 102.17
- ಮೈಸೂರು - ರೂ. 101.50
- ರಾಯಚೂರು - ರೂ. 101.84
- ರಾಮನಗರ - ರೂ. 102.39
- ಶಿವಮೊಗ್ಗ - ರೂ. 102.76
- ತುಮಕೂರು - ರೂ. 102.81
- ಉಡುಪಿ - ರೂ. 101.81
- ಉತ್ತರ ಕನ್ನಡ - ರೂ. 103
- ಯಾದಗಿರಿ - ರೂ. 102.43
ಎಫ್ಎಂಸಿಜೆ ಕ್ಷೇತ್ರಕ್ಕೆ ರಿಲಯನ್ಸ್ ಎಂಟ್ರಿ; ಇಂಡಿಪೆಂಡೆನ್ಸ್ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಗಳ ಬಿಡುಗಡೆ
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
- ಬಾಗಲಕೋಟೆ - ರೂ. 88.40
- ಬೆಂಗಳೂರು - ರೂ. 87.89
- ಬೆಂಗಳೂರು ಗ್ರಾಮಾಂತರ - ರೂ. 87.89
- ಬೆಳಗಾವಿ - ರೂ. 87.79
- ಬಳ್ಳಾರಿ - ರೂ. 89.42
- ಬೀದರ್ - ರೂ. 88.23
- ವಿಜಯಪುರ - ರೂ. 88.19
- ಚಾಮರಾಜನಗರ - ರೂ. 88.04
- ಚಿಕ್ಕಬಳ್ಳಾಪುರ - ರೂ. 88.29
- ಚಿಕ್ಕಮಗಳೂರು - ರೂ. 89.90
- ಚಿತ್ರದುರ್ಗ - ರೂ. 88.79
- ದಕ್ಷಿಣ ಕನ್ನಡ - ರೂ. 87.78
- ದಾವಣಗೆರೆ - ರೂ. 89
- ಧಾರವಾಡ - ರೂ. 87.71
- ಗದಗ - ರೂ. 88.31
- ಕಲಬುರಗಿ - ರೂ. 88.37
- ಹಾಸನ - ರೂ. 87.67
- ಹಾವೇರಿ - ರೂ. 88.31
- ಕೊಡಗು - ರೂ. 88.94
- ಕೋಲಾರ - ರೂ. 87.77
- ಕೊಪ್ಪಳ - ರೂ. 88.96
- ಮಂಡ್ಯ - ರೂ. 88.10
- ಮೈಸೂರು - ರೂ. 87.49
- ರಾಯಚೂರು - ರೂ. 87.84
- ರಾಮನಗರ - ರೂ. 88.29
- ಶಿವಮೊಗ್ಗ - ರೂ. 88.54
- ತುಮಕೂರು - ರೂ. 88.68
- ಉಡುಪಿ - ರೂ. 87.74
- ಉತ್ತರ ಕನ್ನಡ - ರೂ. 88.82
- ಯಾದಗಿರಿ - ರೂ. 88.36
