Asianet Suvarna News Asianet Suvarna News

Business Ideas: ಸಣ್ಣ ಹೂಡಿಕೆ ಮಾಡಿ ಇಂದೇ ಗಳಿಕೆ ಶುರು ಮಾಡಿ

ವ್ಯಾಪಾರ ಶುರು ಮಾಡ್ಬೇಕೆಂದ್ರೆ ಅನೇಕ ಗೊಂದಲವಿರುತ್ತದೆ. ಹಾಕಿದ ಹಣವೆಲ್ಲ ನೀರಿನಲ್ಲಿ ಹೋಮವಾದ್ರೆ ಎನ್ನುವ ಭಯವಿರುತ್ತದೆ. ಅಂಥ ಸಂದರ್ಭದಲ್ಲಿ ನೀವು ಕಡಿಮೆ ಹೂಡಿಕೆಯಲ್ಲಿ ಬ್ಯಿಸಿನೆಸ್ ಆರಂಭಿಸಬಹುದು. ಇದ್ರಲ್ಲಿ ನಷ್ಟ ಕಡಿಮೆ.  
 

Small Business Ideas
Author
First Published Dec 16, 2022, 1:48 PM IST

ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ವ್ಯವಹಾರ ಮಾಡಲು ಬಯಸ್ತಾರೆ. ಒಮ್ಮೆ ವ್ಯಾಪಾರ ಕೈ ಹಿಡಿದ್ರೆ ಮತ್ತೆ ನಮ್ಮನ್ನು ಹಿಡಿಯೋರು ಯಾರೂ ಇರೋದಿಲ್ಲ. ಆದ್ರೆ ವ್ಯಾಪಾರದಲ್ಲಿ ಅಪಾಯವಿಲ್ಲವೆಂದಲ್ಲ. ಅನೇಕ ಬಾರಿ ನಷ್ಟಗಳಾಗುತ್ತವೆ. ಅದನ್ನು ಅರಗಿಸಿಕೊಳ್ಳುವ ಶಕ್ತಿ ಬೇಕಾಗುತ್ತದೆ. ಇಂದಿನ ಕಾಲದಲ್ಲಿ ವ್ಯಾಪಾರ ಮಾಡ್ತೇನೆ ಎನ್ನುವವರಿಗೆ ಆಯ್ಕೆಗಳು ಸಾಕಷ್ಟಿದೆ. ಕೆಲವೊಮ್ಮೆ ಹೆಚ್ಚಿರುವ ಆಯ್ಕೆಯೇ ತಲೆಬಿಸಿಗೆ ಕಾರಣವಾಗುತ್ತದೆ. ಯಾವ ಬ್ಯುಸಿನೆಸ್ ಶುರು ಮಾಡಿದ್ರೆ ಒಳ್ಳೆಯದು ಎಂಬ ಗೊಂದಲ ಜನರಲ್ಲಿ ಶುರುವಾಗುತ್ತದೆ. 

ಸಾಮಾನ್ಯವಾಗಿ ಬ್ಯುಸಿನೆಸ್ (Business) ಶುರು ಮಾಡುವ ಬಹುತೇಕರು ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಹಣ (Money) ಗಳಿಸಬಹುದಾದ ವ್ಯಾಪಾರ ಹುಡುಕುತ್ತಾರೆ. ನಿಮ್ಮ ಬಳಿ ಕೂಡ ಅಲ್ಪಸ್ವಲ್ಪ ಹಣವಿದ್ದರೆ ನೀವು ಸಣ್ಣ ವ್ಯಾಪಾರ ಶುರು ಮಾಡಬಹುದು. ನಂತ್ರ ಬಂದ ಆದಾಯವನ್ನೇ ವ್ಯವಹಾರಕ್ಕೆ ಹಾಕಿ, ಬ್ಯುಸಿನೆಸ್ ವಿಸ್ತರಿಸಬಹುದು. ನಾವಿಂದು ಕಡಿಮೆ ಬಜೆಟ್ ನಲ್ಲಿ ಶುರು ಮಾಡಬಹುದಾದ ಕೆಲ ವ್ಯಾಪಾರಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.

New Year 2023: ಹೊಸವರ್ಷನಾದ್ರೂ ದುಡ್ಡು ಉಳಿಸ್ಬೇಕು ಅಂದ್ಕೊಂಡಿದ್ದೀರಾ? ಇಲ್ಲಿದೆ ಟಿಪ್ಸ್‌

ಹೋಂ ಡೆಕೋರೇಷನ್ ಬ್ಯುಸಿನೆಸ್ :  ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಅಥವಾ ಮಾರಾಟ ಮಾಡಲು ಆಸಕ್ತಿ ಇದ್ದರೆ ನೀವು ಕಡಿಮೆ ಹೂಡಿಕೆಯಲ್ಲಿ ಈ ವ್ಯವಹಾರ ಶುರು ಮಾಡಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು ಹೆಚ್ಚಿನ ಹಣದ ಅವಶ್ಯಕತೆಯಿಲ್ಲ. ಇದನ್ನು ನೀವು ನಾನಾ ರೀತಿಯಲ್ಲಿ ಮಾಡಬಹುದು. ನೀವೇ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವುದು ಒಂದು ವಿಧ. ಇನ್ನೊಂದರಲ್ಲಿ ನೀವು ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಿ ಮಾರಾಟ ಮಾಡಬಹುದು. ಮತ್ತೊಂದು ವಿಧವೆಂದ್ರೆ ನೀವು ಅಲಂಕಾರಿಕ ವಸ್ತುಗಳನ್ನು ಬಾಡಿಗೆಗೆ ಪಡೆದು, ಮದುವೆ, ಪಾರ್ಟಿಗಳನ್ನು ಅಲಂಕರಿಸಿ ಹಣ ಪಡೆಯುವುದು. ಇದ್ರಲ್ಲಿ ಯಾವುದು ನಿಮಗೆ ಬೆಸ್ಟ್ ಎಂಬುದು ನಿಮ್ಮ ಆಯ್ಕೆಯಾಗಿರುತ್ತದೆ. ಆದ್ರೆ ಈ ಮೂರು ವಿಧದ ವ್ಯವಹಾರಕ್ಕೆ ಹೆಚ್ಚಿನ ಹಣದ ಅಗತ್ಯವಿರುವುದಿಲ್ಲ.  ನೀವು ಪಾರ್ಟಿ ಡೆಕೊರೇಷನ್ ಆಕರ್ಷಕವಾಗಿ ಮಾಡಿ ಜನರ ವಿಶ್ವಾಸ ಗಳಿಸಿದ್ರೆ ಹೆಚ್ಚೆಚ್ಚು ಆರ್ಡರ್ ಪಡೆಯಬಹುದು. 

ಹಳೆ ವಸ್ತುಗಳ ಖರೀದಿ ಮತ್ತು ಮಾರಾಟ : ಇದನ್ನು ಕೆಲ ಜನರು ಕೀಳಾಗಿ ನೋಡ್ತಾರೆ. ಆದ್ರೆ ಈ ವ್ಯವಹಾರದಲ್ಲಿ ಸಾಕಷ್ಟು ಲಾಭವಿದೆ. ಬಿಡುವಿಲ್ಲದ ಸಮಯದಲ್ಲಿ ಜನರಿಗೆ ಮನೆಯಲ್ಲಿ ಬಿದ್ದಿರುವ ಬೇಡದ ವಸ್ತುವನ್ನು ಹೊರಗೆ ಹಾಕಲು ಸಮಯವಿರುವುದಿಲ್ಲ. ನೀವು ಬೇಡದ ವಸ್ತುಗಳನ್ನು ಖರೀದಿ ಮಾಡಿ ಅದನ್ನು ಮಾರಾಟ ಮಾಡಬಹುದು. ಆರಂಭದಲ್ಲಿ 10 ಸಾವಿರ ರೂಪಾಯಿಯಿಂದ ನೀವು ಈ ವ್ಯವಹಾರ ಶುರು ಮಾಡಬಹುದು. ನಂತ್ರ ಲಾಭಕ್ಕೆ ತಕ್ಕಂತೆ ಅದನ್ನು ವಿಸ್ತರಿಸಬಹುದು.

ಹ್ಯಾಂಡ್ ಮೇಡ್ (Hand Made) ಉತ್ಪನ್ನಗಳ ವ್ಯವಹಾರ : ಸೃಜನಾತ್ಮಕ ಉತ್ಪನ್ನಗಳನ್ನು ತಯಾರಿಸಬಲ್ಲ ಮಹಿಳೆಯರಿಗೆ ಈ ವ್ಯಾಪಾರ  ಅತ್ಯುತ್ತಮ ವ್ಯಾಪಾರವೆಂದು ಪರಿಗಣಿಸಲಾಗಿದೆ. ಸಾಬೂನು, ಕೈಚೀಲಗಳು, ಚಿತ್ರಕಲೆ, ಆಭರಣ, ರಂಗೋಲಿ, 3ಡಿ ಇಂಪ್ರೆಷನ್ ಅಲಂಕಾರಿಕ ವಸ್ತುಗಳು, ಕೈಯಿಂದ ಮಾಡಿದ ಪೇಪರ್, ಉಡುಗೊರೆ ಬಾಕ್ಸ್ ಇತ್ಯಾದಿ. ನಿಮಗೆ ಆಸಕ್ತಿಯಿರುವ ವಸ್ತುವನ್ನು ತಯಾರಿಸಿ, ಅದನ್ನು ಸುಂದರವಾಗಿ ಪ್ಯಾಕ್ ಮಾಡಿ ನೀವು ಮಾರಾಟ ಮಾಡಬಹುದು. ಕಡಿಮೆ ಹೂಡಿಕೆಯಲ್ಲಿ ಮಾಡಬಹುದಾದ ವ್ಯವಹಾರ ಇದಾಗಿದೆ.  

Personal Finance: ಏಜೆಂಟ್ ಇಲ್ಲದೆ ಆಸ್ತಿ ಮಾರಾಟಕ್ಕೆ ಇಳಿದ್ರೆ ಆಗೋ ನಷ್ಟವೇನು?

ಕರ್ಟನ್ ಹೊಲಿಗೆ ವ್ಯಾಪಾರ : ಮನೆಯಿಂದ ವ್ಯಾಪಾರ ಮಾಡುವ ಜನರಿಗೆ ಈ ವ್ಯವಹಾರ ಉತ್ತಮ ವ್ಯಾಪಾರವಾಗಿದೆ. ಮಹಿಳೆಯರು ಮನೆಯಲ್ಲೇ ಕುಳಿತು ಈ ವ್ಯವಹಾರ ಮಾಡಬಹುದು. ಗ್ರಾಮೀಣ ಪ್ರದೇಶದ ಮಹಿಳೆಯರಾಗಲಿ ಅಥವಾ ನಗರ ಪ್ರದೇಶದ ಮಹಿಳೆಯರಾಗಲಿ, ಈ ವ್ಯವಹಾರದ ಮುಖ್ಯ ವಿಷಯವೆಂದರೆ ಇದರಲ್ಲಿ ಹೂಡಿಕೆ ಕಡಿಮೆ ಇರುಯ್ತದೆ. ಈಗಾಗಲೇ ಹೊಲಿಗೆ ಯಂತ್ರವನ್ನು ಹೊಂದಿದ್ದರೆ ಹೂಡಿಕೆ ಅಗತ್ಯವಿಲ್ಲ. ಕರ್ಟನ್ ಗೆ ಆರ್ಡರ್ ನೀಡುವ ವ್ಯಕ್ತಿಯೇ ಬಟ್ಟೆ ಕೂಡ ನೀಡುತ್ತಾನೆ. ಪ್ರತಿ ದಿನ ಒಂದರಿಂದ ಎರಡು ಕರ್ಟನ್ ಹೊಲಿದ್ರೂ ನೀವು 600ರವರೆಗೆ ಹಣ ಗಳಿಸಬಹುದು. 

Follow Us:
Download App:
  • android
  • ios