ಇಂದು ವಿಶ್ವಾದ್ಯಂತ ಕಚ್ಚಾ ತೈಲದ ಬೆಲೆಯಲ್ಲಿ ಒಂದೂವರೆ ಡಾಲರ್‌ ಕಡಿಮೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲ ಒಂದು ಬ್ಯಾರಲ್‌ಗೆ  81.21 ಡಾಲರ್‌ ಆಗಿದ್ದರೆ, ಡಬ್ಲ್ಯುಟಿಐ ಕಚ್ಚಾ ತೈಲದ ದರ ಒಂದು ಬ್ಯಾರಲ್‌ಗೆ 76.09 ಡಾಲರ್‌ ಆಗಿದೆ. ಅದರೊಂದಿಗೆ ದೇಶಾದ್ಯಂತ ಇಂಧನ ಬೆಲೆಗಳಲ್ಲಿ ಕೊಂಚ ಇಳಿಕೆಯಾಗಿದೆ. ರಾಜ್ಯದ ಮೇಲೂ ಅದು ಪರಿಣಾಮ ಬೀರಿದೆ.

Petrol Diesel Price December 16th 2022: ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ಕಳೆದೆರಡು ದಿನಗಳಿಂದ ದೊಡ್ಡ ಮಟ್ಟದ ಇಈಕೆ ದಾಖಲಾಗಿದೆ. ಪ್ರತಿ ಬ್ಯಾರಲ್‌ಗೆ 100 ಡಾಲರ್‌ ಗಡಿ ದಾಟಿದ ಕಚ್ಚಾ ತೈಲದ ದರ ಈಗ ಪ್ರತಿ ಬ್ಯಾರಲ್‌ಗೆ 80 ಡಾಲರ್‌ ಸಮೀಪದಲ್ಲಿದೆ. ಈ ಹಿನ್ನಲೆಯಲ್ಲಿ ದೇಶದ ಪ್ರಮುಖ ಮಹಾನಗರಗಳಲ್ಲಿ ಇಂಧನ ದರದಲ್ಲಿ ಕೊಂಚ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ದರದಲ್ಲಿ ಇಳಿಕೆ ಕಾಣುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಇಳಿಕೆ ಮಾಡುತ್ತಿಲ್ಲ. ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ (New Delhi), ಬೆಂಗಳೂರು (Bengaluru) ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ ಯಾವುದೇ ದೊಡ್ಡ ಮಟ್ಟ ವ್ಯತ್ಯಾಸವಾಗುತ್ತಿಲ್ಲ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ದೇಶದ ಹಲವು ಕಡೆ ಇಂಧನ ದರಗಳಲ್ಲಿ ಬದಲಾಗುತ್ತದೆ. ರಾಜಧಾನಿ ಬೆಂಗಳೂರಿನಲ್ಲಿ 2022ರ ಮೇ ತಿಂಗಳಿನಿಂದಲೂ ಒಂದು ಲೀಟರ್‌ ಪೆಟ್ರೋಲ್‌ಗೆ 101.94 ರೂಪಾಯಿ ಇದ್ದು, ಅದರಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.ಡೀಸೆಲ್​ ಅನ್ನು 87.89 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇಂದು ಉತ್ತರ ಕನ್ನಡದಲ್ಲಿ ಪೆಟ್ರೋಲ್‌ ಬೆಲೆಯಲ್ಲಿ 1.98 ರೂಪಾಯಿ ಇಳಿಕೆಯಾಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.70
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 101.58
  • ಬೆಳಗಾವಿ - ರೂ. 102.69
  • ಬಳ್ಳಾರಿ - ರೂ. 102.89
  • ಬೀದರ್ - ರೂ. 102.58
  • ವಿಜಯಪುರ - ರೂ. 102.24
  • ಚಾಮರಾಜನಗರ - ರೂ. 102.10
  • ಚಿಕ್ಕಬಳ್ಳಾಪುರ - ರೂ. 102.39
  • ಚಿಕ್ಕಮಗಳೂರು - ರೂ. 103.32
  • ಚಿತ್ರದುರ್ಗ - ರೂ. 103.84
  • ದಕ್ಷಿಣ ಕನ್ನಡ - ರೂ. 101.26
  • ದಾವಣಗೆರೆ - ರೂ. 104.04
  • ಧಾರವಾಡ - ರೂ. 101.71
  • ಗದಗ - ರೂ. 102.69
  • ಕಲಬುರಗಿ - ರೂ. 101.71
  • ಹಾಸನ - ರೂ. 102.01
  • ಹಾವೇರಿ - ರೂ. 102.58
  • ಕೊಡಗು - ರೂ. 103.47
  • ಕೋಲಾರ - ರೂ. 101.64
  • ಕೊಪ್ಪಳ - ರೂ. 103.02
  • ಮಂಡ್ಯ - ರೂ. 101.74
  • ಮೈಸೂರು - ರೂ. 101.50
  • ರಾಯಚೂರು - ರೂ. 102.83
  • ರಾಮನಗರ - ರೂ. 102.40
  • ಶಿವಮೊಗ್ಗ - ರೂ. 103.45
  • ತುಮಕೂರು - ರೂ. 102.62
  • ಉಡುಪಿ - ರೂ. 101.23
  • ಉತ್ತರ ಕನ್ನಡ - ರೂ. 102.32
  • ಯಾದಗಿರಿ - ರೂ. 102.43

ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.60
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.57
  • ಬೆಳಗಾವಿ - ರೂ. 88.60
  • ಬಳ್ಳಾರಿ - ರೂ. 88.77
  • ಬೀದರ್ - ರೂ. 88.50
  • ವಿಜಯಪುರ - ರೂ. 88.19
  • ಚಾಮರಾಜನಗರ - ರೂ. 88.04
  • ಚಿಕ್ಕಬಳ್ಳಾಪುರ - ರೂ. 88.29
  • ಚಿಕ್ಕಮಗಳೂರು - ರೂ. 88.98
  • ಚಿತ್ರದುರ್ಗ - ರೂ. 89.44
  • ದಕ್ಷಿಣ ಕನ್ನಡ - ರೂ. 87.25
  • ದಾವಣಗೆರೆ - ರೂ. 89.63
  • ಧಾರವಾಡ - ರೂ. 87.71
  • ಗದಗ - ರೂ. 88.59
  • ಕಲಬುರಗಿ - ರೂ. 87.71
  • ಹಾಸನ - ರೂ. 87.79
  • ಹಾವೇರಿ - ರೂ. 88.49
  • ಕೊಡಗು - ರೂ. 89.10
  • ಕೋಲಾರ - ರೂ. 87.62
  • ಕೊಪ್ಪಳ - ರೂ. 88.89
  • ಮಂಡ್ಯ - ರೂ. 87.71
  • ಮೈಸೂರು - ರೂ. 87.49
  • ರಾಯಚೂರು - ರೂ. 88.73
  • ರಾಮನಗರ - ರೂ. 88.31
  • ಶಿವಮೊಗ್ಗ - ರೂ. 89.16
  • ತುಮಕೂರು - ರೂ. 88.50
  • ಉಡುಪಿ - ರೂ. 87.22
  • ಉತ್ತರ ಕನ್ನಡ - ರೂ. 88.26
  • ಯಾದಗಿರಿ - ರೂ. 88.3

ಬ್ಯಾಂಕ್ ನಲ್ಲಿ ಡಿಜಿಟಲ್ ರೂಪಾಯಿ ಎಫ್ ಡಿ ಖಾತೆ ತೆರೆಯಲು ಅವಕಾಶವಿದೆಯಾ? ಕೇಂದ್ರ ಸರ್ಕಾರ ಏನ್ ಹೇಳಿದೆ?