ಬಜೆಟ್‌ ವೇಳೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಕಡಿಮೆಯಾಗುವ ನಿರೀಕ್ಷೆ ಇಟ್ಟಿದ್ದ ಜನಸಾಮಾನ್ಯನಿಗೆ ನಿರಾಸೆಯಾಗಿದೆ. ಸಾಮಾನ್ಯವಾಗಿ ಪ್ರತಿದಿನ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆಗುತ್ತಲೇ ಇರುತ್ತದೆ. ದೊಡ್ಡ ಮಟ್ಟದ ಬೆಲೆ ಏರಿಕೆಯಾಗದೇ ಕೆಲ ತಿಂಗಳುಗಳು ಕಳೆದಿವೆ ಅನ್ನೋದಷ್ಟೇ ಸಮಾಧಾನ.

ಬೆಂಗಳೂರು (ಫೆ.4): ದೇಶದಲ್ಲಿ ಇಂಧನ ಬೆಲೆಗಳಲ್ಲಿ 2023ರ ಫೆಬ್ರವರಿ 4 ರಂದು ಯಾವುದೇ ಬದಲಾವಣೆಯಾಗಿಲ್ಲ. ಸತತ 8ನೇ ತಿಂಗಳು ಇಂಧನ ಬೆಲೆಗಳಲ್ಲಿ ಯಾವುದೇ ದೊಡ್ಡ ಮಟ್ಟದ ಬದಲಾವಣೆಯಾಗಿಲ್ಲ. ದೆಹಲಿಯಲ್ಲ ಪೆಟ್ರೋಲ್‌ ಬೆಲೆ ಲೀಟರ್‌ಗೆ 96.72 ರೂಪಾಯಿ ಆಗಿದ್ದರೆ, ಡೀಸೆಲ್‌ ಪ್ರತಿ ಲೀಟರ್‌ಗೆ 89.62 ರೂಪಾಯಿ ಆಗಿದೆ. ಮೌಲ್ಯವರ್ಧಿತ ತೆರಿಗೆ (ವ್ಯಾಟ್), ಸರಕು ಸಾಗಣೆ ಶುಲ್ಕಗಳು, ಸ್ಥಳೀಯ ತೆರಿಗೆಗಳು ಇತ್ಯಾದಿಗಳಂತಹ ವಿವಿಧ ಮಾನದಂಡಗಳನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕಚ್ಚಾ ತೈಲ ಬೆಲೆಗಳು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಸಾಧಾರಣ ಲಾಭವನ್ನು ಗಳಿಸಿದವು ಆದರೆ ಇತರ ಪ್ರಮುಖ ಆರ್ಥಿಕತೆಗಳಲ್ಲಿನ ಕುಸಿತವನ್ನು ಸರಿದೂಗಿಸಲು ಚೀನಾದಲ್ಲಿ ಇಂಧನ ಬೇಡಿಕೆಯಲ್ಲಿ ಬಲವಾದ ಚೇತರಿಕೆಯ ಹೆಚ್ಚಿನ ಚಿಹ್ನೆಗಳನ್ನು ಮಾರುಕಟ್ಟೆಯು ನೋಡುತ್ತಿರುವುದರಿಂದ ಎರಡನೇ ನೇರ ವಾರದ ನಷ್ಟದತ್ತ ಸಾಗುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ.

ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 102.55
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ 102.09
ಬೆಳಗಾವಿ - ರೂ. 102.64
ಬಳ್ಳಾರಿ - ರೂ. 103.73
ಬೀದರ್ - ರೂ. 102.28
ವಿಜಯಪುರ - ರೂ. 101.72
ಚಾಮರಾಜನಗರ - ರೂ.102.06
ಚಿಕ್ಕಬಳ್ಳಾಪುರ - ರೂ. 101.94
ಚಿಕ್ಕಮಗಳೂರು - 102.93
ಚಿತ್ರದುರ್ಗ - ರೂ. 103.90
ದಕ್ಷಿಣ ಕನ್ನಡ - ರೂ. 101.34 
ದಾವಣಗೆರೆ - ರೂ.103.91
ಧಾರವಾಡ - ರೂ. 101.70 
ಗದಗ - ರೂ. 102.25
ಕಲಬುರಗಿ - 102.10 
ಹಾಸನ - ರೂ. 102.18 
ಹಾವೇರಿ - ರೂ. 102.89
ಕೊಡಗು - ರೂ. 103.31
ಕೋಲಾರ - ರೂ. 101.87 
ಕೊಪ್ಪಳ - ರೂ. 103.21 
ಮಂಡ್ಯ - ರೂ. 102.17 
ಮೈಸೂರು - ರೂ. 101.50
ರಾಯಚೂರು - ರೂ. 102.67 
ರಾಮನಗರ - ರೂ. 102.39 
ಶಿವಮೊಗ್ಗ - ರೂ. 102.93 
ತುಮಕೂರು - ರೂ. 102.45
ಉಡುಪಿ - ರೂ.101.59 
ಉತ್ತರ ಕನ್ನಡ - ರೂ. 102.94
ವಿಜಯನಗರ- ರೂ. 103.12 
ಯಾದಗಿರಿ - ರೂ. 102.31 

ಕೇರಳ, ಪಂಜಾಬಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ

ಬಾಗಲಕೋಟೆ - 88.46 
ಬೆಂಗಳೂರು - 87.89
ಬೆಂಗಳೂರು ಗ್ರಾಮಾಂತರ -88.03 
ಬೆಳಗಾವಿ - 88.55 
ಬಳ್ಳಾರಿ - 89.53 
ಬೀದರ್ - 88.23
ವಿಜಯಪುರ - 87.71
ಚಾಮರಾಜನಗರ - 88
ಚಿಕ್ಕಬಳ್ಳಾಪುರ- 87.89 
ಚಿಕ್ಕಮಗಳೂರು - 88.64
ಚಿತ್ರದುರ್ಗ - 89.48 
ದಕ್ಷಿಣ ಕನ್ನಡ - 87.31 
ದಾವಣಗೆರೆ - 89.48 
ಧಾರವಾಡ -87.70
ಗದಗ -88.20 
ಕಲಬುರಗಿ - 88.06
ಹಾಸನ - 87.92
ಹಾವೇರಿ - 88.77 
ಕೊಡಗು - 89.97 
ಕೋಲಾರ - 89.08 
ಕೊಪ್ಪಳ -88.75 
ಮಂಡ್ಯ - 88.10 
ಮೈಸೂರು - 87.49 
ರಾಯಚೂರು - 88.59 
ರಾಮನಗರ - 88.29
ಶಿವಮೊಗ್ಗ - 88.65
ತುಮಕೂರು - 88.36 
ಉಡುಪಿ - 87.54 
ಉತ್ತರ ಕನ್ನಡ - 88.76
ವಿಜಯನಗರ- 88.98 
ಯಾದಗಿರಿ - 88.25

Explainer: ಸಾಲದಿಂದಲೇ ಸಾಮ್ರಾಜ್ಯ ಕಟ್ಟಿದ್ರಾ ಅದಾನಿ?