Asianet Suvarna News Asianet Suvarna News

ಕ್ಯಾಶ್ ಡೆಪಾಸಿಟ್ ಮಷೀನ್‌ನಲ್ಲಿ ದಿನಕ್ಕೆ ಗರಿಷ್ಠ ಎಷ್ಟು ಹಣ ಜಮೆ ಮಾಡಬಹುದು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ UPI ಮೂಲಕ ಎಟಿಎಂಗಳಲ್ಲಿ ಹಣ ಜಮೆ ಮಾಡುವ ಸೌಲಭ್ಯವನ್ನು ಪ್ರಾರಂಭಿಸಿದೆ. ಹಣ ಜಮೆ ಮಿತಿಯಲ್ಲಿ ಕೆಲವು ಬ್ಯಾಂಕ್‌ಗಳು ಬದಲಾವಣೆಗಳನ್ನು ಮಾಡಿವೆ. ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದರ ಮೇಲೆ ಮಿತಿ ನಿರ್ಧಾರವಾಗುತ್ತದೆ.

What is the maximum amount that can be deposited in a cash deposit machine per day mrq
Author
First Published Oct 5, 2024, 3:40 PM IST | Last Updated Oct 5, 2024, 3:40 PM IST

ನವದೆಹಲಿ: ದೇಶದ ತಂತ್ರಜ್ಞಾನದಲ್ಲಿ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಿದ್ದು, ಇದು ಸಾಮಾನ್ಯ ಜನರ ಮೇಲೆಯೂ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ ಆರಂಭದಿಂದಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಸೌಲಭ್ಯದ ಬಗ್ಗೆ ಘೋಷಣೆ ಮಾಡಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಮೂಲಕ ಎಟಿಎಂ ಮಷೀನ್ (Cash Deposit Machines) ಮೂಲಕ ಹಣ ಜಮೆ ಮಾಡುವ ವಿಶೇಷ ಸೌಲಭ್ಯ ನೀಡಲಾಗಿದೆ. ಈ ಹೊಸ ಸೌಲಭ್ಯ ಯುಪಿಐ ಇಂಟರ್‌ಪೋಲ್ ಕ್ಯಾಶ್ ಡೆಪಾಸಿಟ್ (UPI-ICD) ಅನಾವರಣವನ್ನು ಕೇಂದ್ರ ಬ್ಯಾಂಕ್ ಡೆಪ್ಯುಟಿ ಗವರ್ನರ್ ಟಿ ರಬಿ ಶಂಕರ್ ಮಾಡಿದರು. ಈ ನಡುವೆ ಕೆಲವು ಬ್ಯಾಂಕ್‌ಗಳ ಹಣ ಜಮೆ ಮಾಡುವ ಮಿತಿಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. 

ನಿಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ (PAN Link) ಲಿಂಕ್ ಮಾಡದಿದ್ದರೆ ಜಮೆ ಮಾಡುವ ಹಣದ ಮಿತಿ ಬೇರೆಯಾಗಿರುತ್ತದೆ. ಆಟೋಮೆಟೆಡ್ ಡೆಪಾಸಿಟ್ ಕಮ್ ವಿಥ್ ಡ್ರಾವೆಲ್ ಮಷೀನ್ (ADWM-Automated Deposit cum Withdrawal Machine) ಒಂದು ರೀತಿಯ ಎಟಿಎಂ ಆಗಿದೆ. ಈ ಯಂತ್ರದ ಮೂಲಕ ನಗದು ಹಣ ಜಮೆ ಮಾಡಬಹುದು ಮತ್ತು ಡ್ರಾ ಸಹ ಮಾಡಿಕೊಳ್ಳಬಹುದಾಗಿದೆ. ಗ್ರಾಹಕರು ಬ್ಯಾಂಕ್‌ಗೆ ಹೋಗದೇ ತನ್ನ ಶಾಖೆಯ ADWMಗೆ ತೆರಳಿ ಕೆಲವೇ ನಿಮಿಷದಲ್ಲಿ ಹಣ ಜಮೆ ಮಾಡಬಹುದಾಗಿದೆ. ಇದೀಗ ಹಣ ಜಮೆ ಮಾಡುವ ಕೆಲ ಬ್ಯಾಂಕ್‌ಗಳ ಮಿತಿಯಲ್ಲಿ ಬದಲಾವಣೆಗಳು ಬಂದಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ 
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಆಟೋಮೆಟೆಡ್ ಡೆಪಾಸಿಟ್ ಕಮ್ ವಿಥ್ ಡ್ರಾವೆಲ್ ಮಷೀನ್ ಮೂಲಕ ದಿನಕ್ಕೆ ಗರಿಷ್ಠ 1,00,000 ರೂಪಾಯಿ ಅಥವಾ ಗರಿಷ್ಠ  200 ನೋಟುಗಳನ್ನು ಜಮೆ ಮಾಡಬಹುದು. ಬ್ಯಾಂಕ್ ಖಾತೆಗೆ ಪ್ಯಾನ್ ಸಂಖ್ಯೆ ಲಿಂಕ್ ಆಗಿದ್ದರೆ ಮಾತ್ರ  1 ಲಕ್ಷ ಜಮೆ ಮಾಡಬಹುದು. ಪ್ಯಾನ್ ಲಿಂಕ್ ಆಗದಿದ್ದರೆ ಖಾತೆದಾರರು ಗರಿಷ್ಠ 49,900 ರೂ.ವರೆಗೆ ಜಮೆ ಮಾಡಬಹುದು. 

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಆಟೋಮೆಟೆಡ್ ಡೆಪಾಸಿಟ್ ಕಮ್ ವಿಥ್ ಡ್ರಾವೆಲ್ ಮಷೀನ್ ಮೂಲಕ ಗರಿಷ್ಠ 200 ನೋಟುಗಳನ್ನು ಜಮೆ ಮಾಡಬಹುದು. ಬ್ಯಾಂಕ್ ಖಾತೆಗೆ ಪ್ಯಾನ್ ಸಂಖ್ಯೆ ಲಿಂಕ್ ಆಗಿದ್ದರೆ 1,00,000 ರೂಪಾಯಿ, ಲಿಂಕ್ ಆಗದಿದ್ದರೆ 49,999 ರೂಪಾಯಿ ಜಮೆ ಮಾಡಬಹುದು. 

RBI ರೂಲ್ಸ್ ಎಫೆಕ್ಟ್: ಡೆಬಿಟ್, ಕ್ರೆಡಿಟ್ ಪಾವತಿ ಸ್ವೀಕಾರ ನಿಲ್ಲಿಸಿದ ಆ್ಯಪಲ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು   ಒಂದು ದಿನದಲ್ಲಿ 49,900 ರೂಪಾಯಿಯನ್ನು ಆಟೋಮೆಟೆಡ್ ಡೆಪಾಸಿಟ್ ಕಮ್ ವಿಥ್ ಡ್ರಾವೆಲ್ ಮಷೀನ್ ಮೂಲಕ ಜಮೆ ಮಾಡಬಹುದು. ಡೆಬಿಟ್ ಕಾರ್ಡ್ ಮೂಲಕ 2 ಲಕ್ಷ ರೂ.ವರೆಗೂ ಜಮೆ ಮಾಡುವ ಸೌಲಭ್ಯ ನೀಡಲಾಗಿದೆ. ಇದರ ಜೊತೆಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ (ಪಿಪಿಎಫ್), ಆರ್‌ಡಿ ಮತ್ತು ಲೋನ್ ಖಾತೆಗೆ ಇಲ್ಲಿಂದಲೇ ಹಣ ಜಮೆ ಮಾಡಬಹುದು. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಸಹ ಆಟೋಮೆಟೆಡ್ ಡೆಪಾಸಿಟ್ ಕಮ್ ವಿಥ್ ಡ್ರಾವೆಲ್ ಮಷೀನ್ ಮೂಲಕ ದಿನಕ್ಕೆ ಗರಿಷ್ಠ 200 ನೋಟುಗಳನ್ನು ಜಮೆ ಮಾಡಬಹುದು. ಗ್ರಾಹಕರು ಕೇವಲ 100, 200, 500 ಅಥವಾ 2,000 ರೂ. ಮುಖಬೆಲೆ ನೋಟು ಮೂಲಕ ಹಣ ಜಮೆ ಮಾಡಬೇಕು. ಆಟೋಮೆಟೆಡ್ ಡೆಪಾಸಿಟ್ ಕಮ್ ವಿಥ್ ಡ್ರಾವೆಲ್ ಮಷೀನ್ 10, 20 ಮತ್ತು 50 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಲ್ಲ.

ಉಳಿತಾಯ ಖಾತೆಯಲ್ಲಿ ಕನಿಷ್ಠ ಎಷ್ಟು ಹಣ ಇರಬೇಕು? ಅಕ್ಟೋಬರ್ 15ರಿಂದಲೇ ಹೊಸ ನಿಯಮ

Latest Videos
Follow Us:
Download App:
  • android
  • ios