CIBIL Score:ಏನಿದು ಸಿಬಿಲ್ ಸ್ಕೋರ್? ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ

*ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ರೆ ಬ್ಯಾಂಕುಗಳು ಸಾಲ ನೀಡಲ್ಲ.
*ಸಿಬಿಲ್ ಸ್ಕೋರ್ ಗಳು 0 ರಿಂದ 900ರ ತನಕ ಇರುತ್ತವೆ.
*ಸಿಬಿಲ್ ಸ್ಕೋರ್ ಆಧಾರದಲ್ಲಿ ಎಷ್ಟು ಸಾಲ ನೀಡಬೇಕು ಎಂದು ನಿರ್ಧರಿಸುತ್ತವೆ ಬ್ಯಾಂಕುಗಳು

What is the CIBIL Score why it is important for getting loan details here

Business Desk: ಇಂದು ಕ್ರೆಡಿಟ್ ಕಾರ್ಡ್ ಇಲ್ಲದವರು ಯಾರಿದ್ದಾರೆ ಹೇಳಿ? ತಿಂಗಳ ಕೊನೆಯಲ್ಲಿ ಖಾತೆಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಭರ್ಜರಿ ಶಾಪಿಂಗ್ ಮಾಡಲು ಇಂದು ಅಡ್ಡಿಯಿಲ್ಲ. ಕ್ರೆಡಿಟ್ ಕಾರ್ಡ್ ಇಂಥ ಅನುಕೂಲ ಕಲ್ಪಿಸಿದೆ. ಹಾಗೆಯೇ ಕಾರು ಖರೀದಿ, ಮನೆ ಕಟ್ಟುವ ಕನಸುಗಳನ್ನು ನನಸಾಗಿಸಿಕೊಳ್ಳಲು ಇಂದು ಬ್ಯಾಂಕುಗಳಿಂದ ಸಾಲ ಪಡೆಯೋದು ಹಿಂದಿಗಿಂತ ಸುಲಭವಾಗಿದೆ. ಆದ್ರೆ, ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಆರ್ಥಿಕ ಬೆಂಬಲ ನೀಡುವ ಕ್ರೆಡಿಟ್ ಕಾರ್ಡ್ ಹಾಗೂ ಸಾಲ ಇವೆರಡನ್ನೂ ಪಡೆಯಲು ನಿಮ್ಮ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿರೋದು ಅಗತ್ಯ. ಹಾಗದ್ರೆ ಸಿಬಿಲ್ ಸ್ಕೋರ್ ಅಂದ್ರೇನು? ಎಷ್ಟು ಸಿಬಿಲ್ ಸ್ಕೋರ್ ಇದ್ರೆ ಸಾಲ ಸಿಗುತ್ತೆ? ಅದನ್ನು ಉತ್ತಮಪಡಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ

ಸಿಬಿಲ್ ಸ್ಕೋರ್ ಅಂದ್ರೇನು?
ಸಿಬಿಲ್ ಸ್ಕೋರ್ ಅಂದ್ರೆ ಬೇರೇನೂ ಅಲ್ಲ, ಗ್ರಾಹಕರ ಕ್ರೆಡಿಟ್ ಸ್ಕೋರ್. ಇನ್ನೂ ಸರಳವಾಗಿ ಹೇಳಬೇಕೆಂದ್ರೆ  3 ಅಂಕೆಗಳ ರೂಪದಲ್ಲಿರುವ ಗ್ರಾಹಕರ ಕ್ರೆಡಿಟ್ ವಿವರ. ಇದು ವ್ಯಕ್ತಿಯ ಕ್ರೆಡಿಟ್ ಪ್ರೂಫೈಲ್ ನ ಪ್ರತಿಫಲನವೂ ಹೌದು. ಇದು ಗ್ರಾಹಕರು ಈ ಹಿಂದೆ ಸಾಲಗಳನ್ನು ಪಡೆದಿರೋದು ಹಾಗೂ ಅದನ್ನು ಮರುಪಾವತಿಸಿದ ಬಗ್ಗೆ ಬ್ಯಾಂಕ್ ಗಳು ಹಾಗೂ ಸಾಲಗಾರರು ನಿಯಮಿತವಾಗಿ ಸಿಬಿಲ್ ಗೆ ನೀಡಿರುವ ಮಾಹಿತಿಗಳನ್ನು ಆಧರಿಸಿರುತ್ತದೆ. ಈ ಎಲ್ಲ ಮಾಹಿತಿಗಳು ಗ್ರಾಹಕರ ಸಿಬಿಲ್ ವರದಿಯಲ್ಲಿರುತ್ತದೆ.

Interest Rate Hike:ರೆಪೋ ದರ ಏರಿಕೆ ಬೆನ್ನಲ್ಲೇ ಗೃಹಸಾಲದ ಬಡ್ಡಿದರ ಹೆಚ್ಚಿಸಿವೆ ಈ 4 ಬ್ಯಾಂಕುಗಳು; ಹೊಸ ದರದ ಮಾಹಿತಿ ಇಲ್ಲಿದೆ

ಸಿಬಿಲ್  ವರದಿಯಲ್ಲಿ ( CIBIL Report) ಗ್ರಾಹಕರ ವೈಯಕ್ತಿಕ ಮಾಹಿತಿ, ಉದ್ಯೋಗದ ವಿವರ, ಬ್ಯಾಂಕ್ ಖಾತೆ ಹಾಗೂ ಈ ಹಿಂದಿನ ಸಾಲಗಳ ಮಾಹಿತಿಯೂ ಇರುತ್ತದೆ. ಸಿಬಿಲ್ ಸ್ಕೋರ್ ಗಳು 0 ರಿಂದ 900ರ ತನಕ ಇರುತ್ತದೆ. ಈ ಸ್ಕೋರ್ ಆಧಾರದಲ್ಲೇ ಬ್ಯಾಂಕುಗಳು ಒಬ್ಬ ವ್ಯಕ್ತಿಗೆ ಎಷ್ಟು ಸಾಲ ನೀಡಬೇಕು ಎಂಬುದನ್ನು ನಿರ್ಧರಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳು ಮಾತ್ರವಲ್ಲ, ವಿಮಾ ಕಂಪನಿಗಳು ಕೂಡ ಸಿಬಿಲ್ ಸ್ಕೋರ್ ಪರಿಶೀಲಿಸಲು ಪ್ರಾರಂಭಿಸಿವೆ.

ಸಿಬಿಲ್ ಸ್ಕೋರ್ ಎಷ್ಟಿದ್ರೆ ಸಾಲ ಸಿಗುತ್ತೆ?
ಬ್ಯಾಂಕಿನಿಂದ ಸಾಲ ಪಡೆಯಲು ಸಿಬಿಲ್ ಸ್ಕೋರ್ ಎಷ್ಟಿರಬೇಕು? ಇದು ಬಹುತೇಕರನ್ನು ಕಾಡುವ ಪ್ರಶ್ನೆ. ಸಾಮಾನ್ಯವಾಗಿ 750ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರೋರಿಗೆ ಸಾಲ ಸುಲಭವಾಗಿ ಸಿಗುತ್ತದೆ. 750ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇದ್ರೆ ಅದನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇನ್ನು 750-900 ನಡುವಿನ ಸಿಬಿಲ್ ಸ್ಕೋರ್ ಇದ್ರೆ ಅದನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ವೈಯಕ್ತಿಕ ಸಾಲ, ಗೃಹ ಸಾಲ ಹಾಗೂ ಇತರ ಸಾಲಗಳಿಗೆ ಕಡ್ಡಾಯವಾಗಿ ಇಷ್ಟೇ ಸಿಬಿಲ್ ಸ್ಕೋರ್ ಇರಬೇಕು ಎಂಬ ನಿಯಮವಿಲ್ಲ. ಅಕಲ್ಲದೆ, ಇದು ಆಯಾ ಬ್ಯಾಂಕುಗಳ ನಿರ್ಧಾರವನ್ನು ಅವಲಂಬಿಸಿರುತ್ತದೆ ಕೂಡ. ಆದ್ರೆ ಬಹುತೇಕ ಬ್ಯಾಂಕುಗಳು 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇದ್ರೆ ಮಾತ್ರ ವೈಯಕ್ತಿಕ ಸಾಲ ನೀಡುತ್ತವೆ. 550 ಅಥವಾ ಅದಕ್ಕಿಂತ ಕಡಿಮೆ ಸಿಬಿಲ್ ಸ್ಕೋರ್ ಇದ್ರೆ ಅದನ್ನು ತುಂಬಾ ಕೆಟ್ಟದ್ದು ಎಂದು ಪರಿಗಣಿಸಲಾಗುತ್ತದೆ. ಕೆಲವೊಂದು ಬ್ಯಾಂಕುಗಳು ಸಿಬಿಲ್ ಸ್ಕೋರ್ 700ರ ಆಸುಪಾಸಿನಲ್ಲಿದ್ರೂ ಸಾಲ ನೀಡುತ್ತವೆ.

Loan EMIs Hike: ಸಾಲದ ಬಡ್ಡಿದರ, ಇಎಂಐ, ಎಫ್ ಡಿ ಮೇಲೆ ರೆಪೋ ದರ ಏರಿಕೆ ಹೇಗೆ ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ

ಸಿಬಿಲ್ ಸ್ಕೋರ್ ನಿರ್ಧರಿಸೋದು ಯಾರು?
ಸಿಬಿಲ್ ಸ್ಕೋರ್ ಮಾಹಿತಿ ಸಂಗ್ರಹಿಸಲು ಆರ್ ಬಿಐ 4 ಏಜೆನ್ಸಿಗಳನ್ನು ನೇಮಿಸಿದೆ. ಸಿಬಿಲ್, ಎಕ್ಸ್ಪೀರಿಯಾ, ಅಕ್ವಿಫ್ಯಾಕ್ಸ್ ಹಾಗೂ ಹಿಮಾರ್ಕ್ಸ್. ಈ ಸಂಸ್ಥೆಗಳು ಬ್ಯಾಂಕುಗಳು, ಫಿನ್ ಟೆಕ್, ಎನ್ ಬಿಎಫ್ ಸಿಗಳು ಸೇರಿದಂತೆ ವಿವಿಧ ಮೂಲಗಳಿಂದ ನೀಡುವ ಸಾಲ ಹಾಗೂ ಮರುಪಾವತಿ ಮಾಹಿತಿಗಳನ್ನು ಕಲೆ ಹಾಕುತ್ತವೆ. ಈ ಮಾಹಿತಿಗಳ ಆಧಾರದಲ್ಲಿ ಸಿಬಿಲ್ ಸ್ಕೋರ್ ಸಿದ್ಧಪಡಿಸಲಾಗುತ್ತದೆ.

ಸಿಬಿಲ್ ಸ್ಕೋರ್ ಉತ್ತಮಪಡಿಸಿಕೊಳ್ಳೋದು ಹೇಗೆ?
*ನೀವು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.
*ಕಡಿಮೆ ಬಡ್ಡಿದರದ ಆಮೀಷಕ್ಕೆ ಬಿದ್ದು ಅನಗತ್ಯವಾಗಿ ಸಾಲ ಪಡೆಯಬೇಡಿ.
*ದೀರ್ಘಾವಧಿ ಸಾಲ ಪಡೆದುಕೊಳ್ಳಿ. ಇದ್ರಿಂದ ಇಎಂಐ ಮೊತ್ತ ಕೂಡ ಕಡಿಮೆಯಾಗುತ್ತದೆ. ಜೊತೆಗೆ ಸಾಲ ಮರುಪಾವತಿಗೆ ಸಮಯಾವಕಾಶವೂ ಸಿಗುತ್ತದೆ. 

Latest Videos
Follow Us:
Download App:
  • android
  • ios