ಒಳ್ಳೆಯ ಅಂಶಗಳೇನು?

*ತೆರಿಗೆ ರಿಟರ್ನ್ಸ್‌ಗೆ ಆಧಾರ್ ಮತ್ತು ಪಾನ್ ಕಾರ್ಡ್ ಎರಡರಲ್ಲಿ ಯಾವುದನ್ನಾದರೂ ದಾಖಲೆಯಾಗಿ ಬಳಕೆಗೆ ಅವಕಾಶ. ಒಂದೊಮ್ಮೆ ಪಾನ್‌ಕಾರ್ಡ್ ಇಲ್ಲದಿದ್ದಲ್ಲಿ ಆಧಾರ್ ನಂಬರ್ ನೀಡಿದರೆ ಸಾಕು.

*ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಪ್ರೋತ್ಸಾಹಿಸಲು ಜಿಎಸ್‌ಟಿಯನ್ನು 12%ನಿಂದ 5%ಗೆ ಇಳಿಕೆಗೆ ನಿರ್ಧಾರ. ಈಗಾಗಲೇ ಜಿಎಸ್‌ಟಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಕೆ.1.50 ಲಕ್ಷ ಮಿತಿಯ ಎಲೆಕ್ಟ್ರಿಕ್ ವಾಹನ ಸಾಲದ ಮೇಲಿನ ತೆರಿಗೆ ರದ್ದು. ಕೆಲ ಬಿಡಿ ಭಾಗಗಳ ಮೇಲಿನ ಅಬಕಾರಿ ಸುಂಕಕ್ಕೂ ಕತ್ತರಿ.

*ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗುವಂತೆ ‘ಒಂದೇ ದೇಶ ಒಂದೇ ಕಾರ್ಡ್’ ಜಾರಿಗೆ. ಈ ‘ರುಪೇ ಕಾರ್ಡ್’ನಿಂದ ದೇಶದೆಲ್ಲೆಡೆ ಬಸ್ ಪ್ರಯಾಣ, ಟೋಲ್ ತೆರಿಗೆ, ಪಾರ್ಕಿಂಗ್ ಚಾರ್ಜ್ ಕಟ್ಟಿಕೊಳ್ಳಬಹುದು. ಇದರಲ್ಲೇ ರಿಟೇಲ್ ಖರೀದಿ, ಹಣ ವಿತ್‌ಡ್ರಾ ಕೂಡ ಮಾಡಬಹುದು.

*ಬ್ಯಾಂಕ್‌ಗಳ ಹಿತದೃಷ್ಟಿಯಿಂದ 70 ಸಾವಿರ ಕೋಟಿ ಮೀಸಲು. ಕಳೆದ ನಾಲ್ಕು ವರ್ಷದಲ್ಲಿ ದಾಖಲೆ ಪ್ರಮಾಣದ ೪ ಲಕ್ಷ ಕೋಟಿ ರು. ಕೆಟ್ಟ ಸಾಲದ ವಸೂಲಾತಿ ಮಾಡಲಾಗಿದೆ.

*ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಭಾರತಕ್ಕೆ ಮರಳಿದ ಬಳಿಕ ಕಡಿಮೆ ಅವಧಿಯಲ್ಲಿ ಆಧಾರ್ ಕಾರ್ಡ್ ವಿತರಿಸುವುದು. ಈಗಿನ ವ್ಯವಸ್ಥೆಯಲ್ಲಿ ಕನಿಷ್ಠ 180 ದಿನಗಳ ಕಾಲ ಕಾಯಬೇಕು.

*ಸ್ಟಾರ್ಟ್‌ಅಪ್ ಮತ್ತು ಬಂಡವಾಳ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ.

*50 ಕೋಟಿ ರು. ವರೆಗಿನ ನಗದು ರಹಿತ ವ್ಯವಹಾರದ ಮೇಲೆ ಎಂಡಿಆರ್ ಚಾರ್ಜ್ ಇರುವುದಿಲ್ಲ.

*ಅಸಂಘಟಿತ ಕಾರ್ಮಿಕರಿಗೆ ಪ್ರತಿ ತಿಂಗಳು 3000ರು. ಪೆನ್ಷನ್ ಹಣ ನೀಡುವುದಾಗಿ ಘೋಷಣೆ. ಈಗಾಗಲೇ ಹೆಚ್ಚುಕಡಿಮೆ 30 ಲಕ್ಷ ಕಾರ್ಮಿಕರಿಗೆ ಶ್ರಮ ಯೋಗಿ ಮಾಂಧನ್ ಯೋಜನೆ ಅಡಿ ಪೆನ್ಷನ್.

*ಮನೆ ಬಾಡಿಗೆ ನಿಯಮದಲ್ಲಿ ಬದಲಾವಣೆ. ಬಾಡಿಗೆ ಕಾಯ್ದೆಯನ್ನು ರಾಜ್ಯಗಳಲ್ಲೂ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ

*ಶೂನ್ಯ ಬಂಡವಾಳ ಕೃಷಿಗೆ ಒತ್ತು. ಇದರಿಂದ ಸ್ಥಳೀಯವಾಗಿ ಸಿದ್ಧವಾಗುವ ಗೊಬ್ಬರಗಳ ಬಳಕೆಯೂ ಸಾಧ್ಯ.

*ನೂತನ ಶಿಕ್ಷಣ ನೀತಿ ಶೀಘ್ರ ಜಾರಿ. ವಿದೇಶಿ ವಿದ್ಯಾರ್ಥಿಗಳಿಗೂ ದೇಶದಲ್ಲಿ ಶಿಕ್ಷಣಕ್ಕೆ ಅವಕಾಶ ನೀಡಿ, ಸಂಶೋಧನೆಗೆ ಅನುಕೂಲ ಮಾಡಿಕೊಡುವುದು.

ಕೇಂದ್ರ ಬಜೆಟ್‌ 2019ಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: https://bit.ly/2LC5Jvu

ಕೆಟ್ಟ ಅಂಶಗಳೇನು?

*ಕಂಪನಿಗಳ ಸಾರ್ವಜನಿಕ ಷೇರುಗಳ ಮಿತಿಯನ್ನು 25%ರಿಂದ 35%ಗೆ ಏರಿಕೆ.

*ಈವರೆಗಿನ ಕಾರ್ಪೊರೇಟ್ ಕಂಪನಿಗಳ ಮೇಲಿನ ಆದಾಯ ತೆರಿಗೆ ಮಿತಿಯನ್ನು 250 ಕೋಟಿಯಿಂದ 400 ಕೋಟಿ ರು.ಗೆ ಹೆಚ್ಚಿಸುವುದಾಗಿ ಘೋಷಣೆ.

*ರಕ್ಷಣಾ ಇಲಾಖೆಗೆ ಹೇಳಿಕೊಳ್ಳುವಂತಹ ಯಾವು ದೇ ನೆರವು ನೀಡುವ ಬಗ್ಗೆ ಪ್ರಸ್ತಾಪವೇ ಇಲ್ಲ.

*ಉದ್ಯೋಗ ಸಮಸ್ಯೆ ನಿವಾರಣೆಗೂ ಸ್ಪಷ್ಟವಾದ ನಿಲುವು ಪ್ರಕಟಿಸಲಿಲ್ಲ.

ಅತಿಕೆಟ್ಟ ಅಂಶಗಳೇನು?

* ತೆರಿಗೆದಾರ ಉದ್ಯೋಗಿಗಳ ಸ್ಟಾಂಡರ್ಡ್ ಡಿಡಕ್ಷನ್ ಮತ್ತು ಟಿಡಿಎಸ್ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಮಧ್ಯಂತರ ಬಜೆಟ್ ವೇಳೆ ಪಿಯೂಷ್ ಗೋಯಲ್ ನೀಡಿದ್ದ ಭರವಸೆ ಈಡೇರಲಿಲ್ಲ .

*ಹೂಡಿಕೆದಾರರ ಮೇಲೆ ಈ ಹಿಂದೆ ಹೇರಲಾಗಿದ್ದ 10% ದೀರ್ಘಾವಧಿ ಕೆಪಿಟಲ್ ಗೇನ್ಸ್ ತೆರಿಗೆ ಮುಂದುವರಿಕೆ.

*ಶ್ರೀಮಂತರಿಗೆ ತೆರಿಗೆ ಹೊರೆ. 2-3 ಕೋಟಿ ರು. ಮತ್ತು ೫ಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಕ್ರಮವಾಗಿ ಶೇ.3 ಮತ್ತು ಶೇ.7ರಷ್ಟು ಹೆಚ್ಚುವರಿ ತೆರಿಗೆ

*ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ 1 ರು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ, ರಸ್ತೆ ಸೆಸ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಸೆಸ್ ಘೋಷಣೆ

*ಆರ್‌ಬಿಐ ಮೇಲೆ ಒತ್ತಡ. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಭಾರೀ ಪ್ರಮಾಣದಿಂದ ಲಾಭಾಂಶ ನಿರೀಕ್ಷಿಸಲಾಗುತ್ತಿದೆ

ಕೇಂದ್ರ ಬಜೆಟ್‌ 2019ಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: https://bit.ly/2LC5Jvu