Personal Finance: ಫ್ಲೋಟಿಂಗ್ ಬಡ್ಡಿ ದರ ಎಂದ್ರೇನು ಗೊತ್ತಾ?

ಸಾಲ ತೆಗೆದುಕೊಳ್ಳುವ ಮುನ್ನ ನಾಲ್ಕೈದು ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳ ಬಡ್ಡಿ ಬಗ್ಗೆ ಮಾಹಿತಿ ಪಡೆಯಬೇಕು. ಕಡಿಮೆ ಬಡ್ಡಿಗೆ ಸಾಲ ನೀಡುವ ಬ್ಯಾಂಕ್ ಆಯ್ಕೆ ಮಾಡೋದು ಒಳ್ಳೆಯದು. ಇದ್ರ ಜೊತೆ ಬ್ಯಾಂಕ್ ಗಳು ನೀಡುವ ಸಾಲದ ವಿಧಾನ, ನಿಯಮಗಳನ್ನು ಕೂಡ ತಿಳಿದಿರಬೇಕು.
 

What Is Floating Rate Of Interest For Home Loan

ಸ್ವಂತ ಮನೆ ಕನಸನ್ನು ಪ್ರತಿಯೊಬ್ಬರು ಕಾಣ್ತಾರೆ. ಅದನ್ನು ನನಸಾಗಿಸಿಕೊಳ್ಳಲು ಬ್ಯಾಂಕ್ ಮೊರೆ ಹೋಗ್ತಾರೆ. ಬ್ಯಾಂಕ್ ಅಥವ ಫೈನಾನ್ಸ್ ಕಂಪನಿ ಮೂಲಕ ಗೃಹ ಸಾಲವನ್ನು ಪಡೆಯುತ್ತಾರೆ. ಗೃಹ ಸಾಲ ಪಡೆದು ಮನೆ ಖರೀದಿ ಮಾಡುವ ಮೊದಲು ನೀವು ಗೃಹ ಸಾಲದ ಬಡ್ಡಿ ವಿದದ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು. ಇಲ್ಲವೆಂದ್ರೆ ಮುಂದೆ ನೀವು ತೊಂದರೆಯನ್ನು ಎದುರಿಸಬೇಕಾಗುತ್ತದೆ. ಗೃಹ  (Home) ಸಾಲ (Loan)ದ ಬಡ್ಡಿಯಲ್ಲಿ ಎರಡು ವಿಧಗಳಿವೆ. ಒಂದು, ಗೃಹ ಸಾಲದ ಸ್ಥಿರ (Stable) ಬಡ್ಡಿ ದರ ಮತ್ತು ಇನ್ನೊಂದು ಫ್ಲೋಟಿಂಗ್ (Floating)  ಬಡ್ಡಿ ದರ. ಇಂದು ನಾವು ಗೃಹ ಸಾಲದ ಫ್ಲೋಟಿಂಗ್ ಬಡ್ಡಿದರದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ. 

ಗೃಹ ಸಾಲದ (Home Loan) ಫ್ಲೋಟಿಂಗ್ ಬಡ್ಡಿದರ ಎಂದರೇನು? : ಫ್ಲೋಟಿಂಗ್ ಬಡ್ಡಿ ದರವೆಂದ್ರೆ ಎಲ್ಲ ಕಾಲದಲ್ಲೂ ಸ್ಥಿರವಾಗಿರದ ಬಡ್ಡಿದರವಾಗಿದೆ. ಇಲ್ಲಿ ಬಡ್ಡಿ ದರ ಬದಲಾಗುತ್ತಿರುತ್ತದೆ. ರೆಪೋ (Repo) ದರ ಅಥವಾ ಮಾರುಕಟ್ಟೆಯ ಬಡ್ಡಿ ದರದಿಂದ ಪ್ರಭಾವಿತವಾಗಿರುತ್ತದೆ. ಫ್ಲೋಟಿಂಗ್ ದರವು ಸ್ಥಿರ ಅವಧಿಯಲ್ಲಿ ಬದಲಾಗುತ್ತದೆ. ನಿಮ್ಮ ಗೃಹ ಸಾಲದ ಬಡ್ಡಿ ದರ ಬದಲಾದರೆ, ಇಎಂಐ (EMI) ಹೆಚ್ಚಾಗುತ್ತದೆ ಅಥವಾ ಸಾಲ (Loan) ದ ಅವಧಿ ಹೆಚ್ಚಾಗುತ್ತದೆ. ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದೀರಿ ಹಾಗೂ ಬ್ಯಾಂಕ್ (Bank) ಯಾವೆಲ್ಲ ನಿಯಮಗಳನ್ನು ಹೊಂದಿದೆ ಎಂಬ ಆಧಾರದ ಮೇಲೆ ಫ್ಲೋಟಿಂಗ್ ಬಡ್ಡಿ ದರ ನಿರ್ಧಾರವಾಗುತ್ತದೆ.

ಎಲ್ಐಸಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ 36,000ರೂ. ಪಿಂಚಣಿ!

ಮೊದಲೇ ಹೇಳಿದಂತೆ ಫ್ಲೋಟಿಂಗ್ ಬಡ್ಡಿ ದರ ಬದಲಾಗುತ್ತಿರುತ್ತದೆ. ರೆಪೋ ದರ ಕಡಿಮೆಯಾದಾಗ ಬಡ್ಡಿ ದರ ಕೂಡ ಕಡಿಮೆಯಾಗುತ್ತದೆ. ರೆಪೋ ದರ ಹೆಚ್ಚಾದ್ರೆ ಬಡ್ಡಿ ದರ ಹೆಚ್ಚಾಗುತ್ತದೆ. ಫ್ಲೋಟಿಂಗ್ ಬಡ್ಡಿ ದರಗಳೊಂದಿಗೆ ಗೃಹ ಸಾಲಗಳ ಮೇಲೆ ಯಾವುದೇ ಪೂರ್ವಪಾವತಿ ಶುಲ್ಕ (Fee) ಗಳನ್ನು ವಿಧಿಸಲಾಗುವುದಿಲ್ಲ. ಯಾವುದೇ ಪೂರ್ವಪಾವತಿ ಶುಲ್ಕವಿಲ್ಲ ಎಂದರೆ ಸಾಲದ ಅವಧಿಯ ಮೊದಲು ನೀವು ಸಂಪೂರ್ಣ ಗೃಹ ಸಾಲದ ಮೊತ್ತವನ್ನು ಮರುಪಾವತಿಸಲು ಬಯಸಿದರೆ, ನೀವು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.

ಬ್ಯಾಂಕ್ ನಿಗದಿಪಡಿಸಿದ ಬಡ್ಡಿದರಂತೆ ಫ್ಲೋಟಿಂಗ್ ದರಗಳಲ್ಲಿ ಬದಲಾವಣೆಯಾಗುತ್ತದೆ. ಇದನ್ನು ರೀಸೆಟ್ ಎಂದೂ ಕರೆಯುತ್ತಾರೆ. ಸಾಲಗಾರನಿಗೆ ಸಾಲ ನೀಡುವ ವೇಳೆ ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡುತ್ತದೆ. ಹಾಗೆ ಬಡ್ಡಿದರದಲ್ಲಿ ಬದಲಾವಣೆಯಾದಾಗ ಸಾಲದ ಅವಧಿ ಮತ್ತು ಇಎಂಐ ಎರಡೂ ಬದಲಾಗುತ್ತದೆ ಎಂದು ಬ್ಯಾಂಕ್ ಸಾಲಗಾರನಿಗೆ ತಿಳಿಸುತ್ತದೆ. 

ಸ್ಥಿರ ಗೃಹ ಸಾಲದ ಬಡ್ಡಿ ದರ ಹಾಗೂ ಫ್ಲೋಟಿಂಗ್ ಬಡ್ಡಿ ದರ ಹೇಗೆ  ಭಿನ್ನವಾಗಿದೆ? : ಸ್ಥಿರ ಗೃಹ ಸಾಲದ ಬಡ್ಡಿ ದರದಲ್ಲಿ ಸಾಲದ ಅವಧಿ ಮುಗಿಯುವ ಮೊದಲು ಯಾರಾದರೂ ಸಾಲವನ್ನು ಮರುಪಾವತಿಸಲು ಮುಂದಾದ್ರೆ ಅವರಿಗೆ ಪೂರ್ವಪಾವತಿ ಶುಲ್ಕವನ್ನು ವಿಧಿಸಲಾಗುತ್ತದೆ.  

ಈ ಎರಡು ರಾಷ್ಟ್ರಗಳಲ್ಲಿದ್ದಾರೆ ಜಗತ್ತಿನ ಅತೀ ಹೆಚ್ಚು ಸಿರಿವಂತರು!

ಸ್ಥಿರ ಹಾಗೂ ಫ್ಲೋಟಿಂಗ್ ನಲ್ಲಿ ಯಾವುದು ಬೆಸ್ಟ ? : ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅವಲಂಭಿಸಿರುತ್ತದೆ. ಒಂದೇ ಬಾರಿ ಸಾಲ ಮರುಪಾವತಿ ಸಾಧ್ಯ ಎನ್ನುವವರು ಫ್ಲೋಟಿಂಗ್ ಆಯ್ಕೆ ಮಾಡಿಕೊಂಡ್ರೆ ಪೂರ್ವಪಾವತಿ ಶುಲ್ಕದ (Advance Payment) ಹೊರೆ ಬೀಳುವುದಿಲ್ಲ. ಸಾಲಕ್ಕೆ ಅರ್ಜಿ ಸಲ್ಲಿಸುವ ವೇಳೆ ಬಡ್ಡಿದರ ಕಡಿಮೆಯಿದ್ದರೆ ನೀವು ಸ್ಥಿರ ಬಡ್ಡಿ ದರದ ಆಯ್ಕೆ ಮಾಡುವುದು ಒಳ್ಳೆಯದು. ಯಾಕೆಂದ್ರೆ ಫ್ಲೋಟಿಂಗ್ ನಲ್ಲಿ ಬಡ್ಡಿದರ (interest Rate) ಬದಲಾಗುತ್ತಿರುತ್ತದೆ. ಕಡಿಮೆಯಾಗುವ ಬದಲು ಹೆಚ್ಚಾದ್ರೆ ಇಎಂಐ (EMI) ಹೊರೆ ಹೆಚ್ಚಾಗುತ್ತದೆ. ಸ್ಥಿರ ಬಡ್ಡಿದರದಲ್ಲಿ ನೀವು ಸಾಲ ಮರುಪಾವತಿಯವರೆಗೂ ಒಂದೇ ಪ್ರಮಾಣದಲ್ಲಿ ಇಎಂಐ ಪಾವತಿ ಮಾಡಬೇಕು. ಇಲ್ಲಿ ಬಡ್ಡಿ ಬದಲಾವಣೆ ನಿಮ್ಮ ಮೇಲಾಗುವುದಿಲ್ಲ.

Latest Videos
Follow Us:
Download App:
  • android
  • ios