Black Money Explained: ಕಪ್ಪು ಹಣ ಎಂದ್ರೇನು? ಭಾರತದಲ್ಲಿ ಅದರ ಪತ್ತೆ ಹೇಗೆ?
ಭಾರತದಲ್ಲಿ ಕಪ್ಪು ಹಣವಿದೆ, ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ ತರ್ತೇವೆ ಎನ್ನುವ ಮಾತುಗಳು ಕೇಳ್ತಿರುತ್ತವೆ. ಆದ್ರೆ ಕಪ್ಪು ಹಣದ ಬಗ್ಗೆ ಜನರಿಗೆ ಸರಿಯಾದ ಜ್ಞಾನವಿಲ್ಲ. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಕಪ್ಪು ಹಣದ ಹೆಸರನ್ನು ನಾವು ಸಾಕಷ್ಟು ಬಾರಿ ಕೇಳಿರ್ತೇವೆ. ಅಲ್ಲಿ ಕಪ್ಪು ಹಣ ಪತ್ತೆ, ಇಲ್ಲಿ ಕಪ್ಪು ಹಣ ಪತ್ತೆ ಸೇರಿದಂತೆ ಅನೇಕ ಸುದ್ದಿಗಳು ಬರ್ತಿರುತ್ತವೆ. ಆದ್ರೆ ಕಪ್ಪು ಹಣ ಅಂದ್ರೇನು ಎನ್ನುವ ಮಾಹಿತಿ ಅನೇಕರಿಗೆ ಇಲ್ಲ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ (NIPFP) ಇದನ್ನು ತೆರಿಗೆ ಪಾವತಿಸಬೇಕಾದ ಹಣ ಎಂದು ವ್ಯಾಖ್ಯಾನಿಸಿದೆ. ಆದ್ರೆ ಜನರು ಈ ಬಗ್ಗೆ ಸರಿಯಾದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡುತ್ತಿಲ್ಲ. ಇದ್ರ ಮೂಲಕ ತೆರಿಗೆ ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ದೇಶದಲ್ಲಿ ಕಪ್ಪು ಹಣ (Black Money) ಓಡಾಡುತ್ತಿದೆ ಎನ್ನುವ ಮಾಹಿತಿ ಸಿಗ್ತಿರುತ್ತದೆ. ಆದ್ರೆ ಅದರ ಪ್ರಮಾಣವನ್ನು ಅಂದಾಜು ಮಾಡಲು ಯಾವುದೇ ಸೂಕ್ತ ಮಾರ್ಗವಿಲ್ಲ. ಕಪ್ಪುಹಣವನ್ನು ಪತ್ತೆಹಚ್ಚಲು ಇನ್ಪುಟ್ ಔಟ್ಪುಟ್ ಅನುಪಾತವನ್ನು ಸಹ ಬಳಸಲಾಗುತ್ತದೆ. ಆದ್ರೆ ಇದ್ಯಾವುದೂ ಕಪ್ಪು ಹಣವನ್ನು ಪತ್ತೆ ಮಾಡಲು ಸೂಕ್ತ ಮಾರ್ಗವಲ್ಲ.
ಮನೆಬಿಟ್ಟಾಗ ಕೈಯಲಿದ್ದಿದ್ದು 300 ರೂ, ಒಂದೊತ್ತಿನ ಊಟಕ್ಕೂ ಇಲ್ಲದವಳೀಗ ಕೋಟ್ಯಾಧಿಪತಿ
ಕಪ್ಪು ಹಣವನ್ನು ಎಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ : ಮುಖ್ಯವಾಗಿ ಅಪರಾಧ (Crime) ಪ್ರಕರಣದಲ್ಲಿ ಕಪ್ಪು ಹಣವನ್ನು ಬಳಸಲಾಗುತ್ತದೆ. ಕಳ್ಳಸಾಗಣೆ, ಭ್ರಷ್ಟಾಚಾರ, ಸಾರ್ವಜನಿಕ ಅಧಿಕಾರಿಗಳಿಗೆ ನೀಡುವ ಲಂಚ, ಡ್ರಗ್ಸ್, ಅಕ್ರಮ ಗಣಿಗಾರಿಕೆ, ವಂಚನೆ, ಮೋಸ ಸೇರಿದಂತೆ ಅನೇಕ ಅಪರಾಧ ಪ್ರಕರಣದಲ್ಲಿ ಇದನ್ನು ಬಳಸಲಾಗುತ್ತದೆ. ಕಪ್ಪು ಹಣವನ್ನು ಈ ವಂಚನೆಯಲ್ಲಿ ಬಳಸಲಾಗುವ ಕಾರಣ ಇದು ಶ್ರೀ ಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತದೆ.
ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಕಪ್ಪು ಹಣ ವ್ಯವಹಾರ ನಡೆಸುವವರ ಮುಖ್ಯ ಉದ್ದೇಶವಾಗಿದೆ. ಆದಾಯದ ಸಂಪೂರ್ಣಹಣವನ್ನು ಉಳಿಸಲು ಜನರು ಈ ಕೆಲಸ ಮಾಡ್ತಾರೆ. ಆದಾಯದ ಒಂದು ಭಾಗವನ್ನೂ ಸರ್ಕಾರಕ್ಕೆ ನೀಡುವುದು ಅವರ ಉದ್ದೇಶವಾಗಿರೋದಿಲ್ಲ. ಆದಾಯ ಹೆಚ್ಚಿದ್ದರೂ ಕಡಿಮೆ ವರದಿ ಮಾಡಿ, ಉಳಿದ ಹಣವನ್ನು ಕಪ್ಪು ಹಣದ ರೂಪದಲ್ಲಿ ಸರ್ಕಾರಕ್ಕೆ ತಿಳಿಯದಂತೆ ವ್ಯವಹರಿಸಲಾಗುತ್ತದೆ.
ಭಾರತದಲ್ಲಿ ಚೀನಾ ವಿರೋಧಿ ಅಲೆ ಹೆಚ್ಚಳ; ಚೈನೀಸ್ ವಸ್ತುಗಳ ಖರೀದಿ ತಗ್ಗಿಸಿದ ಭಾರತೀಯರು!
ಭಾರತದಲ್ಲಿ ಎಷ್ಟು ಕಪ್ಪು ಹಣವಿದೆ : ಕಪ್ಪು ಹಣದ ಬಗ್ಗೆ ಭಾರತದಲ್ಲಿ ಯಾವುದೇ ನಿಖರ ಮಾಹಿತಿ ಇಲ್ಲ. ಸಮಯ ಸಮಯಕ್ಕೆ ವಿವಿಧ ಸಂಸ್ಥೆಗಳು ಅದರ ಬಗ್ಗೆ ಅಂದಾಜು ಮೊತ್ತವನ್ನು ಬಿಡುಗಡೆ ಮಾಡ್ತಿರುತ್ತವೆ. ಬ್ಯಾಂಕ್ ಆಫ್ ಇಟಲಿ ಮಾಹಿತಿ ಪ್ರಕಾರ, ಬೇರೆ ದೇಶದಲ್ಲಿ ಭಾರತೀಯರು ಕಪ್ಪು ಹಣವನ್ನು ಇಟ್ಟಿದ್ದಾರೆ. ಅದು ಅಂದಾಜು 10 ಲಕ್ಷ ಕೋಟಿ ಎಂದು ಬ್ಯಾಂಕ್ ಆಫ್ ಇಟಲಿ ಅಂದಾಜು ಮಾಡಿದೆ. ಇದಲ್ಲದೇ ಭಾರತದಲ್ಲಿ ಸುಮಾರು 500 ಬಿಲಿಯನ್ ಡಾಲರ್ ಕಪ್ಪುಹಣವಿದೆ ಎಂದು ಸಿಬಿಐ ಮಾಜಿ ನಿರ್ದೇಶಕರು ಅಂದಾಜಿಸಿದ್ದಾರೆ.
ಕಪ್ಪು ಹಣವನ್ನು ನಿಯಂತ್ರಿಸಲು ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಕಾನೂನುಗಳಿವೆ. ಮನಿ ಲಾಂಡರಿಂಗ್ ನಿಯಂತ್ರಣ ವಿರೋಧಿ ಕಾನೂನನ್ನು ಬಲಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ 2002ರ ಮನಿ ಲಾಂಡರಿಂಗ್ ಕಾಯ್ದೆಯಲ್ಲಿ ಬದಲಾವಣೆ ತಂದಿದೆ. ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ಕಾನೂನು, ಬೇನಾಮಿ ವಹಿವಾಟು ತಡೆ ಕಾಯ್ದೆ ಮತ್ತು ರಿಯಲ್ ಎಸ್ಟೇಟ್ ಕಾಯ್ದೆಯ ಮೂಲಕ ಭಾರತದಲ್ಲಿ ಕಪ್ಪುಹಣವನ್ನು ತಡೆಯುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕಪ್ಪುಹಣವನ್ನು ತಡೆಯಲು ಭಾರತ ಸರ್ಕಾರ ಡಿಜಿಟಲ್ ಪಾವತಿಯನ್ನು ಉತ್ತೇಜಿಸುತ್ತಿದೆ.
ಸಾಮಾನ್ಯವಾಗಿ ನಗದು ರೂಪದಲ್ಲಿ ನಡೆಯುವ ವಹಿವಾಟಿನಿಂದ ಕಪ್ಪುಹಣ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಈಗ ದೇಶದಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗಿದೆ. ಇದ್ರ ಜೊತೆಗೆ ನೋಟ್ ಬ್ಯಾನ್ ಸೇರಿದಂತೆ ಅನೇಕ ಕಠಿಣ ಕ್ರಮಗಳನ್ನು ಜಾರಿಗೆ ತಂದ ಕಾರಣ ಕಪ್ಪು ಹಣದ ವಹಿವಾಟು ನಿಯಂತ್ರಣಕ್ಕೆ ಬರ್ತಿದೆ.