ಭಾರತದಲ್ಲಿ ಚೀನಾ ವಿರೋಧಿ ಅಲೆ ಹೆಚ್ಚಳ; ಚೈನೀಸ್ ವಸ್ತುಗಳ ಖರೀದಿ ತಗ್ಗಿಸಿದ ಭಾರತೀಯರು!
ಭಾರತೀಯರು ಮೇಡ್ ಇನ್ ಚೈನಾ ಉತ್ಪನ್ನಗಳ ಖರೀದಿಯನ್ನುತಗ್ಗಿಸಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ. ಅಲ್ಲದೆ, ಭಾರತದಲ್ಲಿ ಚೀನಾವಿರೋಧಿ ಅಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ನವದೆಹಲಿ (ಡಿ.8): ದೇಶದ ಸಾರ್ವಭೌಮತೆ, ಸಮಗ್ರತೆ ಹಾಗೂ ಭದ್ರತೆಯ ಕಾರಣ ನೀಡಿ ಭಾರತ ಸರ್ಕಾರ ಈಗಾಗಲೇ 250ಕ್ಕೂ ಅಧಿಕ ಆಪ್ ಗಳನ್ನು ನಿರ್ಬಂಧಿಸಿದೆ. ಇದೇ ರೀತಿ ಆಕ್ರಮ ಹೂಡಿಕೆ ಹಾಗೂ ಆರ್ಥಿಕ ಅಪರಾಧಗಳ ಹಿನ್ನೆಲೆಯಲ್ಲಿ ಚೀನಾದ 100ಕ್ಕೂ ಅಧಿಕ ಆಪ್ ಗಳ ಮೇಲೆ ಕೂಡ ಭಾರತ ನಿರ್ಬಂಧ ವಿಧಿಸಿದೆ. ಇನ್ನೊಂದೆಡೆ ಮೇಡ್ ಇನ್ ಚೀನಾ ಉತ್ಪನ್ನಗಳಿಗೆ ಕೂಡ ಭಾರತದಲ್ಲಿ ಬೇಡಿಕೆ ತಗ್ಗಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿದೆ. ಕೇಂದ್ರ ಸರ್ಕಾರವು ಚೀನೀ ಆಪ್ ಗಳನ್ನು ನಿರ್ಬಂಧಿಸುವ ಜೊತೆಗೆ 'ಮೇಡ್ ಇನ್ ಇಂಡಿಯಾ', 'ಉತ್ಪಾದನೆ ಸಂಬಂಧಿತ ಪ್ರೋತ್ಸಾಹಧನ (ಪಿಎಲ್ಐ) ಯೋಜನೆಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ದೇಶೀಯ ಉತ್ಪಾದನೆ ಹೆಚ್ಚಿಸೋದು ಹಾಗೂ ಚೀನಾ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ತಗ್ಗಿಸೋದು ಸರ್ಕಾರದ ಈ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ಸಮೀಕ್ಷೆ ಹೇಳಿದೆ. ಅಲ್ಲದೆ, ಈ ಎಲ್ಲ ಪ್ರಯತ್ನಗಳ ಫಲವಾಗಿ ಭಾರತದಲ್ಲಿ ಚೀನೀ ವಸ್ತುಗಳ ಬಳಕೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು 'ಲೋಕನ್ ಸರ್ಕಲ್ಸ್ ' ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯಲ್ಲಿ ಏನಿದೆ?
ಇತ್ತೀಚೆಗೆ ನಡೆದ ಲೋಕಲ್ ಸರ್ಕಲ್ಸ್ ' ಸಮೀಕ್ಷೆಯಲ್ಲಿ ಶೇ.55ರಷ್ಟು ಮಂದಿ ಕಳೆದ ವರ್ಷ ನಾವು ಚೀನೀ ವಸ್ತುಗಳನ್ನು ಖರೀದಿಸಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಶೇ.45ರಷ್ಟು ಮಂದಿ ನಾವು ಯಾವುದೇ ಚೀನಾದ ವಸ್ತುಗಳನ್ನು ಖರೀದಿಸಿ ಎಂದು ಹೇಳಿದ್ದಾರೆ. ಇನ್ನು ಚೀನಾದ ಉತ್ಪನ್ನಗಳನ್ನು ಖರೀದಿಸಿದವರಲ್ಲಿ ಅವರು ಯಾವ ವರ್ಗದ ಮೇಡ್ ಇನ್ ಚೀನಾ ಉತ್ಪನ್ನಗಳನ್ನು ಖರೀದಿಸಿದ್ದಾರೆ ಎಂದು ಪ್ರಶ್ನಿಸಿದಾಗ, ಶೇ.56ರಷ್ಟು ಮಂದಿ ಅಂದರೆ 7,022 ಜನರು ಸ್ಮಾರ್ಟ್ ಫೋನ್ಸ್, ಸ್ಮಾರ್ಟ್ ವಾಚ್ ಗಳ, ಪವರ್ ಬ್ಯಾಂಕ್ ಗಳು ಹಾಗೂ ಇತರ ಎಲೆಕ್ಟ್ರಾನಿಕ್ ಅಥವಾ ಮೊಬೈಲ್ ಉತ್ಪನ್ನಗಳನ್ನು ಖರೀದಿಸಿರೋದಾಗಿ ತಿಳಿಸಿದ್ದರು.
ಮುಂದಿನ ಕೇಂದ್ರ ಬಜೆಟ್ ಲೇಖಾನುದಾನ ಮಾತ್ರ; ಅದ್ಭುತ ಘೋಷಣೆಗಳಿಗೆ ಜುಲೈವರೆಗೆ ಕಾಯಬೇಕು: ನಿರ್ಮಲಾ ಸೀತಾರಾಮನ್
ಇನ್ನು ಶೇ.49ರಷ್ಟು ಮಂದಿ ಆಟಿಕೆಗಳು ಹಾಗೂ ಸ್ಟೇಷನರಿ ವಸ್ತುಗಳನ್ನು ಖರೀದಿ ಮಾಡಿರೋದಾಗಿ ಮಾಹಿತಿ ನೀಡಿದ್ದಾರೆ. ಇನ್ನು ಶೇ.29ರಷ್ಟು ಮಂದಿ ಉಡುಗೊರೆಗಳನ್ನು ಖರೀದಿಸಿರೋದಾಗಿ ಮಾಹಿತಿ ನೀಡಿದ್ದಾರೆ. ಶೇ.26ರಷ್ಟು ಮಂದಿ ಟಿವಿ, ಕೆಟಲ್, ಏರ್ ಪ್ಯೂರಿಫೈಯರ್ ಮುಂತಾದ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸಿರೋದಾಗಿ ಮಾಹಿತಿ ನೀಡಿದ್ದಾರೆ. ಉಳಿದ ಶೇ.15ರಷ್ಟು ಮಂದಿ ಬ್ಯಾಗ್ಸ್, ಅಲಂಕಾರಿಕ ವಸ್ತುಗಳು ಸೇರಿದಂತೆ ಫ್ಯಾಷನ್ ಉತ್ಪನ್ನಗಳನ್ನು ಖರೀದಿಸಿರುವ ಮಾಹಿತಿ ನೀಡಿದ್ದಾರೆ.
ಚೀನಿ ಆಪ್‌ಗಳಿಂದ ಭಯೋತ್ಪಾದನೆಗೆ ಆರ್ಥಿಕ ನೆರವು: ಭಾರತದಲ್ಲಿ 700 ಕೋಟಿ ವಂಚನೆ
ಚೀನಿ ಉತ್ಪನ್ನ ಖರೀದಿಸದಿರಲು ಕಾರಣ?
ಕಳೆದ 12 ತಿಂಗಳಲ್ಲಿ ಮೇಡ್ ಇನ್ ಚೈನಾ ಉತ್ಪನ್ನಗಳನ್ನು ಏಕೆ ಖರೀದಿಸಿಲ್ಲ ಎಂಬ ಪ್ರಶ್ನೆಗೆ ಕೂಡ ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರು ಉತ್ತರಿಸಿದ್ದಾರೆ. ಶೇ.63ರಷ್ಟು ಮಂದಿ ಭಾರತ-ಚೀನಾ ಭೌಗೋಳಿಕ ಹಾಗೂ ರಾಜಕೀಯ ಸಂಘರ್ಷಗಳ ಕಾರಣದಿಂದ ಚೀನೀ ಉತ್ಪನ್ನಗಳನ್ನು ಖರೀದಿಸದೆ ಭಾರತೀಯ ಉತ್ಪನ್ನಗಳನ್ನು ಖರೀದಿ ಮಾಡಿರೋದಾಗಿ ತಿಳಿಸಿದ್ದಾರೆ. ಶೇ16ರಷ್ಟು ಜನರು ಭಾರತದಲ್ಲಿ ಕೂಡ ಚೀನೀ ಉತ್ಪನ್ನಗಳಿಗೆ ಪರ್ಯಾಯವಾಗಿ ಗುಣಮಟ್ಟದ ಉತ್ಪನ್ನಗಳು ಲಭಿಸುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.16ರಷ್ಟು ಮಂದಿ 'ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಉತ್ತಮ ಗ್ರಾಹಕ ಸೇವೆ ನೀಡುತ್ತಿವೆ' ಎಂಬ ಮಾಹಿತಿ ನೀಡಿದ್ದಾರೆ. ಶೇ.13ರಷ್ಟು ಜನರು ಚೀನೀ ಅಲ್ಲದ ಆದರೆ ಇತರ ವಿದೇಶಿ ಉತ್ಪನ್ನಗಳು ಲಭ್ಯವಿದ್ದು, ಉತ್ತಮ ಗುಣಮಟ್ಟ, ಬೆಲೆ ಹಾಗೂ ಸೇವೆಯನ್ನು ಒಳಗೊಂಡಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಶೇ.7ರಷ್ಟು ಮಂದಿ ಮಾರುಕಟ್ಟೆಯಲ್ಲಿ ಮೇಡ್ ಇನ್ ಚೈನಾ ಉತ್ಪನ್ನಗಳು ಈಗ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂಬ ಕಾರಣ ನೀಡಿದ್ದಾರೆ.