Union Budget 2019: ಕರ್ನಾಟಕಕ್ಕೆ ಸಿಕ್ಕಿದ್ದೇನು..?
ಕೇಂದ್ರ ಸರ್ಕಾರದ 2019-20ರ ಮಧ್ಯಂತರ ಬಜೆಟ್ ನಲ್ಲಿ ಹಲವು ಜನಪ್ರಿಯ ಘೋಷಣೆಗಳು ಇರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಆದ್ರೆ ಈ ಮೋದಿ ಬಜೆಟ್ ನಲ್ಲಿ ನಮ್ಮ ಕರ್ನಾಟಕಕ್ಕೆ ಸಿಕ್ಕಿದ್ದೇನು..?
ಬೆಂಗಳೂರು, [ಫೆ.01:] ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಹಂಗಾಮಿ ಹಣಕಾಸು ಸಚಿವರಾಗಿ ಪಿಯೂಷ್ ಗೋಯಲ್ ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ.
ಮಧ್ಯಂತರ ಬಜೆಟ್‌ನ ಮಹಾ ಕೊಡುಗೆ: ಅದೂ, ಇದೂ, ಎಲ್ಲವೂ ನಿಮಗೆ!
ಕೇಂದ್ರ ಸರ್ಕಾರದ 2019-20ರ ಮಧ್ಯಂತರ ಬಜೆಟ್ ನಲ್ಲಿ ಹಲವು ಜನಪ್ರಿಯ ಘೋಷಣೆಗಳು ಮಾಡಲಾಗಿದೆ. ಇನ್ನು ಇದರಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು? ಇದರ ವಿವರಗಳು ಇಲ್ಲಿವೆ.
* ರಾಜ್ಯದ ನಗರ ಕುಡಿಯುವ ನೀರಿನ ಯೋಜನೆಗೆ 217.83 ಕೋಟಿ ರೂ.
* ಬೆಂಗಳೂರಿನ ಯುನಾನಿ ಮೆಡಿಸನ್ ಸಂಸ್ಥೆಗೆ 15 ಕೋಟಿ ರೂ.
* ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಗೆ 157.50 ಕೋಟಿ ರೂ.
* ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 300 ಕೋಟಿ ರೂ.
* ಜಲಾನಯನ ಅಭಿವೃದ್ಧಿಯ 2ನೇ ಯೋಜನೆಗೆ 131.33 ಕೋಟಿ ರೂ.
* ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಗೆ 55 ಕೋಟಿ ರೂ.
* ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISC) 179 ಕೋಟಿ ರೂ. ಅನುದಾನ.