Asianet Suvarna News Asianet Suvarna News

Union budget 2019: ಕರ್ನಾಟಕಕ್ಕೆ ಸಿಕ್ಕಿದ್ದೇನು?

ಎಂಆರ್‌ಪಿಎಲ್‌ಗೆ ₹ 818 ಕೋಟಿ, ನಿಮ್ಹಾನ್ಸ್‌ಗೆ ₹ 91 ಕೋಟಿ ಅನುದಾನ ಘೋಷಣೆ |ರಾಜ್ಯಕ್ಕಿಲ್ಲ ಹೊಸ ಯೋಜನೆಗಳು | ಹಳೆಯ ಯೋಜನೆಗಳ ಮುಂದುವರಿಕೆಯೇ ಎಲ್ಲ

what for karnataka get in union budget 2019
Author
Bengaluru, First Published Jul 6, 2019, 8:13 AM IST

ನವದೆಹಲಿ (ಜು. 06): ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ಯೋಜನೆಗಳು ಯಾವುವೂ ಘೋಷಣೆಯಾಗಿಲ್ಲ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಕೇಂದ್ರ ಸರ್ಕಾರದ ಮತ್ತು ಕೇಂದ್ರ ಸಹಭಾಗಿತ್ವದ ಸಂಸ್ಥೆಗಳಿಗೆ ಒಟ್ಟಾರೆ ₹ 1032 ಕೋಟಿಗೂ ಅಧಿಕ ಅನುದಾನ ಘೋಷಣೆ ಮಾಡಲಾಗಿದೆ.

ನಿರ್ಮಲಾ ಮೊದಲ ಬಜೆಟ್‌ನ ಗುಡ್, ಬ್ಯಾಡ್, ಅಗ್ಲಿ ಅಂಶಗಳು!

ಇದರಲ್ಲಿ ಮಂಗಳೂರಿನ ಎಂಆರ್‌ಪಿಎಲ್‌ಗೆ ₹ 818 ಕೋಟಿ, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ(ನಿಮ್ಹಾನ್ಸ್)ಗೆ ₹91 ಕೋಟಿ ಅನುದಾನ ಸಿಕ್ಕಿದೆ. ಇನ್ನು ಮೈಸೂರಿನ ಪ್ರತಿಷ್ಠಿತ ಅಖಿಲ ಭಾರತ ಮೂಕ ಮತ್ತು ಶ್ರವಣ ಸಂಸ್ಥೆಗೆ ₹72 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಉಳಿದಂತೆ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಗೆ ₹ 35 ಕೋಟಿ,
ಬೆಂಗಳೂರಿನ ರಾಷ್ಟ್ರೀಯ ಯುನಾನಿ ಔಷಧ ಸಂಸ್ಥೆಗೆ 15 ಕೋಟಿ, ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಿಸಲ್ಪಟ್ಟಿರುವ ವಿದ್ಯುತ್ ಉತ್ಕೃಷ್ಟ ಕೇಂದ್ರಕ್ಕೆ ₹1 ಕೋಟಿ ನಿಗದಿಪಡಿಸಲಾಗಿದೆ. ಮೈಸೂರಿನ ಭಾರತೀಯ ಭಾಷೆಗಳ ಸಂಸ್ಥಾನಕ್ಕೆ ಅನುದಾನ ನೀಡಲಾಗಿದ್ದು ಎಷ್ಟೆಂದು ನಿಗದಿಯಾಗಿಲ್ಲ.

27.86 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌: ಆದಾಯ ಎಲ್ಲಿಂದ? ಖರ್ಚು ಹೇಗೆ?

ಹೊಸದಾಗಿ ಯಾವುದೇ ಘೋಷಣೆ ಇಲ್ಲ, ಹಳೆಯ ಯೋಜನೆಗಳಿಗಷ್ಟೆ ಹಣ

ರಾಜ್ಯದವರೇ ಆದ ಸುರೇಶ್ ಅಂಗಡಿ ರೈಲ್ವೆ ಖಾತೆ ಸಹಾಯಕ ಸಚಿವರಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸ ಕೊಡುಗೆಗಳು ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅದೀಗ ಹುಸಿಯಾಗಿದೆ. ಈ ಹಿಂದೆ ಘೋಷಿಸಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ.

ಪುಣೆ-ಮಿರಾಜ್-ಬೆಳಗಾವಿ-ಲೋಂಡಾ- ಹುಬ್ಬಳ್ಳಿ-ದಾವಣಗೆರೆ-ತುಮಕೂರು ಮಾರ್ಗ ಡಬ್ಲಿಂಗ್‌ಗೆ ₹3,200 ಕೋಟಿ ಅನುದಾನ ಘೋಷಿಸಿದ್ದೇ ರಾಜ್ಯದ ಪಾಲಿಗೆ ಈ ಬಾರಿ ಸಿಕ್ಕ ಪಂಚಾಮೃತ. ಇನ್ನು ಸುರೇಶ್ ಅಂಗಡಿ ಅವರು ಚಾಲನೆ ನೀಡಿರುವ ಬೆಂಗಳೂರು-ಬೆಳಗಾವಿ-ಬೆಂಗಳೂರು ರೈಲನ್ನೇ ಬಜೆಟ್‌ನಲ್ಲಿ ಘೋಷಿಸಲಾಗಿದೆ.
 

Follow Us:
Download App:
  • android
  • ios