Asianet Suvarna News Asianet Suvarna News

Personal Finance : ಆಸ್ತಿ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲಿಸಿ

ಆಸ್ತಿ ಖರೀದಿ ವೇಳೆ ಮೈ ಎಲ್ಲ ಕಣ್ಣಾಗಿರಬೇಕು ಎನ್ನುತ್ತಾರೆ. ಯಾಕೆಂದ್ರೆ ಸಣ್ಣ ನಿರ್ಲಕ್ಷ್ಯ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ನೀವು ಆಸ್ತಿ ಖರೀದಿ ಮಾಡ್ತಿದ್ದರೆ ಸಾಕಷ್ಟು ಎಚ್ಚರಿಕೆವಹಿಸಿ. ವಕೀಲರ ಸಹಾಯದಿಂದ ಎಲ್ಲ ದಾಖಲೆ ಪರಿಶೀಲಿಸಿಕೊಳ್ಳಿ.
 

What Are The Documents To Be Checked Before Buying A Property
Author
First Published Feb 10, 2023, 3:08 PM IST

ಒಂದು ಆಸ್ತಿಯನ್ನು ಖರೀದಿ ಮಾಡೋದು ಬಟ್ಟೆ, ಚಪ್ಪಲಿ ಖರೀದಿ ಮಾಡಿದಂತಲ್ಲ. ನಾವು ಬಟ್ಟೆ ಅಥವಾ ಅಗ್ಗದ ವಸ್ತು ಖರೀದಿ ಮಾಡುವಾಗ್ಲೇ ನಾಲ್ಕೈದು ಬಾರಿ ಆಲೋಚನೆ ಮಾಡ್ತೇವೆ. ಅದನ್ನು ಅತ್ತ ಇತ್ತ ತಿರುಗಿಸಿ ನೋಡ್ತೇವೆ. ಸಣ್ಣ ಡ್ಯಾಮೇಜ್ ಕಂಡ್ರೂ ಅದನ್ನು ಹಿಂತಿರುಗಿಸ್ತೇವೆ. ಇನ್ನು ಲಕ್ಷಾಂತರ ಮೌಲ್ಯದ ಆಸ್ತಿ ಖರೀದಿ ವೇಳೆ ಹೆಚ್ಚುವರಿ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಸ್ತಿಯನ್ನು ಖರೀದಿಸಲು ಅನೇಕ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡ್ಬೇಕಾಗುತ್ತದೆ. ಇಲ್ಲವೆಂದ್ರೆ ದೊಡ್ಡ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ನಾವಿಂದು ಆಸ್ತಿ ಖರೀದಿ ವೇಳೆ ನೀವು ಯಾವೆಲ್ಲ ದಾಖಲೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಪರಿಶೀಲನೆ ಮಾಡ್ಬೇಕು ಎಂಬುದನ್ನು ಹೇಳ್ತೆವೆ.

ಆಸ್ತಿ (Property) ಖರೀದಿ ಮೊದಲು ಈ ದಾಖಲೆ (Record) ಗಳನ್ನು ಪರಿಶೀಲಿಸಿ : 

ಸಾಲ (Loan) ದ ಪತ್ರ : ಆಸ್ತಿ ಖರೀದಿ ಮುನ್ನ ನೀವು ಸಾಲ ಪತ್ರವನ್ನು ಅಗತ್ಯವಾಗಿ ಪರಿಶೀಲಿಸಬೇಕು. ಖರೀದಿಸುತ್ತಿರುವ ಆಸ್ತಿಯ ಮೇಲೆ ಯಾವ ರೀತಿಯ ಸಾಲವಿದೆ ಅಥವಾ ಸಾಲವಿದ್ಯೆ, ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು. ಆಸ್ತಿಯ ಮೇಲೆ ಯಾವುದೇ ರೀತಿಯ ಸಾಲವಿದ್ದರೆ ಮುಂದೆ ನಿಮವೆ ಸಮಸ್ಯೆಯಾಗಬಹುದು. ಹಾಗಾಗಿ ಸಾಲದೊಂದಿಗೆ ಆಸ್ತಿ ಖರೀದಿ ಮಾಡ್ತಿರಿ ಎಂದಾದ್ರೆ ಆ ಸಾಲಪತ್ರವನ್ನು ನೀವು ಜೋಪಾನವಾಗಿ ಇಟ್ಟುಕೊಳ್ಳಿ.  

ಲೇಔಟ್ (Layout) ಪೇಪರ್ ಮತ್ತು ರಿಜಿಸ್ಟ್ರಿ ಪೇಪರ್ ಪರಿಶೀಲನೆ : ಆಸ್ತಿಯ ಲೇಔಟ್ ಪೇಪರ್ ಅನ್ನು ಪರಿಶೀಲಿಸಬೇಕು. ಇಲ್ಲವೆಂದ್ರೆ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀವು ಪಡೆದಿಲ್ಲ ಎಂದೇ ಅರ್ಥ. ಹಾಗಾಗಿ ಲೇಔಟ್ ಪೇಪರ್ ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ನೋಂದಾವಣೆ ಕಾಗದವನ್ನು ಸರಿಯಾಗಿ ಪರಿಶೀಲಿಸಬೇಕು. ಆಸ್ತಿ ಕಾನೂನುಬದ್ಧವಾಗಿದೆಯೇ ಎಂಬುದನ್ನು ಇಲ್ಲಿ ತಿಳಿಯಬಹುದು. ನಿಮಗೆ ಕಾಗದ ಪತ್ರದ ಸರಿಯಾದ ಜ್ಞಾನವಿಲ್ಲವೆಂದಾದ್ರೆ ನೀವು ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಬಹುದು.

Online Shopping ನಲ್ಲೂ ಇದೆ ನಷ್ಟ, ನಿಮ್ಮ ದುಡ್ಡಿನ ಜಾಗೃತೆ ನೀವು ಮಾಡಬೇಕು!

ಕಂಟ್ರಾಕ್ಷನ್ ಕ್ಲಿಯರೆನ್ಸ್ ಸರ್ಟಿಫಿಕೆಟ್ : ಆಸ್ತಿಯ ಮೇಲೆ ಯಾವುದಾದ್ರೂ ಆಕ್ಷೇಪಣೆ ಇದೆಯೇ ಎಂಬುದನ್ನು ನೀವು ಪರಿಶೀಲಿಸಬೇಕಾಗುತ್ತದೆ. ಆಸ್ತಿಯನ್ನು ಖರೀದಿಸುವಾಗ ಕಂಟ್ರಾಕ್ಷನ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಸರಿಯಾಗಿ ನೋಡ್ದೆ ಹೋದ್ರೆ ಮುಂದೆ ದಂಡ ತೆರಬೇಕಾಗುತ್ತದೆ. ಇದ್ರಿಂದ ಮುಂದೆ ದೊಡ್ಡ ಸಮಸ್ಯೆ ನಿಮ್ಮನ್ನು ಕಾಡಬಹುದು. ಹಾಗಾಗಿ ನೀವು ಈ ದಾಖಲೆಯನ್ನು ಅಗತ್ಯವಾಗಿ ಪರಿಶೀಲಿಸಿಕೊಳ್ಳಿ.

ಆಸ್ತಿಯ ಮೇಲೆ ಯಾರಿಗಿದೆ ಹಕ್ಕು ಎಂಬುದನ್ನು ಪರಿಶೀಲಿಸಿ : ಆಸ್ತಿ ಖರೀದಿಸುವ ವೇಳೆ ಸಾಕಷ್ಟು ಎಚ್ಚರಿಕೆವಹಿಸಬೇಕು. ಆಸ್ತಿ ಖರೀದಿ ವೇಳೆ ಟೈಟಲ್ ಹಾಗೂ ಮಾರಾಟದ ಪತ್ರವನ್ನು ಸಹ ಪರಿಶೀಲಿಸಬೇಕು. ಪತ್ರದ ಪ್ರತಿಯನ್ನು ತೆಗೆದುಕೊಳ್ಳಬೇಡಿ ಮೂಲ ಹಕ್ಕು ಪತ್ರವನ್ನು ಪರಿಶೀಲಿಸಬೇಕು. ಇದರಲ್ಲಿ ಆಸ್ತಿ ಮಾರಾಟಗಾರರ ಹೆಸರಿನಲ್ಲಿರುತ್ತದೆ. ಮುಂದೆ, ಮಾರಾಟಗಾರನು ಪೂರ್ಣ ಮಾರಾಟದ ಹಕ್ಕುಗಳನ್ನು ಹೊಂದಿದ್ದಾನೆಯೇ ಮತ್ತು ಏಕೈಕ ಮಾಲೀಕನೇ ಎಂದು ಪರಿಶೀಲಿಸಿ. ವಕೀಲರ ಸಹಾಯದಿಂದ ನೀವು ಇದನ್ನು ಪರಿಶೀಲಿಸಬೇಕಾಗುತ್ತದೆ. ಪವರ್ ಆಫ್ ಅಟಾರ್ನಿಯನ್ನು ಮುಖ್ಯವಾಗಿ ಪರಿಶೀಲಿಸಬೇಕಾಗುತ್ತದೆ. 

ಆಸ್ತಿ ತೆರಿಗೆ ಬಿಲ್ ದಾಖಲೆ : ಆಸ್ತಿ ಮಾಲೀಕರು ಹಿಂದೆ ಪಾವತಿಸಿದ ಎಲ್ಲಾ ತೆರಿಗೆ ಬಿಲ್‌ಗಳನ್ನು ಪರಿಶೀಲಿಸಿ.

Business Ideas : ಮನೆಯಲ್ಲೇ ಕುಳಿತು ಶೂನ್ಯ ಬಂಡವಾಳದಲ್ಲಿ ಈ ಕೆಲಸ ಶುರು ಮಾಡಿ

ಎನ್ ಎ ಆರ್ಡರ್ : ಸರ್ಕಾರವು ನಿರ್ದಿಷ್ಟಪಡಿಸದ ಹೊರತು ಭಾರತದಲ್ಲಿನ ಎಲ್ಲಾ ಭೂಮಿಯನ್ನು ಪೂರ್ವನಿಯೋಜಿತವಾಗಿ ಕೃಷಿ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಕೃಷಿ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನು ಬಳಸಬಹುದು. ಆದರೆ ನೀವು ಕೃಷಿಯನ್ನು ಹೊರತುಪಡಿಸಿ ಬೇರೆ ಕೆಲಸ ಮಾಡಲು ಬಯಸಿದರೆ ನೀವು ಮೊದಲು ಕೃಷಿ ಭೂಮಿಯನ್ನು ಕೃಷಿಯೇತರ (ಎನ್‌ಎ) ಭೂಮಿಯಾಗಿ ಪರಿವರ್ತಿಸಬೇಕು. ಆದ್ರೆ ಎಲ್ಲ ಭೂಮಿಯನ್ನು ವಸತಿಗೆ ಬಳಸಲಾಗುವುದಿಲ್ಲ. ವಸತಿ ನಿರ್ಮಾಣಕ್ಕಾಗಿ ನೀವು ಆಸ್ತಿ ಖರೀದಿ ಮಾಡ್ತಿದ್ದರೆ ಅದು ಮನೆ ನಿರ್ಮಾಣಕ್ಕೆ ಯೋಗ್ಯವಾಗಿದೆಯೇ ಎಂಬುದನ್ನು ನೀವು ಪರಿಶೀಲಿಸಬೇಕಾಗುತ್ತದೆ. 
 

Follow Us:
Download App:
  • android
  • ios