mAadhaar appನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡೋದು ಹೇಗೆ? ಇದ್ರಿಂದ ಎಷ್ಟೆಲ್ಲ ಪ್ರಯೋಜನವಿದೆ ಗೊತ್ತಾ?
mAadhaar app ಜನರಿಗೆ ತಮ್ಮ ಆಧಾರ್ ಕಾರ್ಡ್ ಮಾಹಿತಿಗಳನ್ನು ಸ್ಮಾಟ್ ಫೋನ್ ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಅವಕಾಶ ಕಲ್ಪಿಸಿದೆ. ಹಾಗಾದ್ರೆ ಇದರಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಭಾರತದಲ್ಲಿ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ಗುರುತು ದಾಖಲೆಯಾಗಿದೆ. ಇಂದು ಬ್ಯಾಂಕ್ ಖಾತೆ ತೆರೆಯೋದ್ರಿಂದ ಹಿಡಿದು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವ ತನಕ ಪ್ರತಿ ಕೆಲಸಕ್ಕೂ ಆಧಾರ್ ಕಡ್ಡಾಯ. ಹೀಗಾಗಿ ಆಧಾರ್ ಕಾರ್ಡ್ ಅನ್ನು ಪಾಕೆಟ್ ಅಥವಾ ಬ್ಯಾಗ್ ನಲ್ಲಿಟ್ಟುಕೊಂಡೇ ತಿರುಗಬೇಕಾದ ಅನಿವಾರ್ಯತೆಯಿದೆ. ಆದರೆ, ಎಂಆಧಾರ್ ಅಪ್ಲಿಕೇಷನ್ ಈ ಸಂಕಷ್ಟವನ್ನು ತಪ್ಪಿಸಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಎಂಆಧಾರ್ ಅಪ್ಲಿಕೇಷನ್ ಜನರಿಗೆ ತಮ್ಮ ಆಧಾರ್ ಕಾರ್ಡ್ ಮಾಹಿತಿಗಳನ್ನು ಸ್ಮಾಟ್ ಫೋನ್ ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಅವಕಾಶ ಕಲ್ಪಿಸಿದೆ. ಇದರಿಂದ ಅವರಿಗೆ ತಮ್ಮ ವಿಳಾಸ, ಡೆಮೋಗ್ರಾಫಿಕ್ ಮಾಹಿತಿಗಳು ಹಾಗೂ ಕ್ಯುಆರ್ ಕೋಡ್ ತಕ್ಷಣ ಪಡೆಯಲು ನೆರವಾಗಿದೆ.
ಎಂಆಧಾರ್ ಆಪ್ ನಲ್ಲಿ ಯಾರು ಪ್ರೊಫೈಲ್ ಸೃಷ್ಟಿಸಬಹುದು?
ಯುಐಡಿಎಐ ನೀಡಿರುವ ಮಾಹಿತಿ ಅನ್ವಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಿರುವ ವ್ಯಕ್ತಿಗಳು ಮಾತ್ರ ಎಂಆಧಾರ್ ಅಪ್ಲಿಕೇಷನ್ ಡೌನ್ಲೋಡ್ ಮಾಡಬಹುದು. ಯಾವುದೇ ಸ್ಮಾರ್ಟ್ ಫೋನ್ ನಲ್ಲಿ ಎಂಆಧಾರ್ ಅಪ್ಲಿಕೇಷನ್ (mAadhaar app)ಇನ್ ಸ್ಟಾಲ್ ಆಗಿದ್ದರೆ ಪ್ರೊಫೈಲ್ ನೋಂದಣಿ ಮಾಡಬಹುದು. ಇದಕ್ಕೆ ಒಟಿಪಿಯನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾತ್ರ ಕಳುಹಿಸಲಾಗುತ್ತದೆ.
ನಿಮ್ಮ ಮೊಬೈಲ್‌ನಲ್ಲೇ ಹತ್ತಿರದ ಆಧಾರ್ ದಾಖಲಾತಿ ಕೇಂದ್ರ ಪತ್ತೆ ಹಚ್ಚೋದು ಹೇಗೆ ನೋಡಿ..
ಎಂಆಧಾರ್ ಆಪ್ ನಲ್ಲಿ ಪ್ರೊಫೈಲ್ ಸೃಷ್ಟಿಸೋದು ಹೇಗೆ?
*ಮೊದಲಿಗೆ ಇದನ್ನು ಯಾವುದೇ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ತೆರೆಯಿರಿ. ಆ ಬಳಿಕ ಟಾಪ್ ನಲ್ಲಿರುವ ‘Register Aadhaar’ಆಯ್ಕೆ ಮಾಡಿ.
*ಪ್ರೊಫೈಲ್ ತೆರೆಯಲು 4 ಅಂಕೆಗಳ ಪಿನ್ ಅಥವಾ ಪಾಸ್ ವರ್ಡ್ ಸೃಷ್ಟಿಸಿ.
*ಆ ಬಳಿಕ ನಿಮ್ಮ ಆಧಾರ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ. ಈಗ ನಿಮಗೆ ಒಟಿಪಿ ಬರುತ್ತದೆ.
*ಒಟಿಪಿಯನ್ನು ನಮೂದಿಸಿ ಹಾಗೂ ‘Submit'ಬಟನ್ ಮೇಲೆ ಕ್ಲಿಕ್ ಮಾಡಿ.
*ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಪ್ರೊಫೈಲ್ ನೋಂದಣಿಯಾಗುತ್ತದೆ. (ನೋಂದಾಯಿತ ಟ್ಯಾಬ್ ನಲ್ಲಿಆಧಾರ್ ನಲ್ಲಿರುವ ಹೆಸರು ಕಾಣಿಸುತ್ತದೆ.)
*ಅಂತಿಮವಾಗಿ ಕೆಳಗಿನ ಮೆನುವಿನಲ್ಲಿರುವ ‘My Aadhaar’ತೆರಳಿ ಹಾಗೂ ಡ್ಯಾಶ್ ಬೋರ್ಡ್ ಪ್ರವೇಶಿಸಲು ಪಿನ್/ ಪಾಸ್ ವರ್ಡ್ ನಮೂದಿಸಿ.
mAadhaar app ಡೌನ್ಲೋಡ್ ಮಾಡೋದು ಹೇಗೆ?
*ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಿಂದ mAadhaar app ಡೌನ್ಲೋಡ್ ಮಾಡಿ.
*ಆ ಬಳಿಕ ಅಪ್ಲಿಕೇಷನ್ ಮೇಲ್ಭಾಗದಲ್ಲಿರುವ "Register My Aadhaar" ಮೇಲೆ ಕ್ಲಿಕ್ ಮಾಡಿ.
*ನಂತರ 4 ಅಂಕೆಗಳ ಪಾಸ್ ವರ್ಡ್ ಅನ್ನು ಸೃಷ್ಟಿಸಿ.
*ಈಗ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕ್ಯಾಪ್ಚ ನಮೂದಿಸುವಂತೆ ನಿಮ್ಮನ್ನು ಕೋರಲಾಗುತ್ತದೆ.
*ಇದಾದ ಬಳಿಕ ನೀವು ಒಟಿಪಿ ಕೋರಬೇಕು. ಇದನ್ನು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಒಟಿಪಿಗಾಗಿ ನೀವು ನಿಮ್ಮ ಮೊಬೈಲ್ ಫೋನ್ ಎಸ್ ಎಂಎಸ್ ಅಪ್ಲಿಕೇಷನ್ ಚೆಕ್ ಮಾಡಬಹುದು.
*ಒಟಿಪಿ ನಮೂದಿಸಿದ ಬಳಿಕ ನಿಮ್ಮ ಆಧಾರ್ ಖಾತೆ ತೆರೆದುಕೊಳ್ಳುತ್ತದೆ. ಆ ಬಳಿಕ ಸ್ಕ್ರಾಲ್ ಡೌನ್ ಮಾಡಿ 'Biometrics Lock' ಮೇಲೆ ಕ್ಲಿಕ್ ಮಾಡಿ.
*Lock Biometric ಮೇಲೆ ಟ್ಯಾಪ್ ಮಾಡಿ.
*ಆ ಬಳಿಕ ನೀವು ಸೆಕ್ಯುರಿಟಿ ಕ್ಯಾಪ್ಚ ಹಾಗೂ ಒಟಿಪಿ ನಮೂದಿಸುವ ಮೂಲಕ ದೃಢೀಕರಿಸಬೇಕು.
*ಒಮ್ಮೆ ನೀವು ಒಟಿಪಿ ದೃಢೀಕರಿಸಿದ ಬಳಿಕ ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ.
ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಗಡುವು ಮತ್ತೆ ವಿಸ್ತರಣೆ; ಮಾ.14ರ ತನಕ ಕಾಲಾವಕಾಶ
ಎಂಆಧಾರ್ ಆಪ್ ಪ್ರಯೋಜನಗಳು
ಎಂಆಧಾರ್ ಅಪ್ಲಿಕೇಷನ್ ನಿಂದ ಕೆಲವು ಪ್ರಯೋಜನಗಳಿವೆ.
*ಆಪ್ ಲೈನ್ ನಲ್ಲಿ ಕೂಡ ಆಧಾರ್ ಮಾಹಿತಿಗಳನ್ನು ವೀಕ್ಷಿಸಲು ಎಂಆಧಾರ್ ಆಪ್ ನೆರವು ನೀಡುತ್ತದೆ.
*ಒಂದೇ ಸ್ಮಾರ್ಟ್ ಫೋನ್ ನಲ್ಲಿ 5 ಕುಟುಂಬ ಸದಸ್ಯರ ಮಾಹಿತಿಗಳನ್ನು ಸಂಗ್ರಹಿಸಬಹುದು.
*ಇನ್ನು ಗುರುತು ದೃಢೀಕರಣದ ದಕ್ಷತೆಯನ್ನು ಹೆಚ್ಚಿಸಲು ಬಳಕೆದಾರರು ಇ-ಕೆವೈಸಿ ಅಥವಾ ಕ್ಯುಆರ್ ಕೋಡ್ ಅನ್ನು ಸೇವಾ ಪೂರೈಕೆದಾರರ ಜೊತೆಗೆ ಹಂಚಿಕೊಳ್ಳಬಹುದು.
*ಹೆಚ್ಚುವರಿ ಸಂರಕ್ಷಣೆಗಾಗಿ ಭದ್ರತಾ ಕ್ರಮಗಳು/ಬಯೋಮೆಟ್ರಿಕ್ ಸೌಲಭ್ಯಗಳನ್ನು ನೀಡಲಾಗಿದೆ.