ಭಾರತದಲ್ಲಿ ನವೆಂಬರ್ ನಿಂದ ಮದುವೆ ಸೀಸನ್ ಪ್ರಾರಂಭವಾಗಿದೆ. ಹೀಗಾಗಿ ಮದುವೆಗೆ ಸಂಬಂಧಿಸಿದ ಉದ್ಯಮ ವಲಯದ ವಹಿವಾಟು ಹೆಚ್ಚಿದೆ. 2022ರಲ್ಲಿ ವಿವಾಹ ಉದ್ಯಮ ವಲಯ ಶೇ.200ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ನವದೆಹಲಿ (ನ.8): ಭಾರತದಲ್ಲಿ ಮದುವೆ ಋತು ಈ ತಿಂಗಳಿಂದ ಮತ್ತೆ ಆರಂಭವಾಗಿದೆ. ಇದು ವರ-ವಧು, ಅವರ ಕುಟುಂಬಸ್ಥರಿಗೆ ಮಾತ್ರವಲ್ಲ, ವಿವಾಹ ಆಯೋಜನೆ ಉದ್ಯಮಕ್ಕೂ ಕೂಡ ಸಂಭ್ರಮದ ಸನ್ನಿವೇಶವಾಗಲಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ ನವೆಂಬರ್ 4ರಿಂದ ಡಿಸೆಂಬರ್ 14ರ ತನಕ ಒಟ್ಟು 32 ಲಕ್ಷ ವಿವಾಹಗಳು ನಿಗದಿಯಾಗಿದ್ದು, ಕನಿಷ್ಠ 3.75 ಲಕ್ಷ ಕೋಟಿ ರೂ. ವ್ಯವಹಾರ ನಡೆಯುವ ನಿರೀಕ್ಷೆಯಿದೆ. ಉದ್ಯಮ ತಜ್ಞರ ಪ್ರಕಾರ ಮದುವೆ ಉದ್ಯಮ ವಲಯ 2022ರಲ್ಲಿ ಶೇ.200ರಷ್ಟು ಬೆಳವಣಿಗೆ ದಾಖಲಿಸಲಿದೆ. ಎರಡು ವರ್ಷಕ್ಕಿಂತಲೂ ಹೆಚ್ಚು ಸಮಯ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಮದುವೆಗಳನ್ನು ಅದ್ದೂರಿಯಾಗಿ ಏರ್ಪಡಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಕೆಲವರು ಕೋವಿಡ್ ಸಾಂಕ್ರಾಮಿಕ ಮುಗಿದ ಮೇಲೆಯೇ ಮದುವೆ ಆಯೋಜಿಸುತ್ತಿರುವ ಕಾರಣ ಈ ಬಾರಿ ಅಧಿಕ ಮದುವೆಗಳು ಆಯೋಜನೆಗೊಂಡಿವೆ. 'ಮುಂಬರುವ ಮದುವೆ ಸೀಸನ್ ಗೆ ಪ್ರಸಿದ್ಧ ಮದುವೆ ಹಾಲ್ ಗಳು ಈಗಾಗಲೇ ಬುಕ್ ಆಗಿವೆ. ಎಚ್ ಎನ್ ಐಗಳಿಗೆ ಈಗಲೂ ಕೂಡ ಡೆಸ್ಟಿನೇಷನ್ ವೆಡ್ಡಿಂಗ್ ನೆಚ್ಚಿನ ಆಯ್ಕೆಯಾಗಿದೆ. ಈ ವರ್ಷ ನಮ್ಮ ಮದುವೆ ನಡೆಯೋ ಸ್ಥಳಗಳು ಹಾಗೂ ಉದ್ಯಮ ಶೇ.100ಕ್ಕಿಂತಲೂ ಹೆಚ್ಚಿನ ಪ್ರಗತಿ ದಾಖಲಿಸಲಿವೆ' ಎಂದು ಫರ್ನ್ಸ್ ಎನ್ ಪೆಟಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ವಿಕಾಸ್ ಗುಟ್ಗುಟಿಯ ತಿಳಿಸಿದ್ದಾರೆ.
ಫರ್ನ್ಸ್ ಎನ್ ಪೆಟಲ್ಸ್ ಪ್ರೈವೇಟ್ ಲಿಮಿಟೆಡ್ ದೆಹಲಿ ಎನ್ ಸಿಆರ್ ಸುತ್ತಮುತ್ತ 11 ದೊಡ್ಡ ವಿವಾಹ ಸ್ಥಳಗಳನ್ನು ಹೊಂದಿದೆ. ಭಾರತದ ಆನ್ ಲೈನ್ ಮ್ಯಾಟ್ರಿಮನಿ ಹಾಗೂ ಮದುವೆ ಸೇವೆಗಳು ಎಂಬ ಶೀರ್ಷಿಕೆಯಡಿಯಲ್ಲಿ ಕೆಪಿಎಂಜಿಯ ಅಧಿಕೃತ ವರದಿ ಪ್ರಕಾರ ಭಾರತದಲ್ಲಿ ಮದುವೆ ವಲಯ ಅಸಂಘಟಿತವಾಗಿದ್ದು, ಅಂದಾಜು 3.68 ಟ್ರಿಲಿಯನ್ ರೂ. ವ್ಯವಹಾರ ನಡೆಸುತ್ತದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ದೇಶದ 35 ನಗರಗಳಲ್ಲಿ 4,302 ವ್ಯಾಪಾರಿಗಳು ಹಾಗೂ ಸೇವಾ ಪೂರೈಕೆದಾರರ ಸಮೀಕ್ಷೆ ನಡೆಸಿತ್ತು.
Business Idea : ಹತ್ತು ಸಾವಿರಕ್ಕಿಂತ ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಈ ಬ್ಯುಸಿನೆಸ್
ಈ ಬಾರಿಯ ಮದುವೆ ಸೀಸನ್ ನಲ್ಲಿ ದೆಹಲಿಯೊಂದರಲ್ಲೇ 3.5 ಲಕ್ಷಕ್ಕೂ ಅಧಿಕ ವಿವಾಹಗಳು ನಡೆಯುವ ನಿರೀಕ್ಷೆಯಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ. ಅಲ್ಲದೆ, ಇದ್ರಿಂದ ದೆಹಲಿಯಲ್ಲಿ ಸುಮಾರು 75,000 ಕೋಟಿ ರೂ. ವಹಿವಾಟು ನಡೆಯುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 25 ಲಕ್ಷ ಮದುವೆಗಳು ನಡೆದಿದ್ದು, ಇದಕ್ಕಾಗಿ ಅಂದಾಜು 3 ಲಕ್ಷ ಕೋಟಿ ರೂ. ವ್ಯಯಿಸಲಾಗಿತ್ತು.
ಈ ಬಾರಿಯ ಮದುವೆ ಸೀಸನ್ ನಲ್ಲಿ ಒಟ್ಟು ಸುಮಾರು 3.75ಲಕ್ಷ ಕೋಟಿ ರೂ. ಹಣದ ವಹಿವಾಟು ನಡೆಯಲಿದೆ. ಮುಂದಿನ ಮದುವೆ ಸೀಸನ್ ಜನವರಿ 14ರಿಂದ ಪ್ರಾರಂಭವಾಗಿ ಜುಲೈ ತನಕ ಇರಲಿದೆ ಎಂದು ಪ್ರವೀಣ್ ಖಂಡೇಲ್ವಾಲ್ ಮಾಹಿತಿ ನೀಡಿದ್ದಾರೆ.
ವಿದೇಶಿ ಟ್ರಿಪ್‌ಗಳಿಗೆ ಸರ್ಕಾರಿ ನೌಕರರು ರಜೆ ಪ್ರಯಾಣ ವಿನಾಯಿತಿ ಕೇಳುವಂತಿಲ್ಲ: ಸುಪ್ರೀಂ ಕೋರ್ಟ್
ಮದುವೆಯಿಂದ ಜವಳಿ ಉದ್ಯಮಿಗಳು, ಚಿನ್ನದ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು, ಬ್ಯೂಟಿಷಿಯನ್ ಗಳು, ಫೋಟೋಗ್ರಾಫರ್ಸ್, ಇವೆಂಟ್ ಮ್ಯಾನೇಜ್ ಮೆಂಟ್, ಕೇಟರಿಂಗ್ ಹೀಗೆ ಅನೇಕ ವಲಯದ ಉದ್ಯಮಿಗಳ ವಹಿವಾಟು ಹೆಚ್ಚುತ್ತದೆ. ಮದುವೆ ನೋಡುಗರಿಗೆ ಒಂದು ಸಾಂಪ್ರದಾಯಿಕ ಕಾರ್ಯಕ್ರಮವಾಗಿದ್ದರೂ ಅದರ ಹಿಂದಿನ ಖರ್ಚು-ವೆಚ್ಚ ದೊಡ್ಡ ಮೊತ್ತದಾಗಿರುತ್ತದೆ. ಇತ್ತೀಚಿನ ದಿನಗಳಂತೂ ವಿವಾಹವನ್ನು ಅದ್ದೂರಿಯಾಗಿ ಆಚರಿಸುವ ಟ್ರೆಂಡ್ ಕೂಡ ಹೆಚ್ಚಿದೆ. ನಾಲ್ಕೈದು ದಿನಗಳ ಕಾಲ ಮದುವೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಹಳದಿ, ಮೆಹಂದಿ, ಮದುವೆ ರೆಸೆಪ್ಷನ್ ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಡೆಯುತ್ತವೆ.
