Business Idea : ಹತ್ತು ಸಾವಿರಕ್ಕಿಂತ ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಈ ಬ್ಯುಸಿನೆಸ್
ವ್ಯವಾಹರ ಶುರು ಮಾಡೋದು ಸುಲಭವಲ್ಲ. ಕೈ ಸುಟ್ಟುಕೊಳ್ಳುವ ಭಯ ಎಲ್ಲರಲ್ಲೂ ಇದ್ದೇ ಇರುತ್ತದೆ. ಇರುವ ಸಮಯದಲ್ಲಿ ಏನಾದ್ರೂ ಮಾಡ್ಬೇಕು ಎನ್ನುವವರು, ಮನೆಯಲ್ಲಿಯೇ ಅಲ್ಪಸ್ವಲ್ಪ ಬಂಡವಾಳ ಹಾಕಿ ಸಣ್ಣ ಬ್ಯುಸಿನೆಸ್ ಶುರು ಮಾಡ್ಬಹುದು.
ಸ್ವಂತ ವ್ಯಾಪಾರ ಶುರು ಮಾಡುವ ಕನಸನ್ನು ಅನೇಕರು ಹೊಂದಿರುತ್ತಾರೆ. ಯಾವ ವ್ಯಾಪಾರ ಶುರು ಮಾಡ್ಬೇಕು ಎನ್ನುವುದ್ರಿಂದ ಹಿಡಿದು ಬಂಡವಾಳ ಹೇಗೆ ಹೊಂದಿಸೋದು ಎನ್ನುವವರೆಗೆ ಚಿಂತೆ ಕಾಡುತ್ತದೆ. ಹಾಗೆಯೇ ಇದ್ದ ಕೆಲಸ ಬಿಟ್ಟು, ವ್ಯಾಪಾರಕ್ಕೆ ಇಳಿಯೋದು ಸುಲಭವಲ್ಲ. ಹೆಚ್ಚು ಬಂಡವಾಳ ಹೂಡಿಕೆ ಮಾಡಿ ನಷ್ಟವಾದ್ರೆ ಮುಂದೆ ಜೀವನ ಹೇಗೆ ಎಂಬ ಆಲೋಚನೆ ಅನೇಕರಿಗೆ ಭಯ ಹುಟ್ಟಿಸುತ್ತದೆ. ಇದೇ ಕಾರಣಕ್ಕೆ ಅವರು ವ್ಯಾಪಾರ ಕ್ಷೇತ್ರಕ್ಕೆ ಇಳಿಯುವ ಮನಸ್ಸು ಮಾಡೋದಿಲ್ಲ. ಆದ್ರೆ ನೀವು ಎಲ್ಲ ವ್ಯಾಪಾರಕ್ಕೂ ಹೆಚ್ಚು ಬಂಡವಾಳ ಹೂಡಿಕೆ ಮಾಡಬೇಕೆಂಬ ನಿಯಮವಿಲ್ಲ. ಕಡಿಮೆ ಬಂಡವಾಳದಲ್ಲಿಯೂ ವ್ಯವಹಾರ ಆರಂಭಿಸಬಹುದು. ನಿಮ್ಮ ಬಳಿ ಬರೀ 10 ಸಾವಿರವಿದ್ರೆ ಸಾಕು, ನೀವು ಬ್ಯುಸಿನೆಸ್ ಗೆ ಧುಮುಕಬಹುದು. ಕೆಲಸ ಬಿಡದೆ ಬಿಡುವಿನ ಸಮಯದಲ್ಲಿ ಕೂಡ ನೀವು ಈ ವ್ಯಾಪಾರ ಮಾಡಬಹುದು. ನಾವಿಂದು ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ವ್ಯವಹಾರಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
10 ಸಾವಿರ ರೂಪಾಯಿಗೆ ಶುರು ಮಾಡಿ ಈ ಬ್ಯುಸಿನೆಸ್ (Business) :
ಚಾಕ್ (Chalk ) ಪೀಸ್ ತಯಾರಿಸಿ ಹಣ ಗಳಿಸಿ : ಚಾಕ್ ಪೀಸ್ ಗೆ ಈಗ್ಲೂ ಬೇಡಿಕೆಯಿದೆ ಎಂಬುದನ್ನು ಮರೆಯಬೇಡಿ. ಇದನ್ನು ತಯಾರಿಸಲು ನಿಮಗೆ ಹೆಚ್ಚಿನ ಬಂಡವಾಳ ಬೇಕಾಗುವುದಿಲ್ಲ. ಇದನ್ನು ಮುಖ್ಯವಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಲಾಗುತ್ತದೆ. ಇದು ಬಿಳಿ ಬಣ್ಣದ ಪುಡಿ. ಇದು ಜಿಪ್ಸಮ್ ಎಂಬ ಕಲ್ಲಿನಿಂದ ತಯಾರಿಸಿದ ಮಣ್ಣಿನ ಒಂದು ವಿಧವಾಗಿದೆ. ಶಾಲಾ-ಕಾಲೇಜುಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಟೈಲರ್‌ಗಳು, ಪೀಠೋಪಕರಣ ತಯಾರಕರು, ನಿರ್ಮಾಣ ಕೆಲಸಗಾರರು ಮತ್ತು ಅನೇಕ ಕೈಗಾರಿಕೆಗಳು ಇದನ್ನು ಬಳಸುತ್ತವೆ. ನೀವು ಇದನ್ನು ಮನೆಯಲ್ಲಿಯೇ ಶುರು ಮಾಡಬಹುದು. ಇದಕ್ಕೆ ವ್ಯಾಪಾರ ಪರವಾನಿಗೆ ಪಡೆಯುವ ಅಗತ್ಯವಿರುತ್ತದೆ.
Government Schemes: ಹಿರಿಯ ನಾಗರಿಕರಿಗೆ ಈ ಯೋಜನೆ ಅಡಿ ಸರ್ಕಾರ ನೀಡುತ್ತೆ ಪಿಂಚಣಿ
ಕೋಚಿಂಗ್ (Coaching) ಇನ್ಸ್ಟಿಟ್ಯೂಟ್ : ಇತ್ತೀಚಿನ ದಿನಗಳಲ್ಲಿ ಟ್ಯೂಷನ್ ಮತ್ತು ಕೋಚಿಂಗ್ ಸಂಸ್ಥೆಗಳ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ನೀವು ವಿದ್ಯಾವಂತರಾಗಿದ್ದರೆ ಮತ್ತು ಕಡಿಮೆ ಹೂಡಿಕೆಯೊಂದಿಗೆ ವ್ಯಾಪಾರ ಶುರು ಮಾಡಲು ಬಯಸಿದರೆ ಕೋಚಿಂಗ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಿ. ಸದಾ ಬೇಡಿಕೆಯಲ್ಲಿರುವ ವ್ಯವಹಾರದಲ್ಲಿ ಇದು ಕೂಡ ಒಂದು.
ಮಿನರಲ್ ವಾಟರ್ (Mineral Water) ಸಪ್ಲೈಯರ್ : ಮಿನರಲ್ ವಾಟರ್ ಸಪ್ಲೈಯರ್ ವ್ಯವಹಾರ ಕೂಡ ಸದಾ ಬೇಡಿಕೆಯಲ್ಲಿರುವ ಹಾಗೂ ಕಡಿಮೆ ಬಜೆಟ್ ನಲ್ಲಿ ಶುರು ಮಾಡಬಹುದಾದ ವ್ಯವಹಾರವಾಗಿದೆ. ಈ ವ್ಯವಹಾರಕ್ಕೆ ಕೇವಲ 2 ಜನರ ಅಗತ್ಯವಿರುತ್ತದೆ. ಮನೆಯ ಸುತ್ತಮುತ್ತಲೂ ನೀವು ಸುಲಭವಾಗಿ ಈ ವ್ಯಾಪಾರವನ್ನು ಮಾಡಬಹುದು.
ಬ್ಯಾಗ್ (Bag), ಪರ್ಸ್ (Purse) ತಯಾರಿಸುವ ಬ್ಯುಸಿನೆಸ್ : ಇದನ್ನು ಕೂಡ ನೀವು ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದು. ನಿಮ್ಮ ಬಳಿ ಈಗಾಗಲೇ ಹೊಲಿಕೆ ಮಶಿನ್ ಇದ್ದಲ್ಲಿ ನಾನಾ ರೀತಿಯ ಬ್ಯಾಗ್ ಹಾಗೂ ಪರ್ಸ್ ತಯಾರಿಸಿ ಮಾರಾಟ ಮಾಡಬಹುದು. ಕೈನಲ್ಲಿ ತಯಾರಿಸಿದ ಪರ್ಸ್ ಗಳಿಗೆ ಈಗ ಬೇಡಿಕೆ ಹೆಚ್ಚಿದೆ.
ಮಹಿಳೆಯರೂ ಬಳಸ್ಬೇಕು Credit Card: ಇದರಿಂದ ಸಿಗಲಿದೆ ಹಲವಾರು ಲಾಭ
ಹರಿದ ಬಟ್ಟೆ ರಿಪೇರಿ (Repair) : ಇತ್ತೀಚಿನ ದಿನಗಳಲ್ಲಿ ಬಟ್ಟೆ ಹೊಲಿಯುವವರ ಸಂಖ್ಯೆ ಹೆಚ್ಚಿದೆ. ಆದ್ರೆ ಹರಿದ ಬಟ್ಟೆಗೆ ಹೊಲಿಗೆ ಹಾಕುವ ಹಾಗೆ ಫಿಟ್ಟಿಂಗ್ ಸೇರಿದಂತೆ ಸಣ್ಣಪುಟ್ಟ ರಿಪೇರಿ ಮಾಡುವವರು ಸಿಗೋದಿಲ್ಲ. ನೀವು ಮನೆಯಲ್ಲಿಯೇ ಈ ಕೆಲಸ ಶುರು ಮಾಡಬಹುದು. ಬಿಡುವಿನ ಸಮಯದಲ್ಲಿ ಹರಿದ ಬಟ್ಟೆಗೆ ಹೊಲಿಗೆ ಹಾಕಿ ಕೊಡಬಹುದು. ಸೆಕೆಂಡ್ ಹ್ಯಾಂಡ್ ಹೊಲಿಗೆ ಮಶಿನ್ ಇದ್ದರೂ ನೀವು ಈ ವ್ಯವಹಾರವನ್ನು ಶುರು ಮಾಡಬಹುದು. ಇದಕ್ಕೆ ಹೆಚ್ಚಿನ ಬಂಡವಾಳ ಅಗತ್ಯವಿಲ್ಲ.