1 ಲಕ್ಷ ರೂ SIP ಇದ್ದರೆ ಅದೇ ಈಗಿನ ಸಂಪತ್ತು, ಯುವ ಸಮೂಹಕ್ಕೆ ರಾಧಿಕಾ ಗುಪ್ತಾ ಹೂಡಿಕೆ ಸಲಹೆ!
ಸಂಪತ್ತನ್ನು ಈ ಹಿಂದೆ ನಿವೇಷನ, ಕಟ್ಟಡಗಳಿಂದಲೇ ಅಳೆಯಲಾಗುತ್ತಿತ್ತು. ಆದರೆ ಇದೀಗ ಯುವ ಸಮೂಹದ ಬಾಯಿಯಲ್ಲಿ ನನ್ನಲ್ಲಿ 1 ಲಕ್ಷ ರೂಪಾಯಿ SIP ಇದೆ ಅನ್ನೋದು ಈಗಿನ ಸಂಪತ್ತು. ಯುವ ಸಮೂಹಕ್ಕೆ ಎಡೆಲ್‌ವಿಸ್ ಸಿಇಒ ರಾಧಿಕಾ ಗುಪ್ತಾ ಮಹತ್ವದ ಸಲಹೆ ನೀಡಿದ್ದಾರೆ.
ನವದೆಹಲಿ(ಸೆ.19) ಜನರು ಸಣ್ಣ ಸಣ್ಣ ಹೂಡಿಕೆ, ಪಿಂಚಣಿ ಯೋಜನೆ, ಮ್ಯೂಚ್ಯುವಲ್ ಫಂಡ್, ಷೇರು ಮಾರುಕಟ್ಟೆ, ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಿ ಭವಿಷ್ಯವನ್ನು ಸುಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಬದಲಾವಣೆ ಹಾಗೂ ಹೂಡಿಕೆ ಕುರಿತು ಎಡೆಲ್‌ವಿಸ್ ಕಂಪನಿ ಸಿಇಒ ರಾಧಿಕಾ ಗುಪ್ತಾ ಮಹತ್ವದ ಸಲಹೆ ನೀಡಿದ್ದಾರೆ. ಯುವ ಸಮೂಹದಲ್ಲಿ ಎಷ್ಟು ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಇದೆ ಅನ್ನೋದಲ್ಲ, ಹಿಂದೆ ನಿಷೇಷನ, ಕಟ್ಟಡಗಳಲ್ಲಿ ಸಂಪತ್ತು ಅಳೆಯಲಾಗುತ್ತಿತ್ತು. ಆದರೆ ಈಗ SIP ಇದೆ ಅಂದರೆ ಅದೆ ಸಂಪತ್ತು. ಯುವ ಸಮೂಹದ ಬಾಯಲ್ಲಿ ಈ ಮಾತನ್ನು ಕೇಳಲು ಇಷ್ಟಪಡುತ್ತೇನೆ ಎಂದು ರಾಧಿಕಾ ಗುಪ್ತಾ ಹೇಳಿದ್ದಾರೆ.
ನಾನು ಬಂದ ದೆಹಲಿ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಒಂದು ಕಾಲದಲ್ಲಿ, ಶ್ರೀಮಂತಿಕೆಯನ್ನು ನಿಮ್ಮಲ್ಲಿ ಎಷ್ಟು ಆಸ್ತಿಗಳಿವೆ ಅನ್ನೋದರ ಮೇಲೆ ಅಳೆಯಲಾಗುತ್ತಿತ್ತು. ಅಂದರೆ ಫ್ಲ್ಯಾಟ್, ಮನೆ, ಕಟ್ಟಡ, ನಿವೇಷನಗಳೇ ಸಂಪತ್ತಿನ ಪ್ರಮುಖ ಅಳೆಯುವ ಆಧಾರಗಳಾಗಿತ್ತು. ಆದರೆ ಇದೀಗ ಶ್ರೀಮಂತಿಕೆ, ಸಂಪತ್ತು ಅಳೆಯುವುದು SIP(ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್) ಮೂಲಕ. ಈಗ ಯುವ ಸಮೂಹದ ಬಾಯಲ್ಲಿ, ನನ್ನ ಬಳಿ ತಿಂಗಳಿಗೆ 1 ಲಕ್ಷ ರೂ ಎಸ್ಐಪಿ ಇದೆ ಎಂದು ಕೇಳಲು ನಾನು ಬಯಸುತ್ತೇನೆ. ನಿಮ್ಮಲ್ಲಿದೆಯಾ ಎಂದು ರಾಧಿಕಾ ಗುಪ್ತಾ ಮಹತ್ವದ ಹೂಡಿಕೆ ಸಲಹೆ ನೀಡಿದ್ದಾರೆ.
ದೆಹಲಿ ಪ್ರವಾಹ; ಮೆಟ್ರೋ ಸವಾರಿಯಲ್ಲಿ ಕಚೇರಿಗೆ ತೆರಳಿದ ಶಾರ್ಕ್ ಟ್ಯಾಂಕ್‌ನ ರಾಧಿಕಾ ಗುಪ್ತಾಗೆ ಮೆಚ್ಚುಗೆ
ದೇಶದ ಅತೀ ದೊಡ್ಡ ಮ್ಯೂಚ್ಯುವಲ್ ಫಂಡ್ ಕಂಪನಿ ಎಡಲ್‌ವಿಸ್ ಸಿಇಒ ರಾಧಿಕಾ ಗುಪ್ತಾ ಯುವ ಸಮೂಹಕ್ಕೆ ಹೂಡಿಕೆ ಹಾಗೂ ಆರ್ಥಿಕತೆ ಶಿಸ್ತು ಸಲಹೆ ನೀಡಿದ್ದಾರೆ. ಮ್ಯೂಚ್ಯುವಲ್ ಫಂಡ್‌ನ ಎಸ್ಐಪಿ ಮೂಲಕ ಹೂಡಿಕೆ ಮಾಡಿ ಆರ್ಥಿಕವಾಗಿ ಸಶಕ್ತರಾಗಲು ಸಾಧ್ಯವಿದೆ. ಇದಕ್ಕೆ ದೊಡ್ಡ ಮೊತ್ತದ ಬಂಡವಾಳ ಅಗತ್ಯವಿಲ್ಲ. ಸಣ್ಣ ಮೊತ್ತದ ಮೂಲಕ ಹೂಡಿಕೆ ಮಾಡಿದ ಸುಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ರಾಧಿಕಾ ಗುಪ್ತಾ ಹೇಳಿದ್ದಾರೆ.
ಹೂಡಿಕೆದಾರರು ಒಂದು ನಿಗಿದಿತ ಮೊತ್ತವನ್ನು ಮ್ಯೂಚ್ಯುವಲ್ ಫಂಡ್ ಎಸ್ಐಪಿ ಮೂಲಕ ಹೂಡಿಕೆ ಮಾಡಿದರೆ ಮಾರುಕಟ್ಟೆಯ ಎರಿಳಿತದ ನಡುವೆ ನಿಗದಿತ ಮೊತ್ತವನ್ನು ವೃದ್ಧಿಸಲು ಸಾಧ್ಯವಿದೆ. ಇತ್ತೀಚೆಗೆ ರಾಧಿಕಾ ಗುಪ್ತಾ ಎಸ್ಐಪಿ ಮೂಲಕ ಸುಲಭ ಮೊತ್ತದ ಹೂಡಿಕೆ ಮಾಡಲು ಸಲಹೆ ನೀಡಿದ್ದರು. ಸಣ್ಣ ಮೊತ್ತದ ಹೂಡಿಕೆಯಿಂದ ಆರಂಭಿಸುವಂತೆ ಸೂಚಿಸಿದ್ದರು. ಎಸ್ಐಪಿ ನಿಮ್ಮ ಹೂಡಿಕೆ ಆಯ್ಕೆಯಲ್ಲಿರಲಿ ಎಂದಿದ್ದರು.
ಶಾರ್ಕ್ ಟ್ಯಾಂಕ್ ಇಂಡಿಯಾ 3 ಜಡ್ಜ್ ಕ್ವಾಲಿಫಿಕೇಶನ್ ಏನು?