Asianet Suvarna News Asianet Suvarna News

22 ರಾಜ್ಯದಲ್ಲಿ ನಮ್ಮ ಉದ್ದಿಮೆ ಇದೆ, ಎಲ್ಲೆಡೆ ಬಿಜೆಪಿ ಇಲ್ಲ: ಅದಾನಿ

ನಾವು 22 ರಾಜ್ಯಗಳಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ ಹಾಗೂ ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿಯಷ್ಟೇ ಆಡಳಿತದಲ್ಲಿಲ್ಲ ಎಂದು ವಿಶ್ವದ ಮೂರನೇ ಶ್ರೀಮಂತ ಗೌತಮ್‌ ಅದಾನಿ ಹೇಳಿದ್ದಾರೆ.  

We have industry in 22 states, everywhere bjp is not in power Businessman Gowtam Adani akb
Author
First Published Jan 8, 2023, 8:07 AM IST

ನವದೆಹಲಿ: ನಾವು 22 ರಾಜ್ಯಗಳಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ ಹಾಗೂ ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿಯಷ್ಟೇ ಆಡಳಿತದಲ್ಲಿಲ್ಲ ಎಂದು ವಿಶ್ವದ ಮೂರನೇ ಶ್ರೀಮಂತ ಗೌತಮ್‌ ಅದಾನಿ ಹೇಳಿದ್ದಾರೆ.  ಇಂಡಿಯಾ ಟೀವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅದಾನಿ, ಈ ಮೂಲಕ ತಾವು ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ನಿಕಟವಾಗಿರುವ ಮೂಲಕ ಉತ್ತಮ ಬಿಸಿನೆಸ್‌ ಮಾಡುತ್ತಿದ್ದಾರೆ ಎಂಬ ಟೀಕೆಗೆಗಳನ್ನು ಅಲ್ಲಗಳೆದಿದ್ದಾರೆ.

ಯಾವುದೇ ಸರ್ಕಾರದೊಂದಿಗೂ ನಮಗೆ ಯಾವುದೇ ತೊಂದರೆಯಿಲ್ಲ. ನಾವು ಎಡಪಂಥೀಯ ಆಡಳಿತವಿರುವ ಕೇರಳ, ಮಮತಾ ಬ್ಯಾನರ್ಜಿ, ನವೀನ್‌ ಪಟ್ನಾಯಕ್‌, ಅಲ್ಲದೇ ಜಗನ್ಮೋಹನ ರೆಡ್ಡಿ, ಕೆಸಿಆರ್‌ ಆಡಳಿತ ಇರುವ ರಾಜ್ಯಗಳು ಸೇರಿದಂತೆ ಒಟ್ಟು 22 ರಾಜ್ಯಗಳಲ್ಲಿ ಗರಿಷ್ಠ ಬಂಡವಾಳ ಹೂಡಿಕೆ ಮಾಡಿದ್ದೇವೆ. ಅದಾನಿ ಗ್ರೂಪ್‌ ಅಲ್ಲೆಲ್ಲ ವ್ಯಾಪಾರ ನಡೆಸುತ್ತಿರುವುದು ನಮಗೆ ಖುಷಿ ಇದೆ ಎಂದಿದ್ದಾರೆ.

Forbes 100 Richest Indians: ಅದಾನಿ, ಅಂಬಾನಿ, ಧಮಾನಿ ಭಾರತದ ಟಾಪ್‌ 3 ಶ್ರೀಮಂತರು: ಕರ್ನಾಟಕದ 10 ಮಂದಿಗೆ ಸ್ಥಾನ

ದೇಶದ ನಂ. 1 ಶ್ರೀಮಂತ ಗೌತಮ್‌ ಅದಾನಿ ಪತ್ನಿಯ ಲೈಫ್‌ಸ್ಟೈಲ್ ಹೇಗಿದೆ?

Follow Us:
Download App:
  • android
  • ios