ಲಂಡನ್[ಜೂ.12]: ಲಂಡನ್ ರೈಲ್ವೇ ನಿಲ್ದಾಣದಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಇಲ್ಲಿನ ಬಿಟ್ ಕಾಯಿನ್ ಎಟಿಎಂ ಮಶೀನ್ ನಿಂದ ನೋಡ ನೋಡುತ್ತಿದ್ದಂತೆಯೇ 20 ಪೌಂಡ್ ನ ನೋಟುಗಳು ಹೊರ ಬರಲಾರಂಭಿಸಿವೆ. ರೆಡಿಟ್ ನಲ್ಲಿ ಈ ವಿಡಿಯೋ ಭಾರೀ ವೈರಲ್ ಆಘಿದೆ. ಲಂಡನ್ ನ ಬಾಂಡ್ ಸ್ಟ್ರೀಟ್ ಟ್ಯೂಬ್ ಸ್ಟೇಷನ್ ನಲ್ಲಿ ನಡೆದ ಈ ಘಟನೆಯ 20 ಸೆಕೆಂಡ್ ನ ಈ ವಿಡಿಯೋ ಬಹುತೇಕರು ಶೇರ್ ಮಾಡಿಕೊಂಡಿದ್ದಾರೆ.

ಹಣ  ಹೊರ ಬರುತ್ತಿರುವುದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್ ಸೇರಿದ್ದ ಜನರು ಹತ್ತಿರ ಸುಳಿಯದಂತೆ ತಡೆಯುತ್ತಿದ್ದರೆ, ಮತ್ತೊಬ್ಬ ವ್ಯಕ್ತಿ ಹೊರ ಬಿದ್ದ ನೋಟುಗಳನ್ನು ಒಟ್ಟುಗೂಡಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮಶೀನ್ ನಲ್ಲಿ ಜಾಕ್ ಪಾಟ್ ಬಗ್ ಕಾಣಿಸಿಕೊಂಡ ಪರಿಣಾಮ ಹಣ ಇದ್ದಕ್ಕಿದ್ದಂತೆ ಹೊರಬರಲಾರಂಭಿಸಿದೆ ಎನ್ನಲಾಗಿದೆ.