ಪೇಟಿಎಂನಲ್ಲಿ ಹೂಡಿಕೆ ಮಾಡಲು ಮುಂದಾದ ಬಫೆಟ್! 2500 ಕೋಟಿ ರೂ. ಹೂಡಿಕೆಗೆ ಬಫೆಟ್ ಚಿಂತನೆ! ಪೇಟಿಎಂ ಜೊತೆ ಮಾತುಕತೆಯಲ್ಲಿ ಬರ್ಕ್‌ಶೈರ್ ಹ್ಯಾಥ್‌ವೇ ಕಂಪನಿ!  ಶೇ.3ರಿಂದ ಶೇ.4ರಷ್ಟು ಷೇರುಗಳ ಖರೀದಿಗೆ ಬಫೆಟ್ ಉತ್ಸುಕ 

ವಾಷಿಂಗ್ಟನ್(ಆ.28): ಮೊಬೈಲ್ ಮೂಲಕ ಹಣ ಪಾವತಿ ಹಾಗೂ ಆನ್‌ಲೈನ್ ಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಪೇಟಿಎಂ ಕಂಪನಿಯಲ್ಲಿ 2500 ಕೋಟಿ ರೂ. ಹೂಡಿಕೆ ಮಾಡಲು ವಿಶ್ವವಿಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ನಿರ್ಧರಿಸಿದ್ದಾರೆ.

ವಾರೆನ್ ಬಫೆಟ್ ಒಡೆತನದ ಬರ್ಕ್‌ಶೈರ್ ಹ್ಯಾಥ್‌ವೇ ಕಂಪನಿ ಮಾತುಕತೆಯಲ್ಲಿ ನಿರತವಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ, ದೇಶದಲ್ಲಿ ಬಫೆಟ್ ಕಂಪನಿ ಮಾಡಿದ ಮೊದಲ ನೇರ ಹೂಡಿಕೆಯಾಗಿರಲಿದೆ. 

ಪೇಟಿಎಂ ಕಂಪನಿಯ ಮೌಲ್ಯ 70 ಸಾವಿರ ಕೋಟಿ ರೂ.ನಷ್ಟಿದ್ದು, ಅದರಲ್ಲಿ ಶೇ.3ರಿಂದ ಶೇ.4ರಷ್ಟು ಷೇರುಗಳನ್ನು ಖರೀದಿಸಲು ಬರ್ಕ್‌ಶೈರ್ ಉತ್ಸುಕವಾಗಿದೆ.