ಮಧ್ಯಪ್ರಾಚ್ಯ ಯುದ್ಧ ತೀವ್ರಗೊಂಡು ಕಚ್ಚಾತೈಲದ ಬೆಲೆ ಗಗನಕ್ಕೇರಿದ ಬೆನ್ನಲ್ಲೇ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರೀಮಿಯಂ ಪೆಟ್ರೋಲ್‌ ದರವನ್ನು ಲೀಗೆ.2 ರು.ನಿಂದ 2.35 ರು.ವರೆಗೆ ಮತ್ತು ಕೈಗಾರಿಕಾ ಡೀಸೆಲ್‌ ದರವನ್ನು 22 ರು. ಹೆಚ್ಚಿಸಿವೆ

ನವದೆಹಲಿ: ಮಧ್ಯಪ್ರಾಚ್ಯ ಯುದ್ಧ ತೀವ್ರಗೊಂಡು ಕಚ್ಚಾತೈಲದ ಬೆಲೆ ಗಗನಕ್ಕೇರಿದ ಬೆನ್ನಲ್ಲೇ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರೀಮಿಯಂ ಪೆಟ್ರೋಲ್‌ ದರವನ್ನು ಲೀಗೆ.2 ರು.ನಿಂದ 2.35 ರು.ವರೆಗೆ ಮತ್ತು ಕೈಗಾರಿಕಾ ಡೀಸೆಲ್‌ ದರವನ್ನು 22 ರು. ಹೆಚ್ಚಿಸಿವೆ. ಆದರೆ ಸಾಮಾನ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರವನ್ನು 50 ರು. ಮತ್ತು ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು 115 ರು. ಹೆಚ್ಚಳ ಮಾಡಿದ ಬೆನ್ನಲ್ಲೇ ತೈಲ ಕಂಪನಿಗಳು ಈ ಹೆಚ್ಚಳ ಮಾಡಿವೆ.

ಮಧ್ಯಪ್ರಾಚ್ಯ ಯುದ್ಧ ಆರಂಭವಾದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಶೇ.60ರಷ್ಟು ಏರಿಕೆ ಕಂಡಿದೆ. ಬ್ಯಾರಲ್‌ಗೆ 70 ಡಾಲರ್‌ ಆಸುಪಾಸು ಇದ್ದ ದರ ಇದೀಗ 120ರ ಗಡಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಕನಿಷ್ಠ 95 ದೇಶಗಳು ತಮ್ಮ ತಮ್ಮ ದೇಶಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಮಾಡಿವೆ. ಆದರೆ ಭಾರತ ಸರ್ಕಾರ, ಸದ್ಯ ಪ್ರೀಮಿಯಂ ಪೆಟ್ರೋಲ್‌ ದರ, ಕೈಗಾರಿಕಾ ಡೀಸೆಲ್‌ಗಳ ದರ ಮಾತ್ರ ಏರಿಕೆ ಮಾಡಿದೆ.

ಪ್ರೀಮಿಯಂ ಪೆಟ್ರೋಲ್‌:

ಇದು ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ ಹೆಚ್ಚು ಗುಣಮಟ್ಟ ಹೊಂದಿರುತ್ತದೆ. ಎಂಜಿನ್‌ ಬಾಳ್ವಿಕೆ ಮತ್ತು ಹೆಚ್ಚಿನ ಮೈಲೇಜ್‌ ಕೂಡಾ ನೀಡುತ್ತದೆ. ಭಾರತ ಪೆಟ್ರೋಲಿಯಂ ಸ್ಪೀಡ್‌ ಹೆಸರಲ್ಲಿ, ಐಒಸಿ ಎಕ್ಸ್‌ಪಿ 95 ಮತ್ತು ಹೆಚ್‌ಪಿ ಕಂಪನಿಗಳು ಪವರ್‌ ಹೆಸರಲ್ಲಿ ಈ ಉತ್ಪನ್ನಗಳು ಮಾರಾಟ ಮಾಡುತ್ತಿವೆ.

ಕೈಗಾರಿಕಾ ಡೀಸೆಲ್‌:

ಕೈಗಾರಿಕೆಗಳಿಗೆ ಬಳಸಲಾಗುವ ಡೀಸೆಲ್‌ ದರವನ್ನು ಲೀಟರ್‌ಗೆ ಸುಮಾರು 22 ರು. ಹೆಚ್ಚಿಸಲಾಗಿದೆ. ಇದರಿಂದ ದೆಹಲಿಯಲ್ಲಿ ಕೈಗಾರಿಕಾ ಡೀಸೆಲ್‌ ಬೆಲೆ ಲೀ.ಗೆ 87.67 ರು.ನಿಂದ 109.59 ರು.ಗೆ ಏರಿಕೆಯಾಗಿದೆ.