ನವದೆಹಲಿ (ನ. 05): ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ ಸಂಸ್ಥೆಗಳನ್ನು ವಿಲೀನ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಎರಡೂ ಸಂಸ್ಥೆಗಳ ವಿರುದ್ಧ ದಿವಾಳಿ ಕ್ರಮ ಕೈಗೊಳ್ಳುವಂತೆ ಕೋರಿಕೆ ಇಡಲು ಎರಡೂ ಸಂಸ್ಥೆಗಳಿಗೆ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಕಂಪನಿಗಳು ಮುಂದಾಗಿವೆ.

ಈ ಎರಡೂ ಸಂಸ್ಥೆಗಳು ಪೂರೈಕೆದಾರರಿಗೆ 20 ಸಾವಿರ ಕೋಟಿಗೂ ಅಧಿಕ ಹಣವನ್ನು ಪಾವತಿ ಮಾಡಲು ಬಾಕಿ ಇದ್ದು, ಬ್ಯಾಂಕ್‌ಗಳು ಸಾಲ ಪಾವತಿ ಮಾಡಲು ಒತ್ತಡ ಹಾಕುತ್ತಿವೆ. ಈ ಬಗ್ಗೆ ಈ ಮೇಲ್‌ ಮಾಡಿದರೂ, ಈವರೆಗೆ ಯಾವುದೇ ಪ್ರತಿಕ್ರೀಯೆ ಬಂದಿಲ್ಲ.

ನಿರಾಳ ತಂದ ಮೋದಿ ಘೋಷಣೆ: ಸಾಗರದಾಚೆಯಿಂದ ಸಿಹಿ ಸುದ್ದಿ ಕೊಟ್ಟ ಪ್ರಧಾನಿ!

ನವೆಂಬರ್‌ 19ರಂದು ಎಲ್ಲಾ ನಾವೆಲ್ಲರೂ ಪ್ರತಿಭಟನೆ ನಡೆಸಲಿದ್ದು, ಹತ್ತು ದಿನದೊಳಗಾಗಿ ಹಣ ಪಾವತಿ ಮಾಡದೇ ಇದ್ದರೆ ಎರಡೂ ಕಂಪನಿಗಳು ಮುಚ್ಚಬೇಕು ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿಗೆ ಮನವಿ ಮಾಡಲಾಗುವುದು ಎಂದು ಪೂರೈಕೆದಾರರು ಎಚ್ಚರಿಸಿದ್ದಾರೆ.

ಟೆಲಿಕಾಂ ಗೇರ್‌ ಪೂರೈಕೆದಾರರಿಗೆ ಈ ಎರಡೂ ಕಂಪನಿಗಳು 20 ಸಾವಿರ ಕೋಟಿ ರು. ಹಾಗೂ ಗ್ರಾಮೀಣ ಬ್ರಾಂಡ್‌ ಬ್ಯಾಂಡ್‌ ಪ್ರಾಜೆಕ್ಟ್ನಡಿ ಭಾರತ್‌ ನೆಟ್‌ಗೆ 45 ಸಾವಿರ ಕೋಟಿ ಪಾವತಿ ಮಾಡಲು ಬಾಕಿ ಇದೆ ಎಂದು ಪಿಎಚ್‌ಡಿ ಚೇಂಬರ್‌ ಆಫ್‌ ಕಾಮರ್ಸ್‌ನ ಟೆಲಿಕಾಂ ಸಮಿತಿ ಚೇರ್ಮಾನ್‌ ಸಂದೀಪ್‌ ಅಗರ್ವಾಲ್‌ ಹೇಳಿದ್ದಾರೆ.

ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: