ಭಾರತ RCEP ಭಾಗವಾಗುವುದಿಲ್ಲ ಎಂದು ಘೋಷಿಸಿದ ಪ್ರಧಾನಿ ಮೋದಿ! ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(RCEP) ಭಾರತಕ್ಕೆ ಮಾರಕ ಎಂದ ಪ್ರಧಾನಿ| ಆರ್‌ಸಿಇಪಿ ಒಪ್ಪಿದ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂದ ಮೋದಿ| 'ಭಾರತೀಯರ ಹಿತಾಸಕ್ತಿಗೆ ಸಂಬಂಧಿಸಿದಂತೆ ಆರ್‌ಸಿಇಪಿ ಒಪ್ಪಂದ ಅಳೆಯಲು ಸಾಧ್ಯವಿಲ್ಲ'| ಪ್ಪಂದದಲ್ಲಿರುವ ಸುಂಕ ನೀತಿಯನ್ನು ಕಟುವಾಗಿ ವಿರೋಧಿಸಿದ ಪ್ರಧಾನಿ|

ನವದೆಹಲಿ(ನ.04): ಭಾರತ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(RCEP) ಭಾಗವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಆರ್‌ಸಿಇಪಿ ಒಪ್ಪಂದದ ಪ್ರಸ್ತುತ ರೂಪ ಮೂಲ ಮನೋಭಾವ ಮತ್ತು ಈ ಹಿಂದೆ ಒಪ್ಪಿದ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

Scroll to load tweet…

ಭಾರತೀಯರ ಹಿತಾಸಕ್ತಿಗೆ ಸಂಬಂಧಿಸಿದಂತೆ ಆರ್‌ಸಿಇಪಿ ಒಪ್ಪಂದವನ್ನು ಅಳೆದರೆ ಸಕಾರಾತ್ಮಕ ಉತ್ತರ ಸಿಗುವುದಿಲ್ಲ ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ ಹೇಳಿದ್ದಾರೆ.

ಒಂದು ವೇಳೆ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದರೆ ಭಾರತೀಯ ಮಾರುಕಟ್ಟೆಯಲ್ಲಿ ಚೀನಿ ವಸ್ತುಗಳದ್ದೇ ದರ್ಬಾರು ಶುರುವಾಗುವ ಭೀತಿ ಇದೆ. ಇದು ದೇಶದ ರೈತ, ಕಾರ್ಮಿಕ ವರ್ಗಕ್ಕೆ ಒಳ್ಳೆಯದಲ್ಲ ಎಂದು ಮೋದಿ ಅಭಿಪ್ರಾಯಪಟ್ಟರು.

Scroll to load tweet…

ಒಪ್ಪಂದದಲ್ಲಿರುವ ಸುಂಕ ನೀತಿಯನ್ನು ಕಟುವಾಗಿ ವಿರೋಧಿಸಿರುವ ಪ್ರಧಾನಿ ಮೋದಿ, ಇದು ಭಾರತಕ್ಕೆ ಮಾರಕವಾದ ಒಪ್ಪಂದ ಎಂಬುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ ಎಂದು ಚುಚ್ಚಿದರು.

ಒಟ್ಟು 16 ರಾಷ್ಟ್ರಗಳ ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದವಾಗಿರುವ ಆರ್‌ಸಿಇಪಿಗೆ, ಭಾರತ ಸಹಿ ಮಾಡಬಾರದು ಎಂದು ವಿಪಕ್ಷಗಳು ಒಕ್ಕೊರಲಿನಿಂದ ಮೋದಿ ಸರ್ಕಾರವನ್ನು ಆಗ್ರಹಿಸಿದ್ದವು.

Scroll to load tweet…