ಮಕ್ಕಳ ಮತ್ತು ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಡ್ತಿದೆಯಾ ದಾಂಡೇಲಿಯ ಆಸ್ಪತ್ರೆಗಳು!?

ಶಾಲಾ ಮಕ್ಕಳು ಹಾಗೂ ಜನರ ಜೀವದ ಜತೆ ದಾಂಡೇಲಿಯ ಆಸ್ಪತ್ರೆಗಳು ಚೆಲ್ಲಾಟವಾಡ್ತಿದ್ಯಾ..? ಎಂಬ ಪ್ರಶ್ನೆ ಎದುರಾಗಿದೆ.

hospitals garbages dumps in public roads at Dandeli in uttara kannada kannada news gow

ವರದಿ: ಭರತ್ ರಾಜ್ ಕಲ್ಲಡ್ಕ ಏಷ್ಯಾನೆಟ್ ಸುವರ್ಣನ್ಯೂಸ್

ಉತ್ತರ ಕನ್ನಡ (ಜೂ.19): ಶಾಲಾ ಮಕ್ಕಳು ಹಾಗೂ ಜನರ ಜೀವದ ಜತೆ ದಾಂಡೇಲಿಯ ಆಸ್ಪತ್ರೆಗಳು ಚೆಲ್ಲಾಟವಾಡ್ತಿದ್ಯಾ..? ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ದಾಂಡೇಲಿಯ ಜೆ.ಎನ್.ರೋಡ್‌ನಲ್ಲಿ ರಸ್ತೆ ಬದಿಯಲ್ಲೇ ರಾಶಿ ಹಾಕಲಾಗುತ್ತಿರುವ ಮೆಡಿಕಲ್ ವೇಸ್ಟೇಜ್. ಶಾಲಾ ಮಕ್ಕಳು, ಸಾರ್ವಜನಿಕರು ಸಾಗುವ ದಾರಿಯ ಬದಿಯಲ್ಲೇ ಮೆಡಿಕಲ್ ವೇಸ್ಟೇಜ್‌ಗಳನ್ನು ಡಂಪ್ ಮಾಡಲಾಗುತ್ತಿದ್ದು, ಬಳಕೆಯಾದ ಸೂಜಿಗಳನ್ನು ಹೊಂದಿರುವ ಸಿರಿಂಜ್‌ಗಳು, ಟ್ಯಾಬ್ಲೆಟ್‌ಗಳು, ಗ್ಲೂಕೋಸ್ ಬಾಟಲ್ ಹಾಗೂ ಡೇಟ್ ಬಾರ್ ಔಷಧಿಗಳು ರಸ್ತೆ ಬದಿಗಳಲ್ಲೇ ರಾಶಿ ಹಾಕಲಾಗುತ್ತಿದೆ.

ನಾಳೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ, ಬಿಜೆಪಿಗೆ ಶೆಟ್ಟರ್ ಟಕ್ಕರ್,

ಅಲ್ಲದೇ, ರಸ್ತೆ ಬದಿಯಲ್ಲೇ ಮೆಡಿಕಲ್ ವೇಸ್ಟ್‌ಗಳನ್ನು ಸುಟ್ಟು ಮಕ್ಕಳು, ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಡಲಾಗುತ್ತಿದೆ. ದಾಂಡೇಲಿ ನಗರಸಭೆಯ ಕಂಪೌಂಡ್ ಹಿಂದಿರುವ ಜೆ.ಎನ್.ರೋಡ್‌ನಲ್ಲೇ ಮೆಡಿಕಲ್ ವೇಸ್ಟ್‌ಗಳನ್ನು ರಾಶಿ ಹಾಕಿ ಸುಡಲಾಗ್ತಿದ್ದರೂ, ದಾಂಡೇಲಿ ನಗರಸಭೆ, ತಾಲೂಕಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ನೋಡಿದ್ರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕೃತ್ಯಗಳಿಗೆ ಸಾಥ್ ನೀಡ್ತಿದ್ದಾರೆಯೇ ಎಂಬ ಗುಮಾನಿಗಳು ಮೂಡುತ್ತಿವೆ. ಮೆಡಿಕಲ್ ವೇಸ್ಟ್ ರಾಶಿ ಹಾಕುವ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ರೋಟರಿ ಸ್ಕೂಲ್, ಪಶು ಆಸ್ಪತ್ರೆಯಿದ್ದರೆ,
200 ಮೀಟರ್ ದೂರದಲ್ಲಿ ಸರಕಾರಿ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ, ದಾಂಡೇಲಿ ನಗರಸಭೆ ಹಾಗೂ ನ್ಯಾಯಾಲಯದ‌ ಕಟ್ಟಡವಿದೆ. 

ಅಲ್ಲದೇ, ಸುಮಾರು 500 ಮೀಟರ್ ದೂರದಲ್ಲಿ ಖಾಸಗಿ ಆಸ್ಪತ್ರೆಗಳ ಸಾಲುಗಳಿವೆ. ಮೆಡಿಕಲ್ ವೇಸ್ಟೇಜ್‌ಗಳನ್ನು ಹಾಕುವ ರಸ್ತೆಯಲ್ಲೇ ಶಾಲಾ ಮಕ್ಕಳು ಸಾಗುವುದರಿಂದ ಇಲ್ಲಿ ರಾಶಿ ಹಾಕುವ ಸೂಜಿ ಇರುವ ಸಿರಿಂಜ್‌ಗಳನ್ನು ಮಕ್ಕಳು ಆಟವಾಡಲು ಎತ್ತಿಕೊಂಡು ಹೋದಲ್ಲಿ ಅಥವಾ ಮಕ್ಕಳಿಗೆ ತಾಗಿದಲ್ಲಿ ಯಾರು‌ ಹೊಣೆ...? ಅಲ್ಲದೇ, ಇಲ್ಲೇ ಮೆಡಿಕಲ್ ವೇಸ್ಟೇಜ್‌ಗಳನ್ನು ಸುಡಲಾಗ್ತಿರೋದ್ರಿಂದ ಇದರ ವಿಷಾನಿಲ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದಲ್ಲಿ ಯಾರು ಜವಾಬ್ದಾರಿ..? ಎಂದು ಸಾರ್ವಜನಿಕರು ಪ್ರಶ್ನಿಸಲಾರಂಭಿಸಿದ್ದಾರೆ.

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಶಾಕ್ ಕೊಟ್ಟ ಕೋರ್ಟ್!

ರಸ್ತೆ ಬದಿಯಲ್ಲೇ ಮೆಡಿಕಲ್ ವೇಸ್ಟ್ ರಾಶಿ ಹಾಕಿ ಸುಡುವ ಕಳ್ಳರು ಯಾರು..? ಇದು ಸರಕಾರಿ ಆಸ್ಪತ್ರೆಗಳ ಕೃತ್ಯವೋ ಅಥವಾ ಖಾಸಗಿ ಆಸ್ಪತ್ರೆಗಳ ಕೃತ್ಯವೋ ಎಂದು ದಾಂಡೇಲಿ ತಾಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ‌. ಅಲ್ಲದೇ, ಜನರ ಜೀವದ ಜತೆ ಚೆಲ್ಲಾಟವಾಡುವವರ ವಿರುದ್ಧ ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. 

Latest Videos
Follow Us:
Download App:
  • android
  • ios