ನವದೆಹಲಿ(ಏ.30): ಕೊರೋನಾ ವೈರಸ್‌ ಪಿಡುಗು ಕೊನೆಗೊಂಡ ಬಳಿಕ ಚೀನಾದಲ್ಲಿರುವ ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತ ಪರಾರ‍ಯಯ ಹೂಡಿಕೆ ತಾಣವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ.

ಇದಕ್ಕೆ ಪೂರಕ ಎಂಬಂತೆ ಅಮೆರಿಕದ ವಿದೇಶಾಂಗ ಇಲಾಖೆ ಹಾಗೂ ಭಾರತದಲ್ಲಿರುವ ಅಮೆರಿಕನ್‌ ಕೈಗಾರಿಕಾ ಉಕ್ಕೂಟದ ಸಭೆಯ ವೇಳೆ ಚೀನಾದಿಂದ ಉದ್ದಿಮೆಗಳ ಸ್ಥಳಾಂತರಕ್ಕೆ ಭಾರತವೇ ಸಂಭಾವ್ಯ ಸ್ಥಳ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರಸ್ತುತ ಚೀನಾ ಕೈಗಾರಿಕಾ ಚಟುವಟಿಕೆಗಳ ಕೇಂದ್ರ ಎನಿಸಿಕೊಂಡಿದೆ. ಆದರೆ ಭಾರತವು ಚೀನಾದ ಸ್ಥಾನವನ್ನು ವೇಗವಾಗಿ ತುಂಬಬಲ್ಲದು ಎಂದು ಅಮೆರಿಕ ವಿದೇಶಾಂಗ ಇಲಾಖೆಯ ದಕ್ಷಿಣ ಏಷ್ಯಾ ಸಹಾಯಕ ಕಾರ್ಯದರ್ಶಿ ಥಾಮಸ್‌ ವಾಜ್ದಾ ಅವರು ಸಭೆಯಲ್ಲಿ ಭಾಗಿಯಾಗಿದ್ದ ಕೈಗಾರಿಕಾ ಮುಖಸ್ಥರಿಗೆ ತಿಳಿಸಿದ್ದಾರೆ. ತನ್ಮೂಲಕ ಭಾರತದ ಪರ ಬೆಂಬಲವಾಗಿದ್ದಾರೆ.

ಮೂರೇ ವಾರದಲ್ಲಿ ಪಿಎಂ ಮೋದಿ ಅನ್‌ಫಾಲೋ ಮಾಡಿದ ವೈಟ್‌ಹೌಸ್!, ಕಾರಣವೇನು?

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಭಾರತ ವಿದೇಶಿ ಬಂಡವಾಳ ಹೂಡಿಕೆಯನ್ನು ಎದುರು ನೋಡುತ್ತಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಆಶಾವಾದ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಭಾರತ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲWಳು ತಿಳಿಸಿವೆ.