'ಮಿತ್ರ' ಟ್ರಂಪ್‌ರಿಂದಲೇ ಭಾರತದ ರುಪಾಯಿ ಮೇಲೆ ಗದಾಪ್ರಹಾರ!

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಹಲವು ಕಾರ್ಯಾದೇಶಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಭಾರತದ ಮೇಲೆ ನಕಾರಾತ್ಮಕ ಪರಿಣಾಮ ಹಲವು ಅಂಶಗಳಿವೆ. ಇದರಲ್ಲಿ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ಹೇರುವ, ಡಾಲರ್ ಮೌಲ್ಯವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳುವ, ಬ್ರಿಕ್ಸ್ ದೇಶಗಳ ಪರ್ಯಾಯ ಕರೆನ್ಸಿ ಜಾರಿಗೊಳಿಸಿದರೆ ಆ ಬಗ್ಗೆ ಕ್ರಮ ಕೈಗೊಳ್ಳುವ ಎಚ್ಚರಿಕೆಯ ಅಂಶಗಳಿವೆ. 

US President Donald Trump Likely 100 Percent Tax to  Indian Goods

ವಾಷಿಂಗ್ಟನ್(ಜ.22):  ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದ 'ಭಾರತದ ಮಿತ್ರ' ಡೊನಾಲ್ಡ್ ಟ್ರಂಪ್ ಮೊದಲೇ ದಿನವೇ ಭಾರತಕ್ಕೆ ಶಾಕ್ ನೀಡಿದ್ದಾರೆ. 

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಹಲವು ಕಾರ್ಯಾದೇಶಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಭಾರತದ ಮೇಲೆ ನಕಾರಾತ್ಮಕ ಪರಿಣಾಮ ಹಲವು ಅಂಶಗಳಿವೆ. ಇದರಲ್ಲಿ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ಹೇರುವ, ಡಾಲರ್ ಮೌಲ್ಯವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳುವ, ಬ್ರಿಕ್ಸ್ ದೇಶಗಳ ಪರ್ಯಾಯ ಕರೆನ್ಸಿ ಜಾರಿಗೊಳಿಸಿದರೆ ಆ ಬಗ್ಗೆ ಕ್ರಮ ಕೈಗೊಳ್ಳುವ ಎಚ್ಚರಿಕೆಯ ಅಂಶಗಳಿವೆ. ಮತ್ತು ಬ್ರಿಕ್ಸ್ ದೇಶಗಳು ಡಾಲರ್‌ಗೆ ಪರ್ಯಾಯವಾಗಿ ತಮ್ಮದೇ ಹೊಸ ಕರೆನ್ಸಿ ಆರಂಭಿಸುವ ಕುರಿತು ಚರ್ಚಿಸುತ್ತಿರುವ ಹೊತ್ತಿನಲ್ಲೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. 

ಷೇರುಪೇಟೆಗೆ ಟ್ರಂಪ್‌ ಹೊಡೆತ: 7 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಸೆನ್ಸೆಕ್ಸ್

ಭಾರತದ ವಸ್ತುಗಳಿಗೆ ಶೇ.100 ತೆರಿಗೆ?: 

'ಭಾರತ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಶೇ 100ರಷ್ಟು ಸುಂಕ ವಿಧಿಸಬಹುದು. ಏಕೆಂದರೆ ಆ ದೇಶಗಳು ಅಮೆರಿಕದ ವಸ್ತುಗಳಿಗೆ ಭಾರಿ ತೆರಿಗೆ ಹಾಕುತ್ತಿವೆ. ಮುಂದೆ ನಾವೂ ಇದನ್ನೇ ಮಾಡಬೇಕಾದೀತು' ಎಂದು ಟ್ರಂಪ್ ಹೇಳಿದರು. ಈ ಕ್ರಮವು ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ವ್ಯಾಪಾರ ಸಂಬಂಧಗಳ ಮೇಲೆ ಪ್ರಮುಖ ಪರಿಣಾಮ ಬೀರಬಹುದಾಗಿದೆ. 

ಭಾರತವು ಅಮೆರಿಕದ ವಸ್ತುಗಳಿಗೆ ದುಪ್ಪಟ್ಟು ತೆರಿಗೆ ವಿಧಿಸುವುದನ್ನು ಹಿಂದೆಯೇ ಟ್ರಂಪ್ ವಿರೋಧಿಸಿದ್ದರು ಹಾಗೂ ಅಮೆರಿಕವೂ ಹೀಗೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಅಲ್ಲದೆ ಬ್ರಿಕ್ಸ್ ದೇಶಗಳು ಡಾಲರ್‌ಗೆ ಪರ್ಯಾಯ ಕರೆನ್ಸಿ ಆರಂಭಿಸುವುದನ್ನೂ ಅವರು ವಿರೋಧಿಸಿದ್ದರು. ಈಗ ಅದನ್ನೇ ಪುನರುಚ್ಚರಿಸಿದ್ದಾರೆ. 

ಜನ್ಮಸಿದ್ಧ ಪೌರತ್ವ ಹಕ್ಕು ರದ್ದು: 

ಟ್ರಂಪ್ ಮುಂದಿನ ದಿನಗಳಲ್ಲಿ ಜನ್ಮಸಿದ್ಧ ಪೌರತ್ವ ಹಕ್ಕು ರದ್ದುಗೊಳಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೇವಲ ತಮ್ಮ ಮಕ್ಕಳಿಗೆ ಅಮೆರಿಕ ಪೌರತ್ವ ಕೊಡಿಸಲೆಂದು, ವಿದೇಶಿಗರು ಅಮೆರಿಕದಲ್ಲಿ ಜನ್ಮ ನೀಡುವ ಪದ್ಧತಿ ಅನು ಸರಿಸತೊಡಗಿದ್ದಾರೆ ಎಂಬ ಕಾರಣ ನೀಡಿ ಅವರು ಈ ಕ್ರಮ ಪ್ರಕಟಿಸಿದ್ದಾರೆ. 

ಈ ಕ್ರಮ ಜರುಗಿಸಿದರೆ ಅಮೆರಿಕದಲ್ಲಿ ಕೆಲಸದಲ್ಲಿರುವ ಭಾರತೀಯರಿಗೆ ಆತಂಕ ಉಂಟಾಗುವುದು ಖಚಿತವಾಗಿದೆ. ಏಕೆಂದರೆ ಭಾರತೀಯ ದಂಪತಿಗಳಿಗೆ ಅಲ್ಲಿ ಮಗುವಾದರೆ ಆ ಮಗುವಿಗೆ ತನ್ನಿಂತಾನೇ ಅಮೆರಿಕ ಪೌರತ್ವ ಸಿಗದು. ಇದು ಭಾರತೀಯರಿಗೆ ಸಾಕಷ್ಟು ಸಮಸ್ಯೆ ತರುವ ವಿಷಯವಾಗಿದೆ. 

ಪೌರತ್ವಕ್ಕೆ ಹೊಸದಾಗಿ ಅರ್ಜಿ ಹಾಕಬೇಕಾಗಬಹುದು. ಅರ್ಜಿ ಮಂಜೂರಾಗುವವರೆಗೆ ಮಗುವನ್ನು ಅವರು ಭಾರತದಲ್ಲೇ ಬಿಟ್ಟು ಬರಬೇಕಾದ ಸ್ಥಿತಿ ಉಂಟಾಗಲಿದೆ. ಅಮೆರಿಕದಲ್ಲಿ ಈಗ 54 ಲಕ್ಷ ಭಾರತೀ ಯರಿದ್ದಾರೆ. ಇವರಲ್ಲಿ ಶೇ.66ರಷ್ಟು ಜನ ರ ವಲಸಿಗರಾಗಿದ್ದಾರೆ. ಶೇ.34 ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ. ಈ ನಡುವೆ ಟ್ರಂಪ್‌ರ ಈ ಕ್ರಮ ತಡೆಗೆ ದಾವೆ ಹೂಡುವೆ ಎಂದು ನ್ಯೂಜೆರ್ಸಿ ಅಟಾರ್ನಿ ಜನರಲ್ ಹೇಳಿದ್ದಾರೆ.

ಏನಿದು ಹೊಸ ಜಂಪ್ ಡೆಪಾಸಿಟ್ ವಂಚನೆ, ಶುರುವಾಗಿದೆ ಯುಪಿಐ ಪೇಮೆಂಟ್ ಸ್ಕ್ಯಾಮ್!

ಸೆನ್ಸೆಕ್ಸ್‌ ಗೆ ಟ್ರಂಪ್ ಶಾಕ್: 1235 ಅಂಕಗಳ ಕುಸಿತ

ಮುಂಬೈ: ಅಮೆರಿಕ ಅಧ್ಯಕ್ಷರಾಗಿ ಟ್ರಂಪ್‌ ಅಧಿಕಾರ ಸ್ವೀಕ ರಿಸಿದ ಬೆನ್ನಲ್ಲೇ ಸೆನೆಕ್ ಮಂಗಳವಾರ 1,235 ಅಂಕ ಕುಸಿದು 75838 ಅಂಕದಲ್ಲಿ ಕೊನೆಗೊಂಡಿತು. ಇದು 7 ತಿಂಗಳ ಕನಿಷ್ಠ ಮಟ್ಟವಾಗಿದೆ.

ರುಪಾಯಿ ಮೌಲ್ಯ 13 ಪೈಸೆ ಕುಸಿದು 86.58ಕ್ಕೆ ಇಳಿಕೆ 

ಮುಂಬೈ: ಮಂಗಳವಾರ ಡಾಲರ್ ಎದುರು ರುಪಾಯಿ ಮೌಲ್ಯ 13 ಪೈಸೆಯಷ್ಟು ಭಾರೀ ಕುಸಿತ ಕಂಡು 86.58ರಲ್ಲಿ ಅಂತ್ಯವಾಗಿದೆ.

Latest Videos
Follow Us:
Download App:
  • android
  • ios