Asianet Suvarna News Asianet Suvarna News

ಫಿಲ್ಮ್‌ ಸಿಟಿಯಲ್ಲಿ ಬೆಳ್ಳಿ ಹಬ್ಬ ಸಮಾರಂಭ, ಐರನ್‌ ಕೇಜ್‌ನಲ್ಲಿ ಸಾಹಸಕ್ಕಿಳಿದ ವಿಸ್ಟೆಕ್ಸ್ ಕಂಪನಿ ಸಿಇಒ ಸಾವು!

ಅಮೆರಿಕ ಮೂಲಕ ಕಂಪನಿ ವಿಸ್ಟೆಕ್ಸ್‌ನ ಭಾರತೀಯ ಸಿಇಒ ಆಗಿದ್ದ ಸಂಜಯ್‌ ಸಿಂಗ್‌, ಕಂಪನಿಯ ಬೆಳ್ಳಿ ಹಬ್ಬ ಸಮಾರಂಭದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಸಾವು ಕಂಡಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ.
 

US based firm Vistex Indian CEO of falls to death at Ramoji Film City in Hyderabad san
Author
First Published Jan 20, 2024, 11:06 AM IST

ಹೈದರಾಬಾದ್‌ (ಜ.20): ಅಮೆರಿಕದ ಮೂಲದ ಖಾಸಗಿ ಕಂಪನಿ ಸಂಜಯ್‌ ಷಾ, ರಾಮೋಜಿ ಫಿಲ್ಮ್‌ ಸಿಟಿಯಲ್ಲಿ  ಶುಕ್ರವಾರ ನಡೆದ ಕಂಪನಿಯ ಬೆಳ್ಳಿ ಹಬ್ಬ ಸಮಾರಂಭದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಸಾವು ಕಂಡಿದ್ದಾರೆ. ಕಂಪನಿಯ ಇನ್ನೊಬ್ಬ ಉನ್ನತ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳ್ಳಿ ಹಬ್ಬ ಸಮಾರಂಭದಲ್ಲಿ ಇಡಲಾಗಿದ್ದ ಐರನ್‌ ಕೇಜ್‌ನ ಕಬ್ಬಿಣದ ಸರಳು ಮುರಿದು ಕುಸಿದು ಬಿದ್ದಿತ್ತು. ಈ ಘಟನೆಯಲ್ಲಿ ಸಿಇಒ ಸಂಜಯ್‌ ಷಾ ಸಾವು ಕಂಡಿದ್ದಾರೆ. ಅಮೆರಿಕ ಮೂಲದ ಸಾಫ್ಟ್‌ವೇರ್‌ ಕಂಪನಿ ವಿಸ್ಟೆಕ್ಸ್‌ನ ಮುಖ್ಯ ಕಾರ್ಯನಿವರ್ಹಣಾ ಅಧಿಕಾರಿಯಾಗಿದ್ದ ಸಂಜಯ್‌ ಷಾ ಹಾಗೂ ಕಂಪನಿಯ ಅಧ್ಯಕ್ಷರಾಗಿದ್ದ ರಾಜು  ದತ್ಲಾ, ಸಮಾರಂಭದಲ್ಲಿ ಇರಿಸಲಾಗಿದ್ದ ಕಬ್ಬಿಣದ ಪಂಜರದ ಒಳಗೆ ಪ್ರವೇಶಿಸಿದ್ದರು. ಗುರುವಾರ ಸಂಜೆ ಈ ಕಾರ್ಯಕ್ರಮ ನಡೆದಿತ್ತು. ಭಾರೀ ಎತ್ತರದಲ್ಲಿ ಇಡಲಾಗಿದ್ದ ಈ ಐರನ್‌ ಕೇಜ್‌ಅನ್ನು ಸಡನ್‌ ಆಗಿ ಕೆಳಗಿಳಿಸುವ ಆಟ ಇದಾಗಿತ್ತು. ಆದರೆ, ಈರನ್‌ ಕೇಜ್‌ಗೆ ಹಾಕಲಾಗಿದ್ದ ಕಬ್ಬಿಣದ ಚೈನು ತುಂಡಾಗಿದ್ದರಿಂದ ಕೇಜ್‌ ಕುಸಿದು ಬಿದ್ದಿತ್ತು. ಅದರೊಳಗಿದ್ದ ಇಬ್ಬರೂ ಮೇಲಿಂದ ಬಿದ್ದಿದ್ದರು.

ವಿಸ್ಟೆಕ್ಸ್ ತನ್ನ ಸಿಬ್ಬಂದಿಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಸತಿ ವ್ಯವಸ್ಥೆ ಮಾಡಿತ್ತು ಮತ್ತು ಬೆಳ್ಳಿ ಮಹೋತ್ಸವಕ್ಕಾಗಿ ಎರಡು ದಿನಗಳ ಆಚರಣೆಯನ್ನು ಯೋಜಿಸಿತ್ತು. "ಶಾ ಮತ್ತು ರಾಜು ಅವರನ್ನು ಪಂಜರದಿಂದ ವೇದಿಕೆಯ ಮೇಲೆ ಇಳಿಸುವುದು ಆಚರಣೆಗಳನ್ನು ಕಿಕ್‌ಸ್ಟಾರ್ಟ್ ಮಾಡಲು ಯೋಜಿಸಲಾಗಿದ್ದ ಕಾರ್ಯಕ್ರವಗಾಗಿತ್ತು' ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಈ ಹಂತದಲ್ಲಿ ಅಚಾನಕ್‌ ಆಗಿ, ಐರನ್‌ ಕೇಜ್‌ಗೆ ಜೋಡಿಸಲಾಗಿದ್ದ ಎರಡು ವೈರ್‌ಗಳು ತಪ್ಪಿ ಹೋಗಿದ್ದವು. ಇಬ್ಬರೂ ಕೂಡ ಅಂದಾಜು 15 ಫೀಟ್‌ ಎತ್ತರಿಂದ ಸಿಮೆಂಟ್‌ನ ವೇದಿಕೆಯ ಮೇಲೆ ಬಿದ್ದುಬಿಟ್ಟಿದ್ದರು. ಇದರಿಂದಾಗಿ ಇಬ್ಬರಿಗೂ ಗಂಭೀರ ಪ್ರಮಾಣದ ಗಾಯಗಳಾಗಿತ್ತು ಎಂದು ಅಬ್ದುಲ್ಲಾಪುರಮೆಟ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಡಿ ಕರುಣಾಕರ ರೆಡ್ಡಿ ತಿಳಿಸಿದ್ದಾರೆ.

ತಕ್ಷಣವೇ ಇಬ್ಬರಲ್ಲೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಯ ವೇಳೆಯೇ ಸಂಜಯ್‌ ಶಾ ಅಸುನೀಗಿದರೆ, ರಾಜು ದತ್ಲಾ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪರಿಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಂಪನಿಯ ಇನ್ನೊಬ್ಬ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಫಿಲ್ಮ್ ಸಿಟಿ ಈವೆಂಟ್ ಮ್ಯಾನೇಜ್‌ಮೆಂಟ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಸ್ಟೆಕ್ಸ್ ಆದಾಯ ನಿರ್ವಹಣೆ ಪರಿಹಾರಗಳು ಮತ್ತು ಸೇವೆಗಳಲ್ಲಿ ಪರಿಣತಿ ಹೊಂದಿರುವ ಇಲಿನಾಯ್ಸ್ ಮೂಲದ ಸಂಸ್ಥೆಯಾಗಿದೆ. 20 ಜಾಗತಿಕ ಕಚೇರಿಗಳು ಮತ್ತು 2,000 ಕ್ಕೂ ಹೆಚ್ಚು ಉದ್ಯೋಗಿಗಳೊಂದಿಗೆ, ಕಂಪನಿಯು ಜಿಎಂ, ಬರಿಲ್ಲಾ ಮತ್ತು ಬೇಯರ್‌ನಂತಹ ಪ್ರಮುಖ ಬ್ರಾಂಡ್‌ಗಳಿಗೆ ಸೇವೆ ಸಲ್ಲಿಸುತ್ತದೆ. ವಿಸ್ಟೆಕ್ಸ್‌ನ ಸಂಸ್ಥಾಪಕರಾದ ಷಾ ಅವರು ವಿಸ್ಟೆಕ್ಸ್ ಫೌಂಡೇಶನ್ ಮತ್ತು ವಿಸ್ಟೆಕ್ಸ್ ಇನ್‌ಸ್ಟಿಟ್ಯೂಟ್ ಫಾರ್ ಎಕ್ಸಿಕ್ಯುಟಿವ್ ಲರ್ನಿಂಗ್ ಅಂಡ್ ರಿಸರ್ಚ್ ಅನ್ನು ಲೇಹಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ್ದಾರೆ.

2000 ರಿಂದ ವಿಸ್ಟೆಕ್ಸ್‌ನೊಂದಿಗೆ ಇರುವ ರಾಜು ದತ್ಲಾ, ಸಂಸ್ಥೆಯ ಪರಿಹಾರ ವಿತರಣಾ ಸಾಮರ್ಥ್ಯಗಳನ್ನು ರೂಪಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕಂಪನಿಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios