Asianet Suvarna News Asianet Suvarna News

ಕೊರೋನಾ ಪರಿಣಾಮ; ಸಾರ್ವಕಾಲಿಕ ದಾಖಲೆ ಬರೆದ UPI ಪೇಮೆಂಟ್!

 ಪ್ರಧಾನಿ ನರೇಂದ್ರ ಮೋದಿ ಡಿಮಾನಿಟೈಸೇಶನ್ ಮಾಡಿ ಎಲ್ಲಾ ವ್ಯವಹಾರ ಡಿಜಿಟಲೀಕರಣ ಮಾಡಿದಾಗ ಹಲವರು ಟೀಕಿಸಿದ್ದರು. ಆದರೆ ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಜಪ್ಪಯ್ಯ ಅಂದ್ರು ನೋಟು ಕೈಯಲ್ಲಿ ಮುಟ್ಟುತ್ತಿಲ್ಲ. ಎಲ್ಲರಿಗೂ ಆನ್‌ಲೈನ್ ಪೇಮೆಂಟ್ ಮೂಲಕವೇ ವ್ಯವಹಾರ ನಡೆಸುತ್ತಿದ್ದಾರೆ. ಇದೀಗ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ಇದು ಸಾಬೀತಾಗಿದೆ. ಇಷ್ಟೇ ಅಲ್ಲ UPI ಪೇಮೆಂಟ್ ಸಾರ್ವಕಾಲಿಕ ದಾಖಲೆ ಬರೆದಿದೆ.

UPI payment India in June hit an all time record due to coronavirus pandemic
Author
Bengaluru, First Published Jul 2, 2020, 7:33 PM IST

ನವದೆಹಲಿ(ಜು.02): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಭಾರತದಲ್ಲಿ ಹಲವು ಬದಲಾವಣೆಗಳಾಗಿವೆ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಇಲ್ಲವಾದರೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಸಿವಿಕ್ ಸೆನ್ಸ್ ಇಲ್ಲದೆ ವರ್ತಿಸುವವರ ಸಂಖ್ಯೆ ಇಳಿಮುಖವಾಗಿದೆ. ಇಷ್ಟೇ ಅಲ್ಲ ಪ್ರಮುಖವಾಗಿ UPI ಪೇಮೆಂಟ್(ಆನ್‌ಲೈನ್ ಪೇಮೆಂಟ್) ಸಾರ್ವತ್ರಿಕ ದಾಖಲೆ ಬರೆದಿದೆ.

ನಾಳೆಯಿಂದ ಎಟಿಎಂ ಶುಲ್ಕ, ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಮರು ಜಾರಿ?.

ಕೊರೋನಾ ವೈರಸ್ ಭಾರತದಲ್ಲಿ ಅಬ್ಬರಿಸಲು ಆರಂಭಿಸಿದಾಗ ನಾಗರಿಕರು ಎಚ್ಚೆತ್ತುಕೊಂಡಿದ್ದಾರೆ. ನಗದು ವ್ಯವಹಾರ ಅದಷ್ಟು ಕಡಿಮೆ ಮಾಡಿದ್ದಾರೆ. ಎಲ್ಲವೂ ಡಿಜಿಟಲ್ ಪೇಮೆಂಟ್ ಮೂಲಕ ವ್ಯವಹಾರ ನಡೆಯುತ್ತಿದೆ. ವಸ್ತುಗಳ ಖರೀದಿ, ಹಣ ವರ್ಗಾವಣೆ, ಸ್ವೀಕರಣೆ ಸೇರಿದಂತೆ ಹಣದ ವ್ಯವಹಾರಗಳು UPI ಪೇಮೆಂಟ್ ಮೂಲಕ ನಡೆಯುತ್ತಿದೆ. ಭಾರತದಲ್ಲಿ ಕೊರೋನಾ ವೈರಸ್ ಬಳಿಕ UPI ಪೇಮೆಂಟ್ ಲಾಕ್‌ಡೌನ್ ಆರಂಭಿಕ ತಿಂಗಳಲ್ಲಿ 8.94 % ರಷ್ಟು ಏರಿಕೆ ಕಂಡಿದೆ.

ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಮುನ್ನ ತಿಳಿದುಕೊಳ್ಳಿ ಹೊಸ ನಿಯಮ!...

ಜೂನ್ ತಿಂಗಳಲ್ಲಿ UPI ಪೇಮೆಂಟ್ ದಾಖಲೆ ಬರೆದಿದೆ. ಜೂನ್ ತಿಂಗಳಲ್ಲಿ 2.62 ಲಕ್ಷ ಕೋಟಿ UPI ಪೇಮೆಂಟ್ ವ್ಯವಹಾರ ನಡೆದಿದೆ. ಇದು ಗರಿಷ್ಠ ದಾಖಲೆಯಾಗಿದೆ. ಮೇ ತಿಂಗಳಲ್ಲಿ 1.23 ಬಿಲಿಯನ್ ಇದ್ದ ವ್ಯವಹಾರ, ಎಪ್ರಿಲ್ ತಿಂಗಲಲ್ಲಿ 1.51 ಲಕ್ಷ ಕೋಟಿಯಾಗಿತ್ತು. 

NPCI ಇದೀಗ ಹೆಚ್ಚು ಸುರಕ್ಷತೆಯ ಪೇಮೆಂಟ್ ವಿಧಾನ ಅಳವಡಿಸಿದೆ. UPI 2.0 ಮೂಲಕ ನೂತನ ಪೇಮೆಂಟ್ ಜಾರಿಗೆ ತರುತ್ತಿದೆ.UPI 2.0 ನಲ್ಲಿ ಗ್ರಾಹಕರ ಪೇಮೆಂಟ್‌ಗೆ ಮತ್ತಷ್ಟು ಭದ್ರತೆ ಒದಗಿಸಲಾಗಿದೆ. 

Follow Us:
Download App:
  • android
  • ios