ನಾಳೆಯಿಂದ ಎಟಿಎಂ ಶುಲ್ಕ, ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಮರು ಜಾರಿ?| ಕೊರೋನಾ ವೈರಸ್‌ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ವಿನಾಯ್ತಿ ನೀಡಿದ್ದ ಕೇಂದ್ರ ಸರ್ಕಾರ

ನವದೆಹಲಿ(ಜೂ.30): ಕೊರೋನಾ ವೈರಸ್‌ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಕೇಂದ್ರ ಸರ್ಕಾರ ವಿನಾಯ್ತಿ ನೀಡಿದ್ದ ಎಟಿಎಂ ವ್ಯವಹಾರದ ಶುಲ್ಕ ಹಾಗೂ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇರಿಸದಿದ್ದರೆ ವಿಧಿಸುವ ಶುಲ್ಕ ಮುಂತಾದವು ಜು.1ರಿಂದ ಮತ್ತೆ ಜಾರಿಗೆ ಬರುವ ಸಾಧ್ಯತೆಯಿದೆ.

ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಮುನ್ನ ತಿಳಿದುಕೊಳ್ಳಿ ಹೊಸ ನಿಯಮ!

ಲಾಕ್‌ಡೌನ್‌ನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದರಿಂದ ಅವರಿಗೆ ನೆರವು ನೀಡುವ ಉದ್ದೇಶದಿಂದ ಮಾ.24ರಂದು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಕೆಲ ಉತ್ತೇಜನಾ ಕ್ರಮಗಳನ್ನು ಪ್ರಕಟಿಸಿದ್ದರು. ಅದರಂತೆ, ನಿರ್ದಿಷ್ಟಸಂಖ್ಯೆಯ ಎಟಿಎಂ ವ್ಯವಹಾರಗಳು ಮುಗಿದ ನಂತರ ಎಟಿಎಂಗಳಲ್ಲಿ ಗ್ರಾಹಕರು ಮಾಡುವ ವ್ಯವಹಾರಕ್ಕೆ ವಿಧಿಸುವ ಶುಲ್ಕವನ್ನು ಜೂ.30ರವರೆಗೆ ರದ್ದುಪಡಿಸಿದ್ದರು. ಹಾಗೆಯೇ, ಬ್ಯಾಂಕ್‌ ಖಾತೆಗಳಲ್ಲಿ ಕನಿಷ್ಠ ಹಣ ಇರಿಸದಿದ್ದರೆ ವಿಧಿಸುವ ಶುಲ್ಕವನ್ನೂ ರದ್ದುಪಡಿಸಿ, ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಡಿಜಿಟಲ್‌ ಪಾವತಿಗೆ ವಿಧಿಸುತ್ತಿದ್ದ ಶುಲ್ಕವನ್ನು ಇಳಿಕೆ ಮಾಡಲಾಗಿತ್ತು.

SBI ಗ್ರಾಹಕರೇ ಗಮನಿಸಿ, ಜುಲೈ 1 ರಿಂದ ATM ಹಣ ಪಡೆಯುವ ನಿಯಮ ಬದಲು!

ಇವುಗಳ ಅವಧಿ ಜೂ.30ಕ್ಕೆ ಅಂತ್ಯಗೊಳ್ಳುತ್ತಿದ್ದು, ಮತ್ತೆ ವಿಸ್ತರಿಸುವ ಬಗ್ಗೆ ಬ್ಯಾಂಕ್‌ಗಳಾಗಲೀ ಕೇಂದ್ರ ಸರ್ಕಾರವಾಗಲೀ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಹೀಗಾಗಿ ಪುನಃ ಶುಲ್ಕ ವಿಧಿಸುವ ವ್ಯವಸ್ಥೆ ಆರಂಭವಾಗುವ ಸಾಧ್ಯತೆಗಳಿವೆ.