Asianet Suvarna News Asianet Suvarna News

ವಾಣಿಜ್ಯ ಸಮರ ನಿಲ್ಲಿಸೋಣ: ಟ್ರಂಪ್-ಕ್ಸಿ ಅಂದ್ರು ಒಂದಾಗೋಣ!

ಅಂತೂ ಇಂತೂ ಒಂದಾಗಲು ಒಪ್ಪಿಕೊಂಡ ಅಮೆರಿಕ-ಚೀನಾ| ವಾಣಿಜ್ಯ ಸಮರಕ್ಕೆ ಇತಿಶ್ರೀ ಹಾಡಲು ಟ್ರಂಪ್-ಕ್ಸಿ ನಿರ್ಧಾರ| ವಾಣಿಜ್ಯ ಒಪ್ಪಂದಗಳ ಕುರಿತಾದ ಮಾತುಕತೆ ಪುನರಾರಂಭಿಸಲು ಒಪ್ಪಿಗೆ| ಜಿ-20 ಶೃಂಗಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಟ್ರಂಪ್-ಕ್ಸಿ|

United States and China Agree To Resume Trade Talks
Author
Bengaluru, First Published Jun 29, 2019, 4:30 PM IST

ಒಸಾಕಾ(ಜೂ.29): ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರಕ್ಕೆ ಇತಿಶ್ರೀ ಹಾಡಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮುಂದಾಗಿದ್ದಾರೆ.

ಜಪಾನ್’ನ ಒಸಾಕಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಟ್ರಂಪ್ ಮತ್ತು ಕ್ಸಿ, ದ್ವಿಪಕ್ಷೀಯ ಮಾತುಕತೆ ಮೂಲಕ ವಾಣಿಜ್ಯ ಸಮರ ನಿಲ್ಲಿಸುವ ಮುನ್ಸೂಚನೆ ನೀಡಿದ್ದಾರೆ. 

ಪರಸ್ಪರ ಭೇಟಿಯಾಧ ಉಭಯ ದೇಶಗಳ ನಾಯಕರು, ವಾಣಿಜ್ಯ ಸಮರಕ್ಕೆ ತಡೆಯೊಡ್ಡಲು ಮತ್ತೆ ಮಾತುಕತೆ ಪುನಾರಂಭಿಸಲು ಒಪ್ಪಿಕೊಂಡಿದ್ದಾರೆ.

ಚೀನಾದೊಂದಿಗೆ ವ್ಯಾಪಾರ ಮಾತುಕತೆಗಳು ಮತ್ತೆ ಪ್ರಾರಂಭವಾಗಲಿದ್ದು, ಹೊಸ ಸುಂಕಗಳನ್ನು ತಡೆಹಿಡಿಯಲು ಅಮೆರಿಕ ಒಪ್ಪಿಕೊಂಡಿದೆ  ಎಂದು ಹೇಳಲಾಗಿದೆ. 

ಮಾತುಕತೆ ಬಳಿಕ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷರೊಂದಿಗಿನ ಮಾತುಕತೆ ಫಲಪ್ರದವಾಗಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios