ವಾಷಿಂಗ್ಟನ್(ಆ.17): ಭಾರತದ ವಿರುದ್ಧ ತೊಡೆ ತಟ್ಟಿ ಜಾಗತಿಕ ವೇದಿಕೆಯಲ್ಲಿ ಪದೇ ಪದೇ ಅವಮಾನಕ್ಕೀಡಾಗುವುದು ಪಾಕಿಸ್ತಾನದ ಚಾಳಿ. 

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ನಿರ್ಣಯವನ್ನು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಶ್ನಿಸಿದ್ದ ಪಾಕಿಸ್ತಾನ ಕೈ ಸುಟ್ಟುಕೊಂಡಿದೆ.

ಇದೀಗ ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವಿನಲ್ಲಿ ಭಾರೀ ಕಡಿತ ಮಾಡುವ ಮೂಲಕ ಅಮೆರಿಕ ಆ ರಾಷ್ಟ್ರಕ್ಕೆ ಮತ್ತೊಂದು ಗುದ್ದು ನೀಡಿದೆ.

ಹೌದು, ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವಿನಲ್ಲಿ ಭಾರೀ ಕಡಿತ ಮಾಡಿರುವ ಅಮೆರಿಕ, ನಿರಂತರ ಆರ್ಥಿಕ ಸಹಾಯ ಸಾಧ್ಯವಿಲ್ಲ ಎಂದು ಸಂದೇಶ ರವಾನಿಸಿದೆ.

ಬರೋಬ್ಬರಿ  440 ಮಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ಸ್ಥಗಿತಗೊಳಿಸಿರುವ ಅಮೆರಿಕ, ಇದೀಗ ಪಾಕಿಸ್ತಾನಕ್ಕೆ ವಾರ್ಷಿಕ ಕೇವಲ 4.1 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ.

 2010ರ ಪಾಕಿಸ್ತಾನ ವರ್ಧಿತ ಪಾಲುದಾರಿಕೆ ಒಪ್ಪಂದ(PEPA)ಒಪ್ಪಂದದಡಿ ನೀಡಲಾಗುತ್ತಿದ್ದ ಧನ ಸಹಾಯದಲ್ಲಿ ಭಾರೀ ಕಡಿತ ಮಾಡಿರುವುದಾಗಿ ಅಮೆರಿಕ ಸ್ಪಷ್ಟಪಡಿಸಿದೆ.