Asianet Suvarna News Asianet Suvarna News

Rajeev Chandrashekhar: ದಾವಣಗೆರೆಯಲ್ಲಿ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಆಪ್ ಇಂಡಿಯಾ ಘಟಕ ಉದ್ಘಾಟನೆ

ದಾವಣಗೆರೆಯಲ್ಲಿ ರಾಜ್ಯದ ಐದನೇ  ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಆಪ್ ಇಂಡಿಯಾ ಘಟಕ ಉದ್ಘಾಟನೆಯಾಗಿದೆ. ಕೇಂದ್ರ ರಾಜ್ಯ ಸಚಿವರಾದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ  ಉದ್ಯಮಶೀಲತಾ ಸಚಿವರಾದ ಚಂದ್ರಶೇಖರ್‌ರವರು  ವರ್ಚುವಲ್ ಮೂಲಕ  ಉದ್ಘಾಟನೆ ಮಾಡಿದರು. 

Union Minister Rajeev Chandrasekhar Inaugurates Digital India Startup Hub At STPI Davanagere gvd
Author
First Published Nov 25, 2022, 9:27 PM IST

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ 

ದಾವಣಗೆರೆ (ನ.25): ದಾವಣಗೆರೆಯಲ್ಲಿ ರಾಜ್ಯದ ಐದನೇ  ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಆಪ್ ಇಂಡಿಯಾ ಘಟಕ ಉದ್ಘಾಟನೆಯಾಗಿದೆ. ಕೇಂದ್ರ ರಾಜ್ಯ ಸಚಿವರಾದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ  ಉದ್ಯಮಶೀಲತಾ ಸಚಿವರಾದ ಚಂದ್ರಶೇಖರ್‌ರವರು  ವರ್ಚುವಲ್ ಮೂಲಕ  ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು ಭಾರತ ಸಾಫ್ಟ್‌ವೇರ್‌ ಟೆಕ್ನಾಲಜಿಯಲ್ಲಿ ಜಗತ್ತಿನ‌ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದ್ರೆ ಕಳೆದ 5 ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಅಂಕಿ ಅಂಶ ಸಮೇತ ನೀಡಿದರು.   

ನಾವು 75 ನೇ ವರ್ಷದ ಅಮೃತ ಮಹೋತ್ಸವದಲ್ಲಿದ್ದೇವೆ. ಮೊನ್ನೆ ಮುಗಿದ  ಜಿ20 ಸಮ್ಮೇಳನ ನಡೆದಿದ್ದು ಅದರಲ್ಲಿ ಭಾರತ ನಾಯಕತ್ವ ವಹಿಸಿ ಸಮ್ಮೇಳನ ಯಶಸ್ವಿಯಾಗಿದೆ. ಕಳೆದ ಮೂರು ದಿನಗಳ ಹಿಂದೆ   ಇಂಡಿಯಾ ಗ್ಲೋಬಲ್ ಲೆವಲ್‌ನಲ್ಲಿ ಆರ್ಟಿಪಿಶಿಯಲ್ ಇಂಟಿಲಿಜನ್ಸ್ ನಲ್ಲಿ ನಾಯಕ ಸ್ಥಾನ ವಹಿಸಿದೆ. ಕೇಂದ್ರ ಸರ್ಕಾರ  ಡಿಜಿಟಲ್ ಟೆಕ್ನಾಲಜಿ, ಸ್ಟಾರ್ಟ್ ಅಪ್ ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮೋದಿಯವರು ಯುವ ಶಕ್ತಿಯಲ್ಲಿ ನಂಬಿಕೆಯನ್ನಿಟ್ಟು ಯೋಜನೆಗಳನ್ನು ರೂಪಿಸಿದ್ದಾರೆ.  ಡಿಜಿಟಿಲ್ ಟೆಕ್ನಾಲಜಿಯಲ್ಲಿ ಬಸವರಾಜ್ ಬೊಮ್ಮಾಯಿ ಸರ್ಕಾರ  ಉತ್ತಮ ಕೆಲಸ ಮಾಡುತ್ತಿದೆ ಬೆಂಗಳೂರು ಹೊರತಾಗಿ ಬೇರೆ ಜಿಲ್ಲಾ ಕೇಂದ್ರದ ಮಟ್ಟದಲ್ಲಿ ಟೆಕ್ನಾಲಜಿ ಬೆಳೆಯಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.

28ರಂದು ಕಾಂಗ್ರೆಸ್‌ನಿಂದ ಭಾರತ್‌ ಜೋಡೋ - ಸಂವಿಧಾನ ಬಚಾವೋ ಆಂದೋಲನ

ಮೋದಿಯವರ ವಿಜಿನ್ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸ್ಟಾರ್ಟ್ ಆಪ್‌ಗಳ ಸರಾಸರಿ ಸಂಖ್ಯೆ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ ಸಾಫ್ಟ್‌ವೇರ್‌ ರಪ್ತು ಗಣನೀಯವಾಗಿ ಹೆಚ್ಚಾಗಿದೆ. 2014 ರಲ್ಲಿ ಶೇ 92 ರಷ್ಟು ಇಂಪೋರ್ಟ್ ಇತ್ತು  2022 ರಲ್ಲಿ  ಶೇ  97 % ಮೊಬೈಲ್  ಬಳಕೆಯಾಗುತ್ತಿದೆ  ಮತ್ತು ಮೇಡ್ ಇನ್ ಇಂಡಿಯಾ ಆಗಿರುವುದು ಮೋದಿ ಸರ್ಕಾರದ  ಸಾಧನೆ.  2014ರಲ್ಲಿ ಎಕ್ಸಪೋರ್ಟ್ಸೊನ್ನೆ ಇತ್ತು. 2022 ರಲ್ಲಿ 70 ಸಾವಿರ ಕೋಟಿಯಷ್ಟು ಟೆಕ್ನಾಲಜಿ ಯುರೋಪ್ , ಅಪ್ರೀಕಾ ಯು ಎಸ್‌ಎ ಏಷ್ಯಾ ರಾಷ್ಟ್ರಗಳಿಗೆ ರಪ್ತುಆಗಿದೆ. ದಾವಣಗೆರೆಯಲ್ಲಿ ಸಾಫ್ಟ್‌ವೇರ್‌ ಟೆಕ್ ಆಗಲು ಸಂಸದ ಜಿ ಎಂ ಸಿದ್ದೇಶ್ವರ್  ಸಾಕಷ್ಟು ಶ್ರಮಿಸಿದ್ದಾರೆ ಅವರಿಗೆ ಧನ್ಯವಾದ ಎಂದರು.

ದಾವಣಗೆರೆ ಸಂಸದರಾದ ಜಿ ಎಂ ಸಿದ್ದೇಶ್ವರ್ ಮಾತನಾಡಿ ಸಾಫ್ಟ್‌ವೇರ್‌ ಪಾರ್ಕ್ ತರಲು 2015 ರಿಂದ ಪ್ರಯತ್ನ ನಡೆಸಿದ್ದೇನೆ. 2018ಕ್ಕೆ ರವಿಶಂಕರ್ ಪ್ರಸಾದ್ ಪರ್ಮಿಶನ್ ಕೊಟ್ಟರು‌. ದಾವಣಗೆರೆ ಜಿಲ್ಲಾಧಿಕಾರಿ ಎರಡು ಎಕರೆ ಜಮೀನು ಗುರುತಿಸಿ ಎಂದು ಹೇಳಿದೆ ಅದು ಆಗಿದೆ. ಸನ್ಮಾನ್ಯ ರಾಜೀವ ಚಂದ್ರಶೇಖರ್ ರಲ್ಲಿ ಮನವಿ ಮಾಡುವುದೇನೆಂದ್ರೆ ಕಟ್ಟಡಕ್ಕೆ ನೀವು ಹಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. ದಾವಣಗೆರೆಯಲ್ಲಿ ನಾಲ್ಕು ಇಂಜಿನಿಯರಿಂಗ್ ಕಾಲೇಜ್ ಗಳಿದ್ದು  ಪ್ರತಿಭಾವಂತ ವಿದ್ಯಾರ್ಥಿಗಳ ಪಡೆ ಇದ್ದು ಅವರಿಗೆ ಅನುಕೂಲ ಆಗುತ್ತೇ. ದಾವಣಗೆರೆಯಲ್ಲಿ ರಾಜ್ಯದ  ಐದನೇ ಸಾಫ್ಟ್‌ವೇರ್‌ ಘಟಕ ಉದ್ಘಾಟನೆ ಯಾಗುತ್ತಿದ್ದು ಇಂಡಸ್ಟ್ರೀಯಲ್ ಕಾರಿಡಾರ್ ಸಹ ಆಗುತ್ತಿದೆ. 

Davanagere: ನ.26ರಂದು ನಿವೃತ್ತ ಪಿಂಚಣಿ ನೌಕರರ ಸಮಾವೇಶ: ಕೆ.ಎಂ.ಮರುಳಸಿದ್ದಯ್ಯ

ಅಣಜಿ ಭಾಗದಲ್ಲಿ ಶೇ 80 ರಷ್ಟು ರೈತರು ಭೂಮಿ ಕೊಡಲು ಒಪ್ಪಿದ್ದಾರೆ. ಇದಕ್ಕೆ ಹೊಂದಿಕೊಂಡಂತೆ ದಾವಣಗೆರೆಯಲ್ಲಿ ಏರ್ ಪೋರ್ಟ್ ಆಗಬೇಕು ಅದಕ್ಕಾಗಿ ಭೂಸ್ವಾದೀನ ಪ್ರಕ್ರಿಯೆ ನಡೆಯುತ್ತಿದೆ. ಜನವರಿಯಲ್ಲಿ ಮೋದಿಯವರನ್ನು ಕರೆಸಿ ಉದ್ಘಾಟನೆ ಮಾಡಬೇಕೆಂದು ಅಂದುಕೊಂಡಿದ್ದೇವೆ ಅದು ಆಗುತ್ತದೆ  ಎಂದರು. ದಾವಣಗೆರೆಯಲ್ಲಿ ಸಾಫ್ಟ್‌ವೇರ್‌ ಪಾರ್ಕ್ ಮಾಡಲು ಒಂದು ಸಸಿ ನೆಟ್ಟಿದ್ದೇವೆ ಅದು ಹೆಮ್ಮರವಾಗುವ ವಿಶ್ವಾಸ ಇದೆ  ಎಂದರು. ನಾವು ಉಚಿತವಾಗಿ 10 ಸಾವಿರ ಚದುರ ಅಡಿ ಜಾಗ ನೀಡಿದ್ದೇವೆ ಮುಂದಿನ ದಿನಗಳಲ್ಲಿ 2 ಎಕರೆ ವಿಸ್ತೀರ್ಣದಲ್ಲಿ ಕೇಂದ್ರ ರಾಜ್ಯ ಸಚಿವರಾದ  ಚಂದ್ರಶೇಖರ್  ಉದ್ಘಾಟನೆಗೆ ಆಗಮಿಸಬೇಕೆಂದು ಮನವಿ ಮಾಡಿದರು.
 

Follow Us:
Download App:
  • android
  • ios